“ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಾಚರಣೆ” “ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಯ ಬಗ್ಗೆ ಹೆಚ್ಚಿನ ಜಾಗೃತಿ”

ನಮ್ಮ ದೇಶದಲ್ಲಿ 2014ರಿಂದ ಆರಂಭಗೊಂಡು, ಪ್ರತಿ ವರ್ಷ ನವೆಂಬರ್ 7ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸುತ್ತಾ ಬರಲಾಗಿದೆ. ಜನಸಾಮಾನ್ಯರಿಗೆ “ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಯ ಬಗ್ಗೆ ಹೆಚ್ಚಿನ ಜಾಗೃತಿ”ಯನ್ನು ಉಂಟುಮಾಡುವುದು ಹಾಗೂ ಅಂತಹ ಅರಿವಿನ ಮಹತ್ವವನ್ನು ಎಲ್ಲರಿಗೂ ತಿಳಿಯಪಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ.

Program at Bandipur on 7th Nov, 2023 on occasion of Nation cancer Awarness day
cancer Screening and awareness- 10am -2 pm
At Morarji Desai tribal school.

ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮವನ್ನು 1975ರಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ, ವಾರ್ಷಿಕವಾಗಿ ಸುಮಾರು 14 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ.ಕರ್ನಾಟಕದಲ್ಲಿ ಅಂದಾಜು 87,500 ಹೊಸ ಪ್ರಕರಣಗಳು ಮತ್ತು ಯಾವುದೇಸಮಯದಲ್ಲಿ ಗಮನಿಸಿದರೆ, ಒಟ್ಟಾರೆ 2,30,000 ಕ್ಯಾನ್ಸರ್ ಪ್ರಕರಣಗಳು ಪ್ರಚಲಿತದಲ್ಲಿರುವುದು ಕಂಡುಬರುತ್ತದೆ. ಪುರುಷರಲ್ಲಿ, ಶ್ವಾಸಕೋಶದ ಕ್ಯಾನ್ಸರ್ ಪ್ರಮುಖ ವಿಧದ ಕ್ಯಾನ್ಸರ್ ಆಗಿ ಮುಂದುವರಿದಿದೆ. ಪುರುಷರಲ್ಲಿ ಕಂಡುಬರುವ ವಿವಿಧ ಕ್ಯಾನ್ಸರ್‍‌ಗಳ ಪೈಕಿ ಶ್ವಾಸಕೋಶದ ಕ್ಯಾನ್ಸರ್ ಶೇಕಡಾ 9.6ರಷ್ಟಿದೆ. ನಂತರದ ಸ್ಥಾನದಲ್ಲಿನ ಕ್ಯಾನ್ಸರ್ ವಿಧಗಳನ್ನು ಗಮನಿಸುವುದಾದರೆ – ಹೊಟ್ಟೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‍‌ಗಳು (ಶೇ.6.8ರಷ್ಟು), ಅನ್ನನಾಳ (ಶೇ.5.5ರಷ್ಟು) ಮತ್ತು ಬಾಯಿ (ಶೇ.5.1ರಷ್ಟು) ಕ್ಯಾನ್ಸರ್‌ಗಳು ನಂತರದ ಸ್ಥಾನದಲ್ಲಿ ಇವೆ. ಮಹಿಳೆಯರಲ್ಲಿ, ಸ್ತನದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದ್ದು, ಒಟ್ಟಾರೆ ಮಹಿಳಾ ಕ್ಯಾನ್ಸರ್‍‌ ಪ್ರಕರಣಗಳು ಶೇ.30ರಷ್ಟಿದೆ. ನಂತರದ ಸ್ಥಾನದಲ್ಲಿರುವುದು – ಗರ್ಭಗೊರಳಿನ ಕ್ಯಾನ್ಸರ್ (ಶೇ.11.0ರಷ್ಟು), ಅಂಡಾಶಯ (ಶೇ.7.2ರಷ್ಟು), ಬಾಯಿ (ಶೇ.4.3) ಮತ್ತು ಕಾರ್ಪಸ್ ಯುಟೆರಿ (ಶೇ.4.2).
ವಯಸ್ಸಿನ ಹೊಂದಾಣಿಕೆ ದರವನ್ನು ಪ್ರತಿ ಒಂದು ಲಕ್ಷ ಜನಸಂಖ್ಯೆಯ ಪೈಕಿ ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಸಂಭವಿಸುವ ಕ್ಯಾನ್ಸರ್ ಗತಿವಿಧಿಗೆಯನ್ನು (ಟ್ರೆಂಡ್) ಗಮನಿಸಿದರೆ ಸರಾಸರಿ ಸುಮಾರು ಶೇ.1ರಷ್ಟು ಬದಲಾವಣೆನ್ನು ಗಮನಿಸಲಾಗಿದೆ. ಪುರುಷರಲ್ಲಿ ನಾಲಿಗೆಯ ಕ್ಯಾನ್ಸರ್ (1.9), ಬಾಯಿ (2.2), ಕೊಲೊನ್ (2.9), ಗುದನಾಳ (2.2), ಯಕೃತ್ತು (2.9), ಶ್ವಾಸಕೋಶ (1.6), ಪ್ರಾಸ್ಟೇಟ್ (2.3) ಮತ್ತು NHL (2.2) ಸರಾಸರಿ ವಾರ್ಷಿಕ ಶೇಕಡಾವಾರು ಬದಲಾವಣೆಯನ್ನು ಗಮನಿಸಲಾಗಿದೆ. ಮಹಿಳೆಯರಲ್ಲಿ ಬಾಯಿ (-1.1), ಗರ್ಭಗೊರಳು (-2.8), ಸ್ತನ (3.4), ಕಾರ್ಪಸ್ ಗರ್ಭಾಶಯ (5.4), ಅಂಡಾಶಯ (3.0), NHL (2.5) ಮತ್ತು ಥೈರಾಯ್ಡ್ (1.8) ಈ ದರಗಳಲ್ಲಿ ವಾರ್ಷಿಕ ಸರಾಸರಿ ಶೇಕಡಾವಾರು ಬದಲಾವಣೆಯನ್ನು ಗಮನಿಸಲಾಗಿದೆ.
ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳ ಪೈಕಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಕ್ಯಾನ್ಸರ್‌ಗಳ ಪ್ರಕರಣಗಳಿಗೆ ತಂಬಾಕು ಸೇವನೆಯೇ ಕಾರಣ ಎಂಬುದು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಪುರುಷರಲ್ಲಿ ಮಹಿಳೆಯರ ಜನಸಂಖ್ಯೆಗೆ ಹೋಲಿಸಿದರೆ (ಅಂದರೆ, 46 ಮತ್ತು 24) ತಂಬಾಕು ಸಂಬಂಧಿತ ಕ್ಯಾನ್ಸರ್ ಗತಿವಿಧಿಗೆ (ಪ್ರವೃತ್ತಿಗೆ) ಸಂಬಂಧಿಸಿದಂತೆ ಹೇಳಬೇಕೆಂದರೆ, ವಯಸ್ಸಿನ ಹೊಂದಾಣಿಕೆ ದರವನ್ನು ಗಮನಿಸಿದರೆ, ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಶೇ.0.5 ಮತ್ತು ಶೇ.-0.2ರಷ್ಟು ವಾರ್ಷಿಕ ಬದಲಾವಣೆಯನ್ನು ಪುರುಷರು ಮತ್ತು ಮಹಿಳೆಯರಲ್ಲಿ ಗಮನಿಸಲಾಗಿದೆ. ಇತರ ಸಂಭವನೀಯ ಅಪಾಯಕಾರಿ ಅಂಶಗಳೆಂದರೆ -ಆಹಾರ ಪದ್ಧತಿ, ಮಾಲಿನ್ಯ, ಅತಿಯಾದ ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆ, ಔದ್ಯೋಗಿಕ ಮತ್ತು ಇತರೆ ಸೋಂಕುಗಳು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಬರುವ ಕ್ಯಾನ್ಸರ್ ರೋಗಿಗಳ ಪೈಕಿ ಹೆಚ್ಚಿನ ಸಂಖ್ಯೆಯ ರೋಗಿಗಳು ಗ್ರಾಮೀಣ ಪ್ರದೇಶದವರು ಮತ್ತು ಆರೋಗ್ಯ ಸೌಲಭ್ಯಗಳ ಕೊರತೆ ಇರುವವರು, ಬಹುತೇಕ ರೋಗಿಗಳು ಸಾಮಾಜಿಕ-ಆರ್ಥಿಕವಾಗಿ ಕಡಿಮೆ ಸ್ತರದವರು ಆಗಿದ್ದಾರೆ. ಸಂಸ್ಥೆಯಲ್ಲಿ ಪ್ರತಿ ವರ್ಷ ಸುಮಾರು 21,000 ಹೊಸ ಪ್ರಕರಣಗಳು ದಾಖಲಾಗುತ್ತವೆ. ಅದರಲ್ಲಿ ಸುಮಾರು 10,000 ಪ್ರಕರಣಗಳು ವರ್ಷಕ್ಕೆ ಹೊಸದಾಗಿ ಪತ್ತೆಯಾದ ಕ್ಯಾನ್ಸರ್ ಪ್ರಕರಣಗಳಾಗಿವೆ. ಇತ್ತೀಚಿನ ವರ್ಷದಲ್ಲಿ ಸುಮಾರು 3.6 ಲಕ್ಷ ಪ್ರಕರಣಗಳು ಚಾಲ್ತಿಯಲ್ಲಿವೆ. ಆರಂಭಿಕ ತಪಾಸಣೆ ಮತ್ತು ರೋಗನಿರ್ಣಯ ಕ್ರಮಗಳನ್ನು ಕೈಗೊಂಡರೆ ಕ್ಯಾನ್ಸರ್ ರೋಗಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚು. ದುರದೃಷ್ಟವಶಾತ್ ಹೆಚ್ಚಿನ ರೋಗಿಗಳು ರೋಗ ಉಲ್ಬಣಾವಸ್ಥೆಯ ಹಂತದಲ್ಲಿಯೇ ಚಿಕಿತ್ಸಾ ಸಂಸ್ಥೆಗಳಿಗೆ ಬರುತ್ತಾರೆ. ಆದ್ದರಿಂದ, ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿಗಳನ್ನು ಮೂಡಿಸುವುದು ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ರೋಗಚಿಕಿತ್ಸೆಗಿಂತ ರೋಗ ಬಾರದಂತೆ ತಡೆಗಟ್ಟುವುದೇ ಜಾಣತನ ಎಂಬ ಮಾತು ಎಲ್ಲರಿಗೂ ತಿಳಿದಿರುವ ವಿಚಾರ. ಈ ತಿಳಿವಳಿಕೆಯೊಂದಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ನಿಯಮಿತವಾಗಿ ನಮ್ಮ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ಪತ್ತೆ ಶಿಬಿರಗಳನ್ನು (ಸಿಡಿಸಿ) ನಡೆಸುತ್ತಿದೆ. ಆರಂಭಿಕ ಹಂತಗಳಲ್ಲಿ ಕ್ಯಾನ್ಸರ್ ಅನ್ನು ಪತ್ತೆಹಚ್ಚಿದರೆ ಚಿಕಿತ್ಸೆ ನೀಡಿ ಗುಣಪಡಿಸುವ ಸಾಧ್ಯತೆ ಹೆಚ್ಚಾಗಿದೆ.
ಶೇ.80ರಷ್ಟು ಕ್ಯಾನ್ಸರ್‌ಗಳು ಜೀವನ ಶೈಲಿಗೆ ಸಂಬಂಧಿಸಿದ ಅಂಶಗಳಿಂದ ಉಂಟಾಗುತ್ತವೆ ಎಂಬ ಅರಿವಿನೊಂದಿಗೆ, ಶಾಲೆಗಳು, ಕಾಲೇಜುಗಳು, ಕೈಗಾರಿಕೆಗಳು ಮತ್ತು ಸಾರ್ವಜನಿಕರನ್ನು ಒಳಗೊಳ್ಳುವ ಮೂಲಕ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ಈ ಸಂದರ್ಭದಲ್ಲಿ ಕ್ಯಾನ್ಸರ್ಬಗ್ಗೆ ಜಾಗೃತ ಹಾಗೂ ತಪಾಸಣ ಶಿಬಿರವನ್ನು ಬಂಡಿಪುರದ ಸಮಿಪದಲ್ಲಿ ನೆಡೆಸಿ ಮುಂದಿನ ದಿನಗಳಲ್ಲಿ ವಿವಿದ ಶಾಲಾ ಕಾಲೇಜುಗಳಲ್ಲು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಕ್ರಮವಯಿಸಲಾಗುವುದು.

ಈ ಕೆಳಗಿನ ಎಚ್ಚರಿಕೆಯ ಮುನ್ಸೂಚನೆಗಳು ಮತ್ತು ರೋಗಲಕ್ಷಣಗಳನ್ನು ಪ್ರತಿಯೊಬ್ಬರು ಸಹ ತಿಳಿದಿರಬೇಕು:
ಕ್ಯಾನ್ಸರ್‌ನ ಮುನ್ಸೂಚನೆಗಳು ಈ ಕೆಳಕಂಡಂತಿವೆ. ಇವುಗಳು ಯಾರಿಗಾದರೂ ಕಂಡುಬಂದರೆ ತಕ್ಷಣವೇ ವೈದ್ಯರ ಬಳಿ ಬಂದು ಪರೀಕ್ಷಿಸಿಕೊಳ್ಳುವುದು ಉತ್ತಮ.

  1. ಪದೇ ಪದೇ ಅಜೀರ್ಣ/ ಊಟ ಸೇರದಿರುವುದು/ ಮೈತೂಕ ಇಳಿಯುವಿಕೆ.
  2. ಚರ್ಮದಲ್ಲಿರುವ ನರಹುಲಿ ಅಥವಾ ಹುಟ್ಟು ಮಚ್ಚೆಗಳಲ್ಲಿ ವ್ಯತ್ಯಾಸವಾಗುವುದು.
  3. ಗುಣವಾಗದ ಕೆಮ್ಮು.
  4. ಧ್ವನಿಯಲ್ಲಿನ ಬದಲಾವಣೆ.
  5. ನುಂಗಿದ ತುತ್ತಿಗೆ ಅಡಚಣೆ ಆಗುವುದು.
  6. ಬಾಯಿಯಲ್ಲಿ ಕಂಡು ಬರುವ ಬಿಳಿಮಚ್ಚೆಗಳು. ಮಲಮೂತ್ರ ವಿಸರ್ಜನೆಯಲ್ಲಿ ಆಗಬಹುದಾದ ವ್ಯತ್ಯಾಸಗಳು.
  7. ಗುಣವಾಗದ ಯಾವುದೇ ಹುಣ್ಣುಗಳು. ಉದಾ: ಬಾಯಿಯಲ್ಲಿ, ಹೊಟ್ಟೆಯಲ್ಲಿ ಆಗುವ ಹುಣ್ಣುಗಳು
  8. ಅಸಾಮಾನ್ಯ ರಕ್ತಸ್ರಾವ ಅಥವಾ ಅಸಾಮಾನ್ಯ ಬಿಳುಪು ಹೋಗುವಿಕೆ.
  9. ಸ್ತನದಲ್ಲಿ ಅಥವಾ ಇನ್ನಿತರೆಡೆಗಳಲ್ಲಿ ಕಾಣಿಸಿಕೊಳ್ಳುವ ಗೆಡ್ಡೆಗಳು ಅಥವಾ ಗಂಟುಗಳು.
    ಗಮನಿಸಿ: ಈ ರೋಗಲಕ್ಷಣಗಳು ಕ್ಯಾನ್ಸರ್ ಮಾತ್ರವಲ್ಲದೇ ಇನ್ನಿತರ ರೋಗಗಳ ಸೂಚನೆಯೂ ಆಗಿರಬಹುದು.

City Today News 9341997936