
ಕರ್ನಾಟಕ ರಿಪಬ್ಲಿಕನ್ ಸಂಘಟನೆ (KRS)ನ ನೂತನ ಸಂಘಟನೆ ಉದ್ಘಾಟನಾ ಸಮಾರಂಭ,ದಿನಾಂಕ 27-03-2024ರ ಬುಧವಾರ ಸಮಯ ಬೆಳಗ್ಗೆ 10-30ಕ್ಕೆ ಸ್ಥಳ: ಗಾಂಧೀಭವನ, ಶಿವಾನಂದ ಸರ್ಕಲ್, ಬೆಂಗಳೂರ್ ನಲ್ಲಿ, ಸನ್ಮಾನ್ಯ ಶ್ರೀ. ಡಾ॥ ಸುಭಾಷ್ ಭರಣಿರವರು, ಐ.ಪಿ.ಎಸ್. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ನಿವೃತ್ತ) ಕರ್ನಾಟಕ ಸರ್ಕಾರ ರವರು ಉದ್ಘಾಟನೆ ಮಾಡಿದರು, ಸನ್ಮಾನ್ಯ ಶ್ರೀ ಚೇತನ್ ಅಹಿಂಸಾರವರು. ಚಿಂತಕರು ಹಾಗೂ ಖ್ಯಾತ ಚಲನಚಿತ್ರ ನಟರ ಪ್ರಸ್ತುತದಲ್ಲಿ,ಸನ್ಮಾನ್ಯ ಶ್ರೀ ಬೆಳತೂರು ವೆಂಕಟೇಶ್‌ರವರು.ರಾಜ್ಯಾಧ್ಯಕ್ಷರು, ಕೆ.ಆರ್.ಎಸ್. ಬೆಂಗಳೂರು ರವರ ಆಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ಸ್ವತಂತ್ರ್ಯ ಬಂದು 76 ವರ್ಷಗಳು ಕಳೆದಿದೆ. ನಮ್ಮನ್ನು ಆಳಿದ ಎಲ್ಲಾ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರರವರು ಕಂಡಂತಹ ಕನಸು, ಕನಸಾಗಿ ಉಳಿದಿದೆ. ಅವರ ಕನಸು, ನನಸು ಮಾಡಲು ದಲಿತ ಚಳವಳಿಗಳು ಮನಸ್ಸು ಮಾಡಬೇಕಾಗಿದೆ.
ರಾಜ್ಯದಲ್ಲಿ ಅನೇಕ ಸಂಘಟನೆಗಳು, ಮೂಲ ಆಶಯಗಳನ್ನು ಮರೆತು ಬೇರೆ ಬೇರೆ ಆಯಾಮಗಳನ್ನು ಕಂಡುಕೊಂಡಿವೆ. ಇವೆಲ್ಲವನ್ನೂ ಮರೆತು ಒಂದಾಗಿ ಹೋಗುವ ದಿಕ್ಕಿನಲ್ಲಿ ಸಾಗಬೇಕಾಗಿದೆ.

ದಲಿತ ಕವಿ ಡಾ. ಸಿದ್ದಲಿಂಗಯ್ಯನವರು ಹೇಳಿದಂತೆ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ನಮ್ಮ ಹೋರಾಟ ಧಮನಿತರ ಪರವಾಗಿ, ಶೋಷಿತ, ಸಹಶೋಷಿತರ, ಕೂಲಿಕಾರ್ಮಿಕರ, ಮಹಿಳೆಯರ, ನಿರುದ್ಯೋಗಿ ಯುವಕರ ಪರವಾಗಿ ಸಂಘಟಿತ ಹೋರಾಟ ಮಾಡಬೇಕಾಗಿರುತ್ತದೆ. ಬುದ್ಧ, ಬಸವ, ಅಂಬೇಡ್ಕರವರ ವಿಚಾರಧಾರೆಯೊಂದಿಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಸಾಮಾಜಿಕ ರಾಜಕೀಯ ಇಚ್ಚಾಶಕ್ತಿಯೊಂದಿಗೆ ಸಮ ಸಮಾಜವನ್ನು ನಿರ್ಮಾಣ ಮಾಡಿ, ಹಸಿವು ಅವಮಾನ, ಅಸ್ಪೃಶ್ಯತೆ ಮುಕ್ತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಕೆ.ಆರ್.ಎಸ್. ನೂತನ ಸಂಘಟನೆಯ ಪರಿಚಯಿಸುವ ಸಹ ಉದ್ದೇಶದೊಂದಿಗೆ ರಾಜ್ಯಾಧ್ಯಕ್ಷರಾದ ಬೆಳತೂರು ವೆಂಕಟೇಶರವರ ನೇತೃತ್ವದಲ್ಲಿ ನಾಡಿನ ಸಮಸ್ತ ನಾಗರಿಕರ ಮೂಲಭೂತ ಹಕ್ಕುಗಳಿಗಾಗಿ ಶ್ರಮಿಸುವ ಪ್ರಾಮಾಣಿಕ ಪ್ರಯತ್ನದ ಸಲುವಾಗಿ ಸಂಘಟನೆಯ ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಿ, ಶುಭ ಹಾರೈಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ಮುಖಂಡರುಗಳು, ಪದಾಧಿಕಾರಿಗಳು,ಹಿರಿಯ ದಲಿತ ಮುಖಂಡರುಗಳು ಬಾಗವಹಿಸಿ ಯಶಸ್ವಿಗೊಳಿಸಿದರು.
City Today News 9341997936

You must be logged in to post a comment.