
“ರಾಯರ ಮಹಾರಥೋತ್ಸವ ಜಯನಗರದರಾಜಭೀದಿಯಲ್ಲಿ” ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗ್ಗೆ 4:30 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವನ್ನು ದರ್ಶಿಸಲು ಸಹಸ್ರಾರು ಭಕ್ತಾದಿಗಳು ಸೇರಿ ಸರದಿ ಸಾಲಿನಲ್ಲಿ ಚಿಕ್ಕ ಮಕ್ಕಳು ಯುವಕರು ಯುವತಿಯರು ಪುರುಷರು ಮಹಿಳೆಯರು ಹಿರಿಯರು ವಯೋ ವೃದ್ಧರು ಪ್ರತಿಯೊಬ್ಬ ಭಕ್ತರು ರಾಯರ ದರ್ಶನ ಪಡೆದರು ದರ್ಶನಕ್ಕಾಗಿ ಪ್ರತ್ಯೇಕ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10.45 ರವರೆಗೆ ಪ್ರತಿಯೊಬ್ಬ ಭಕ್ತರಿಗೂ ಅನ್ನ ಸಂತರ್ಪಣೆಯ ಪ್ರಸಾದ ಕಾರ್ಯಕ್ರಮ ವಿಶೇಷವಾಗಿ ನೆರವೇರಿತು ಬೆಳಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:45 ರ ವರೆಗೂ ಶ್ರೀಮಠದಿಂದ ಬಿಎಸ್ಏನ್ಎಲ್ ಆಫೀಸ್ ಪೋಸ್ಟ್ ಆಫೀಸ್ ಮುಖಾಂತರ ಅದ್ದೂರಿಯಾಗಿ ಒಂದು ಪ್ರದಕ್ಷಿಣ ಆಕೃತಿಯಾಗಿ ಜಯನಗರದ ರಾಜಭೀದಿಯಲ್ಲಿ ಮಹಾ ರಥೋತ್ಸವವೂ ನೆರವೇರಿತು.

ಈ ರಥೋತ್ಸವದಲ್ಲಿ, ನಾದಸ್ವರ ಶ್ರೀಹರಿ ಭಜನೆ, ಮಹಿಳೆಯರಿಂದ ಕೋಲಾಟ, ಡೊಳ್ಳು ಕುಣಿತ, ನರ್ತನ ಸೇವೆ , ಸಿಡಿಮದ್ದು ಪಟಾಕಿಗಳಿಂದ ವಿಶೇಷವಾಗಿ ನೆರವೇರಿತು ಅಪಾರವಾದ ಸಂಖ್ಯೆಯಲ್ಲಿ ಭಕ್ತ ಜನಸಾಗರವೇ ಈ ಉತ್ಸವದಲ್ಲಿ ಭಾಗಿಯಾಗಿ ಗುರು ರಾಯರ ದರ್ಶನ ಪಡೆದು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು ಆರ್ ಕೆ ವಾದೀಂದ್ರ ಆಚಾರ್ಯ, ಜಿ, ಕೆ ಆಚಾರ್ಯ ನಂದಕಿಶೋರ್ ಆಚಾರ್ಯರ ನೇತೃತ್ವದಲ್ಲಿ ಅಚ್ಚುಕಟ್ಟಾಗ ವ್ಯವಸ್ಥೆಯೊಂದಿಗೆ ನೆರವೇರಿತು ಶ್ರೀಮಠಕ್ಕೆ ಆಗಮಿಸಿದ ಪ್ರತಿಯೊಬ್ಬ ಭಕ್ತರಿಗೂ ಜಾತಿ ಮತ ಭೇದ ಇಲ್ಲದೆ ಸೇವಾಕರ್ತರಿಗೂ ಸಾರ್ವಜನಿಕ ಭಕ್ತರಿಗೂ ಸುಮಾರು 32 ಸಾವಿರಕ್ಕೂ ಮಿಗಿಲಾಗಿ ಭಕ್ತರಿಗೆ “ಅನ್ನ ಸಂತರ್ಪಣೆ” ಕಾರ್ಯಕ್ರಮವು ನೆರವೇರಿತು.
City Today News 9341997936

You must be logged in to post a comment.