ಮೊಟ್ಟೆ ಎಸೆತ ಎಂಬ ಮುನಿರತ್ನನ ಪ್ರಯೋಜಿತ ಪ್ರಹಸನ

ಒಕ್ಕಲಿಗ ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿ ದಲಿತ ಸಮುದಾಯದ ನಿಂದನೆ ಮಾಡಿರುವ ಪ್ರಕರಣದ ಆಡಿಯೋ ಶಾಸಕ ಮುನಿರತ್ನನದ್ದೆ ಎಂದು ಸಾಬೀತಾಗಿದೆ. ಇದರಿಂದ ಬಂಧನ ಬೀತಿಯ ಜೊತೆಗೆ ಒಕ್ಕಲಿಗ ಸಮುದಾಯದ ಹಾಗೂ ಕ್ಷೇತ್ರದ ಜನರ ಸಂಪೂರ್ಣ ವಿರೋಧ ಕಟ್ಟಿಕೊಂಡಿರುವ ಈತ ತಾನು ಒಳ್ಳೆಯವನು ಎಂದು ಸಾಬೀತು ಪಡಿಸಿಕೊಳ್ಳಲು ಮತ್ತು ಜನರಲ್ಲಿ ಸಿಂಪತಿ ಕ್ರಿಯೇಟ್ ಮಾಡುವ ಉದ್ದೇಶದಿಂದ ತನ್ನ ಮೇಲೆಯೇ ಮೊಟ್ಟೆ ಹಾಕಿಕೊಡ್ಡಿದ್ದಾನೆ.

ವಿರೋಧಿಗಳ ಮೇಲೆ ಸುಳ್ಳು ದೂರು ದಾಖಲಿಸಿ, ಏಡ್ಸ್ ಟ್ರಾಪ್ ಮೂಲಕ ತನ್ನ ವಿರೋಧಿ ಜನಪ್ರತಿನಿಧಿಗಳ ಜೀವನ ಬೀದಿಗೆ ತಳ್ಳಿದ್ದ ಮುನಿರತ್ನ ತನ್ನವರಿಂದಲೇ ಮೊಟ್ಟೆ ಹಾಕಿಸಿಕೊಳ್ಳುವ ಮೂಲಕ ಮತ್ತೊಂದು ನಾಟಕ ಆರಂಭಿಸಿದ್ದಾನೆ.

ಮೊಟ್ಟೆ ಮುನಿರತ್ನನ ತಲೆ ಮೇಲೆ ಬೀಳುವ ಮುನ್ನವೇ ಆ್ಯಸಿಡ್ ದಾಳಿ.. ಆ್ಯಸಿಡ್ ದಾಳಿ.. ಎಂದು ಜೋರಾಗಿ ಕೂಗಿದ್ದಾರೆ. ಇದರ ಜೊತೆಗೆ ದಲಿತ ಯುವಕನ ಕಾರನ್ನು ಪುಟಿಗಟ್ಟಿ ಶಾಸಕನ ಕಾರಿನ ಮೇಲೆ ಎಂದು ಹೇಳಿಕೊಂಡಿದ್ದಾರೆ. ಇದು ಶಾಸಕ ಹಾಗೂ ಆತನ ತಂಡದ ಪ್ರಹಸಕ್ಕೆ ಕೈಗನ್ನಡಿ ಇದರ ಜೊತೆಗೆ ಹಲವು ಜನರ ಮೇಲೆ ಸುಳ್ಳು ಪ್ರಕರಣದ ದಾಖಲಿಸಲಾಗಿದೆ ಎಂದು ಲಗ್ಗೆರೆ ನಾರಾಯಣ ಸ್ವಾಮಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936