
“ಬೆಂಗಳೂರು ಚಲೋ ಚಳುವಳಿ”
ದಿನಾಂಕ 28-01-2025ನೇ ಮಂಗಳವಾರ ಬೆಳಿಗ್ಗೆ : 10–30ಕ್ಕೆ
ಐ.ಸಿ.ಡಿ.ಎಸ್. ಯೋಜನೆ ಪ್ರಾರಂಭವಾಗಿ 50 ವರ್ಷಆಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರು ನಗರದ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ
ದೇಶದಲ್ಲಿ ಮಹಿಳೆಯರು, ಮಕ್ಕಳು, ಗರ್ಭಿನಿಯರು, ಬಾಣಂತಿಯರು, ಕಿಶೋರಿಯರು ಎದುರಿಸಿರುತ್ತಿರುವ ಅಪೌಷ್ಟಿಕತೆ ರಕ್ತಹೀನತೆ, ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕುವ ಹಿನ್ನೆಲೆಯಲ್ಲಿ 1975 ಅಕ್ಟೋಬರ್ 2ರಂದು ಪ್ರಾರಂಭಿಸಲಾದ ಸಮಗ್ರಶಿಶು ಅಭಿವೃದ್ಧಿಯೋಜನೆಯ (ಐ.ಸಿ.ಡಿ.ಎಸ್) ಪರಿಣಾಮಕಾರಿಯಾಗಲು ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದೇವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ (ಐ.ಸಿ.ಡಿ.ಎಸ್) ಯೋಜನೆಯಲ್ಲಿ 3 ರಿಂದ 6ವರ್ಷದ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಪೂರಕ ಪೌಷ್ಠಿಕ ಆಹರ ವಿತರಣೆ ಮಕ್ಕಳಿಗೆ ಚುಚ್ಚು ಮದ್ದು ಕೊಡಿಸುವುದು. ಭಾಗ್ಯಲಕ್ಷ್ಮೀ ಅರ್ಜಿ ಹಾಗೂ ಮಾತೃವಂದನಾ ಅರ್ಜಿಯನ್ನು ಫಲಾನುಭವಿಗಳಿಗೆ ನೀಡುವುದು. ಬಿ.ಎಲ್.ಓ. ಕೆಲಸ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಪೋಷಣ್ ಟ್ರ್ಯಾಕರ್‌ನಲ್ಲಿ ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರ, ತೂಕ ಮತ್ತು ಎತ್ತರವನ್ನು ನಮೂದಿಸರುತ್ತಿದ್ದೇವೆ. ಈ ಹಿಂದೆ 2020, 21, 22ನೇ ಸಾಲಿನಲ್ಲಿ ಕರೋನ ವಾರಿಯರ್ಸ್ಗಳಾಗಿ ಜೀವದ ಹಂಗುತೋರೆದು ಅರೋಗ್ಯ ಇಲಾಕೆಯವರ ಜೊತೆ ಕೆಲಸ ನಿರ್ವಹಿಸಿದ್ದೇವೆ. ಆ ಸಂದರ್ಭದಲ್ಲಿ ಕರೋನ ವೈರಸ್‌ಗೆ ತುತ್ತಾಗಿ ತಂಬಾ ಕಾರ್ಯಕರ್ತೆಯರು ಮರಣ ಹೊಂದಿದ್ದು ಅವರು ಕುಟುಂಬಗಳು ಬೀದಿಗೆ ಬಂದಿರುತ್ತವೆ.
ಹೀಗೆ ನಮ್ಮ ಕೆಲಸದ ಜೊತೆಗೆ ಇತರೆ ಇಲಾಖೆಗಳ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು 50 ವರ್ಷಗಳಿಂದ ಕೆಲಸ ನಿರ್ವಸಿಕೊಂಡು ಬರುತ್ತಿದ್ದೇವೆ ಅದರು ನಮಗೆ ಕನಿಷ್ಠ ಕೂಲಿಯನ್ನು ನೀಡುತ್ತಿಲ್ಲ ಗೌರವಧನದ ಆದರದಲ್ಲಿ ಮಹಿಳೆಯರನ್ನು ಹೀಗೆ ದುಡಿಸಿಕೊಳ್ಳುತ್ತಿರುವುದು ಖಂಡಿಸಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ (ಐ.ಸಿ.ಡಿ.ಎಸ್) ಯೋಜನೆಯ 50 ನೇ ವರ್ಷ ಸುವರ್ಣಮಹೋತ್ಸವವನ್ನು ಅರ್ಥಪೂರ್ವಕವಾಗಿ ಆಚರಿಸಲು ಸರ್ಕಾರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.
ಮುಖ್ಯ ಬೇಡಿಕೆಗಳು:
1) ಅಂಗನವಾಡಿ ಕಾರ್ಯಕರ್ತೆಯರಿಗೆ 25,000-00 ರೂ ಹಾಗೂ ಅಂಗನವಾಡಿ ಸಹಾಯಕಿಯರಿಗೆ 12,000-00 ಸಾವಿರ ರೂ. ಕನಿಷ್ಠ ವೇತನವನ್ನು ನಿಗದಿಮಾಡಬೇಕು.
2) ಕಾರ್ಯಕರ್ತೆಯರನ್ನು ಸಿ.ದರ್ಜೆ ಎಂದು ಮತ್ತು ಸಹಾಯಕಿಯರನ್ನು ಡಿ. ದರ್ಜೆ ಸರ್ಕಾರಿ ನೌಕರರೆಂದು ಪರಿಗಣಿಸಿ, ಗುಜರಾತ್ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ನಮ್ಮ ಕರ್ನಾಟಕದಲ್ಲಿಯೂ ಜಾರಿ ಮಾಡಿ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಮತ್ತು ಬಿ.ಪ್ರೇಮ-ರಾಜ್ಯಾಧ್ಯಕ್ಷರು
ಜಯಲಕ್ಷ್ಮಿ ಬಿ.ಆರ್-ಗೌರವ ಅಧ್ಯಕ್ಷರು
ವಿಶಾಲಾಕ್ಷಿ-ರಾಜ್ಯ ಖಜಾಂಚಿ
ನಿರ್ಮಲ ಬಿ.ಎಸ್-ರಾಜ್ಯ ಉಪಾಧ್ಯಕ್ಷರು
ಶಾಂತ-ರಾಜ್ಯ ಸಹ ಕಾರ್ಯದರ್ಶಿ
ಭಾರತಿ ಎನ್.ಪಿ-ರಾಜ್ಯ ಸಲಹೆಗಾರರು,
ಎಲ್ಲಾ ಜಿಲ್ಲೆಯ ಮತ್ತು ತಾಲ್ಲೂಕುಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಮಾಡಲಿರುವ ಧರಣಿ ಸತ್ಯಾಗ್ರಹಕ್ಕೆ ಎಲ್ಲರನ್ನು ಬೆಂಗಳೂರಿಗೆ ಕರೆತನ್ನಿ ಯಶಸ್ವಿಗೊಳಿಸಿ ಎಂದು ಉಮಾಮಣಿ- ರಾಜ್ಯ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
City Toda News
9341997936

You must be logged in to post a comment.