ರಾಮಮೂರ್ತಿನಗರದಲ್ಲಿ “ಅಪ್ಪು ಉತ್ಸವ”– 21ನೇ ಸಾಂಸ್ಕೃತಿಕ ಸಿಂಚನಕ್ಕೆ ಸಜ್ಜಾದ ‘ಇದು ನಿಮ್ಮ ವಾಹಿನಿ ಕಲಾ ವೇದಿಕೆ’

ಬೆಂಗಳೂರು, ಮಾರ್ಚ್ 9: ‘ಇದು ನಿಮ್ಮ ವಾಹಿನಿ ಕಲಾ ವೇದಿಕೆ (ರಿ)’ ಸಂಸ್ಥೆಯ ವತಿಯಿಂದ “ಅಪ್ಪು ಉತ್ಸವ” ಹಾಗೂ “21ನೇ ಸಾಂಸ್ಕೃತಿಕ ಸಿಂಚನ” ಕಾರ್ಯಕ್ರಮವನ್ನು ಮಾರ್ಚ್ 15, 2026ರಂದು (ಭಾನುವಾರ) ಬೆಂಗಳೂರಿನ ರಾಮಮೂರ್ತಿನಗರದಲ್ಲಿರುವ ನಾಟ್ಯಪ್ರಿಯ ಆಡಿಟೋರಿಯಮ್‌ನಲ್ಲಿ ಆಯೋಜಿಸಲಾಗಿದೆ.

ಈ ಉತ್ಸವಕ್ಕೆ ಚಲನಚಿತ್ರ ನಟ ನೆನಪಿರಲಿ ಪ್ರೇಮ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮವು ಪತ್ರಕರ್ತ ಗಂಡಸಿ ಸದಾನಂದಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ.ಎಸ್. ತಿಳಿಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಅವರು ತಿಳಿಸಿದರು. ಗೋಷ್ಠಿಯಲ್ಲಿ ನಟ ನೆನಪಿರಲಿ ಪ್ರೇಮ್, ಪತ್ರಕರ್ತ ಗಂಡಸಿ ಸದಾನಂದಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ.ಎಸ್. ಉಪಸ್ಥಿತರಿದ್ದರು.

City Today News 9341997936