ರಿಯಲ್‌ಮಿ 15 ಸೀರೀಸ್ ಬಿಡುಗಡೆ: ವಾಯ್ಸ್ ಕಮಾಂಡ್‌ ಮೂಲಕ ಫೋಟೋ ಎಡಿಟ್ ಮಾಡುವ ಪ್ರಪಂಚದ ಮೊದಲ AI ಫೋನ್

ಬೆಂಗಳೂರು, ಜುಲೈ 28, 2025: ಯುವಪ್ರಜೆಗೆ ಮೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ, ತನ್ನ ಹೊಸ ರಿಯಲ್‌ಮಿ 15 ಪ್ರೋ 5G ಮತ್ತು ರಿಯಲ್‌ಮಿ 15 5G ಫೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. “AI ಪಾರ್ಟಿ ಫೋನ್” ಎಂಬ ಟ್ಯಾಗ್‌ಲೈನ್‌ ಮೂಲಕ ಈ ಫೋನ್‌ಗಳು ಫೋಟೋಗ್ರಫಿ, ಗೇಮಿಂಗ್ ಹಾಗೂ ಎಐ ತಂತ್ರಜ್ಞಾನದಲ್ಲಿ ಹೊಸ ಮಾನದಂಡ ಸ್ಥಾಪನೆ.


ಟ್ರಿಪಲ್ 50MP ಕ್ಯಾಮೆರಾ – ಪ್ರೋ ಲೆವೆಲ್ ಫೋಟೋ ಮತ್ತು ವಿಡಿಯೋ ಶೂಟಿಂಗ್

ರಿಯಲ್‌ಮಿ 15 ಪ್ರೋ 5G ಫೋನ್‌ನಲ್ಲಿ ಟ್ರಿಪಲ್ 50MP ಕ್ಯಾಮೆರಾ ಸೆಟಪ್ ನೀಡಲಾಗಿದೆ.

Sony IMX896 OIS ಮೆನ್ ಕ್ಯಾಮೆರಾ, 1/1.56″ ಸೆನ್ಸರ್, 24mm ಫೋಕಲ್ ಲೆಂಥ್.

50MP ಅಲ್ಟ್ರಾ ವೈಡ್ ಕ್ಯಾಮೆರಾ – ಗ್ರೂಪ್ ಫೋಟೋಗಳಿಗೆ ಸೂಕ್ತ.

50MP ಫ್ರಂಟ್ ಕ್ಯಾಮೆರಾ – ಉಜ್ವಲ ಸೆಲ್ಫಿಗೆ.


ಈ ಫೋನ್ 4K @ 60FPS ವಿಡಿಯೋ ಶೂಟಿಂಗ್‌ ಮಾಡಬಲ್ಲದು – ತನ್ನ ಶ್ರೇಣಿಯಲ್ಲಿ ಅಗ್ರಗಣ್ಯ ಸಾಧನೆ.

ರಿಯಲ್‌ಮಿ 15 5G ಮಾದರಿಯಲ್ಲೂ Sony IMX882 OIS ಕ್ಯಾಮೆರಾ ಹಾಗೂ 50MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಎರಡೂ ಕ್ಯಾಮೆರಾಗಳು 4K ವಿಡಿಯೋ ಶೂಟಿಂಗ್ ಮಾಡಬಲ್ಲವು, ಸೆಲ್ಫಿ ಕ್ರಿಯೇಟರ್‌ಗಳಿಗೆ ಇದು ದೊಡ್ಡ ಬೋನು.


2K ಲೈವ್ ಫೋಟೋ – ಕ್ಲಾರಿಟಿಯ ಹೊಸ ಮಟ್ಟ

ಪರಂಪರೆಯ 1080p ಲೈವ್ ಫೋಟೋಗಳ ಬದಲು, ಈ ಮಾದರಿಗಳು 2K ಲೈವ್ ಫೋಟೋ ಕ್ಯಾಪ್ಚರ್ ಮಾಡಬಲ್ಲವು. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಹೆಚ್ಚು ಸ್ಪಷ್ಟವಾದ ಚಿತ್ರಗಳನ್ನು ನೀಡುತ್ತವೆ.


AI ಎಡಿಟ್ ಜಿನಿ – ಫೋಟೋ ಎಡಿಟಿಂಗ್‌ಗೆ ವಾಯ್ಸ್ ಕಮಾಂಡ್

ರಿಯಲ್‌ಮಿ ವಿಶ್ವದ ಮೊದಲ AI Edit Genie ಪರಿಚಯಿಸಿದೆ. ಬಳಕೆದಾರರು ಫೋಟೋವನ್ನು ಕೇವಲ ಧ್ವನಿಯ ಮೂಲಕ ಎಡಿಟ್ ಮಾಡಬಹುದು – ಬೆಕ್‌ಗ್ರೌಂಡ್ ಬದಲಾವಣೆ, ಫಿಲ್ಟರ್ ಸೇರ್ಪಡೆ, ಚರ್ಮದ ಕಾಂತಿ ತಿದ್ದುಪಡಿ, ಪಾರ್ಟಿ ಮೋಡ್ ಎಫೆಕ್ಟ್ ಮುಂತಾದವು ಎಲ್ಲವೂ ಕೆಲವೇ ಸೆಕೆಂಡ್‌ಗಳಲ್ಲಿ.

ಇದರಲ್ಲಿ AI ಇನ್‌ಸ್ಪಿರೇಷನ್ ಮೋಡ್, MagicGlow 2.0, AI ಲ್ಯಾಂಡ್ಸ್ಕೆಪ್ ಎಡಿಟ್, AI ಗ್ಲೇರ್ ರಿಮೂವರ್ ಮುಂತಾದ ಫೀಚರ್‌ಗಳಿವೆ.

AI ಪಾರ್ಟಿ ಮೋಡ್ – ಕಡಿಮೆ ಬೆಳಕಿನಲ್ಲಿ ಸೆಲ್ಫಿಗೆ ಸ್ಪೆಷಲ್ ಎಫೆಕ್ಟ್

AI ಪಾರ್ಟಿ ಮೋಡ್‌ನಿಂದ ಉಜ್ವಲ ಬಣ್ಣದ ಫೋಟೋ, ಶಾರ್ಪ ಡೀಟೈಲ್ ಹಾಗೂ ವಿಶಿಷ್ಟ ಫ್ರೇಮ್‌ಗಳೊಂದಿಗೆ ಸ್ಟೈಲಿಷ್‌ ಪಾರ್ಟಿ ಸೆಲ್ಫಿಗಳು ಸಾಧ್ಯ. ಕಡಿಮೆ ಬೆಳಕಿನಲ್ಲೂ ಉತ್ತಮ ಪರ್ಫಾರ್ಮೆನ್ಸ್ ನೀಡುತ್ತದೆ.

ಶ್ರೇಣಿಯಲ್ಲಿ ಮೊದಲ AI ಚಿಪ್‌ಸೆಟ್: ಗೇಮಿಂಗ್‌ಗಾಗಿ ಸ್ಪೀಡ್‌ ಮತ್ತು ಪವರ್‌

Snapdragon® 7 Gen 4 ಚಿಪ್‌ಸೆಟ್ ಹೊಂದಿರುವ 15 ಪ್ರೋ 5G, 4nm ತಂತ್ರಜ್ಞಾನ ಆಧಾರಿತವಾಗಿದ್ದು, 15% ಹೆಚ್ಚು ವೇಗ, 1.1 ಮಿಲಿಯನ್ Antutu ಸ್ಕೋರ್ ಹೊಂದಿದೆ. Free Fireನಲ್ಲಿ 120FPS, BGMIನಲ್ಲಿ 90FPS ಬೆಂಬಲವಿದೆ.

Realme 15 5G ಮಾದರಿಯು Dimensity 7300+ 5G ಚಿಪ್‌ಸೆಟ್ ಹೊಂದಿದ್ದು, 740,000+ Antutu ಸ್ಕೋರ್, 90FPS ಗೇಮಿಂಗ್ ಸಪೋರ್ಟ್ ಅನ್ನು ನೀಡುತ್ತದೆ.

7000mAh ಟೈಟನ್ ಬ್ಯಾಟರಿ, 80W ಚಾರ್ಜಿಂಗ್ ಮತ್ತು ಕೂಲಿಂಗ್ ಟೆಕ್ನಾಲಜಿ

ಇದರಲ್ಲಿ 7000mAh ಬ್ಯಾಟರಿ, 80W SUPERVOOC ಫಾಸ್ಟ್ ಚಾರ್ಜಿಂಗ್, ಮತ್ತು 7000mm² VC ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯಿದೆ – ಇದು ದಿನಪೂರ್ತಿ ಬ್ಯಾಟರಿ ಹಾಗೂ ಕಡಿಮೆ ತಾಪಮಾನ ಖಾತರಿಯಾಗಿಸುತ್ತದೆ.

ಆಕರ್ಷಕ ವಿನ್ಯಾಸ – ಪ್ರಥಮ 4D ಕರ್ವ್ಡ್+ ಡಿಸ್ಪ್ಲೇ

15 ಪ್ರೋ 5G ನಲ್ಲಿ ಶ್ರೇಣಿಯಲ್ಲಿ ಮೊದಲ 4D ಕರ್ವ್ಡ್+ AMOLED ಡಿಸ್ಪ್ಲೇ ಇದೆ – 1.5K ರೆಸಲ್ಯೂಶನ್, 144Hz ರಿಫ್ರೆಶ್ ರೇಟ್, 6500 ನಿಟ್ಸ್ ಬ್ರೈಟ್ನೆಸ್.

IP69+ ರೇಟಿಂಗ್, Corning Gorilla Glass ರಕ್ಷಣೆಯೊಂದಿಗೆ ನಿತ್ಯ ಬಳಕೆಗೆ ಸೂಕ್ತವಾಗಿದೆ.

7.69mm ದಪ್ಪದೊಂದಿಗೆ ಇದು ಶ್ರೇಣಿಯಲ್ಲಿ ಅತ್ಯಂತ ತೆಳುವಾದ 7000mAh ಬ್ಯಾಟರಿ ಫೋನ್.

ಪ್ಯಾರಿಸ್ ಫ್ಯಾಷನ್ ಶೈಲಿಯ ಬ್ಯಾಕ್ ಕವರ್ ವಿನ್ಯಾಸ

ಬ್ಯಾಂಕ್ ಕವರ್ ವಿನ್ಯಾಸ ಪ್ಯಾರಿಸ್‌ನ ಹಾಟ್ ಕ್ಯುಟ್ಯೂರ್ ಶೈಲಿಯಿಂದ ಪ್ರೇರಿತವಾಗಿದೆ – ನೈಸರ್ಗಿಕ ಹಾಯ್ದಾಟ, ರೆಫ್ಲೆಕ್ಟಿವ್ ಶೀನ್, ಸಿಲ್ಕ್ ಹಾಗೂ ಲೆದರ್‌ ಲುಕ್‌ನ ಜೊತೆಗೆ ಶ್ರೇಷ್ಠ ಮೊಬೈಲ್ ಅಂದವನ್ನು ತೋರಿಸುತ್ತದೆ.

Realme Buds T200 – ಲೈವ್ ಆಡಿಯೋ, ಎಎನ್‌ಸಿ ಮತ್ತು ಲಾಂಗ್ ಬ್ಯಾಟರಿ ಲೈಫ್

ಹೊಸದಾಗಿ ಪರಿಚಿತ Realme Buds T200 ನಲ್ಲಿ:

12.4mm ಡೈನಾಮಿಕ್ ಡ್ರೈವರ್

LDAC ಸಪೋರ್ಟ್ ಸಹಿತ Hi-Res ಆಡಿಯೋ

32dB ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್

Bluetooth 5.4, 45ms ಲ್ಯಾಟೆನ್ಸಿ

50 ಗಂಟೆಗಳ ಪ್ಲೇಬ್ಯಾಕ್, ಕೇವಲ 10 ನಿಮಿಷ ಚಾರ್ಜಿಂಗ್‌ಗೆ 5 ಗಂಟೆ ಬಳಕೆ.


ಬೆಲೆ ಮತ್ತು ಲಭ್ಯತೆ:

Realme 15 Pro 5G: Flowing Silver, Velvet Green, Silk Purple ಬಣ್ಣಗಳಲ್ಲಿ ಲಭ್ಯವಿದೆ

Realme 15 5G: Flowing Silver, Silk Pink, Velvet Green ಬಣ್ಣಗಳಲ್ಲಿ ಲಭ್ಯ

Realme Buds T200: ₹1,999 (ಬ್ಯಾಂಕ್ ಡಿಸ್ಕೌಂಟ್ ಬಳಿಕ ₹1,699), ಬಣ್ಣ: Mystic Grey, Snowy White, Dreamy Purple, Neon Green.

City Today News 9341997936