ಬಂಜಾರ (ಲಂಬಾಣಿ) ಜನ ಸೇವಾ ಸಂಘ (ರಿ), ವತಿಯಿಂದ ಕಳೆದ ಮೂರು ನಾಲ್ಕು ವರ್ಷಗಳಿಂದ ಶ್ರೀ ಶ್ರೀ ಶ್ರೀ ಸಂತ ಸೇವಾಲಾಲ್ ಮಹಾರಾಜ್ ರವರ ಜಯಂತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದು,

ಪ್ರತಿ ವರ್ಷದಂತೆಯೆ ಈ ವರ್ಷವೂ ಕೂಡಾ ದಿನಾಂಕ 15.02.20240 ಗುರುವಾರ ದಂದು ಸಂಜೆ 4.00 ಗಂಟೆಗೆ 285ನೇ ಜಯಂತಿಯನ್ನು ಬೆಂಗಳೂರಿನ ಜೆ.ಸಿ. ರಸ್ತೆಯ ರವೀಂದ್ರ ಕಾಲಾಕ್ಷೇತ್ರ ಅವರಣ, ಸಂಸ ಬಯಲು ರಂಗಮಂದಿರ, ಜೆ.ಸಿ. ರಸ್ತೆ, ಟೌನ್ ಹಾಲ್ ಹತ್ತಿರ, ಬೆಂಗಳೂರು, ಇಲ್ಲಿ ಈ ಮೇಲ್ಕಂಡ ಸಂಘದ ವತಿಯಿಂದ ಆಯೋಜಿಸಲಾಗಿದ್ದು, ಈ ದಿನದಂದು ರಾಷ್ಟ್ರ ಮಟ್ಟದಲ್ಲಿ ಸಮಾಜಿಕ ಬಂಜಾರ (ಲಂಬಾಣಿ) ವಧುವರರ ಅನ್ವೇಷಣೆ ಸಮಾವೇಶ ನಡೆಯಲಿದೆ. ಈ ವಿಶೇಷ ದಿನದಂದು ಲಂಬಾಣಿ ನೃತ್ಯ ಕಲಾ ತಂಡಗಳೊಂದಿಗೆ ವಿವಿಧ ಸಮಾಜಿಕ ಜಾನಪದ ಉತ್ಸವಗಳಂತಹ ಕಾರ್ಯಕ್ರಮಗಳು ನಡೆಯಲ್ಲಿದ್ದು, ಗೌರವಾನ್ವಿತ ಜನಪ್ರತಿ ನಿಧಿಗಳಿಗೆ ಹಾಗೂ ಸಾಧನೆ ಗೈದಂತಹ ಮಾನ್ಯರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಲಾಗುವುದು ಹಾಗೂ ಸಮಾಜಿಕ ಬಂಜಾರ (ಲಂಬಾಣಿ) ವಧುವರರ ರಾಷ್ಟ್ರ ಮಟ್ಟದಲ್ಲಿ ನೆರವೇರಲಿದ್ದು ಈ ಸಮಾವೇಶದಲ್ಲಿ ಪರಸ್ಪರ ಪರಿಚಯಿಸುವಂತಹ ಕಾರ್ಯಕ್ರಮವನ್ನು ಕೂಡ ಇದೇ ವೇದಿಕೆಯಲ್ಲಿ ವ್ಯವಸ್ಥೆ ಮಾಡಲಾಗುವುದು ಹಾಗೂ ಪುಸ್ತಕ ಬಿಡುಗಡೆಗಳಂತಹ ಕಾರ್ಯ ಕ್ರಮಗಳನ್ನು ಕೂಡ ಮಾಡಲಾಗುವುದು ಎಂದು ಎ.ಆರ್. ಹನುಮಂತನಾಯ್ಕ ವ್ಯವಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News 9341997936

You must be logged in to post a comment.