
ಬೆಂಗಳೂರು, ಜನವರಿ 21, 2025:
ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ ಕನ್ನಡ ವಾಹಿನಿ, ಧಾರಾವಾಹಿಗಳಷ್ಟೇ ಅಲ್ಲದೆ ಜನಪ್ರಿಯ ರಿಯಾಲಿಟಿ ಶೋಗಳು ಹಾಗೂ ಭರ್ಜರಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳ ಮೂಲಕ ನಿರಂತರವಾಗಿ ಪ್ರೇಕ್ಷಕರ ಮನಗೆದ್ದು ನಂ.1 ಸ್ಥಾನದಲ್ಲಿದೆ. ಇದೀಗ ಅದೇ ಸಾಲಿನಲ್ಲಿ ಜೀ ಕನ್ನಡ ತನ್ನ ವೀಕ್ಷಕರಿಗೆ ಮತ್ತೊಂದು ಶುಭವಾರ್ತಿಯನ್ನು ನೀಡುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ದಾಖಲಿಸಿ, ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇದೇ ಜನವರಿ 24ರಂದು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿ ಪ್ರಸಾರವಾಗಲಿದೆ.
‘ಕಾಂತಾರ: ಚಾಪ್ಟರ್ 1’ ಕಥೆ ನಾಲ್ಕನೇ ಶತಮಾನದ ಕದಂಬ ರಾಜವಂಶದ ಕಾಲಘಟ್ಟದಲ್ಲಿ ನೆಲೆಗೊಂಡಿದ್ದು, ಕಾಂತಾರ ಎಂಬ ಅರಣ್ಯಭೂಮಿಯ ನಾಯಕ ಬೇರ್ಮೆ ಮತ್ತು ಬಾಂಗ್ರಾ ರಾಜ ಮನೆತನದ ನಡುವಿನ ಸಂಘರ್ಷವನ್ನು ಕೇಂದ್ರೀಕರಿಸಿದೆ. ಈ ಚಿತ್ರ ಕಾಂತಾರ ಎಂಬ ಅದ್ಭುತ ಕಾಡಿನ ಹುಟ್ಟಿನ ಕಥೆಯ ಜೊತೆಗೆ, ಆ ನೆಲವನ್ನು ರೂಪಿಸಿದ ಆಳವಾದ ಸಂಪ್ರದಾಯಗಳು, ನಂಬಿಕೆಗಳು ಮತ್ತು ಜನಪದ ಪೌರಾಣಿಕತೆಯನ್ನು ಅತ್ಯಂತ ವೈಭವದಿಂದ ತೆರೆದಿಡುತ್ತದೆ. ಸಾಂಸ್ಕೃತಿಕ, ಭಾವನಾತ್ಮಕ ಮತ್ತು ಜಾನಪದ ಅಂಶಗಳ ಸಮನ್ವಯದಿಂದ ಈ ಸಿನಿಮಾ ಪ್ರೇಕ್ಷಕರ ಮನದಲ್ಲಿ ಆಳವಾದ ಮುದ್ರೆಯನ್ನು ಮೂಡಿಸಿದೆ.
ಚಿತ್ರದ ಯಶಸ್ಸಿಗೆ ಅದರ ಶಕ್ತಿಶಾಲಿ ತಾರಾಬಳಗವೂ ಪ್ರಮುಖ ಕಾರಣವಾಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಬೇರ್ಮೆ ಮತ್ತು ಮಾಯಕಾರ ಎಂಬ ದ್ವಿಪಾತ್ರದಲ್ಲಿ ಮಿಂಚಿದ್ದು, ಅವರ ಅಭಿನಯ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ರುಕ್ಮಿಣಿ ವಸಂತ್ ಅವರು ಕನಕಾವತಿ ಎಂಬ ಯುವರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಮಲಯಾಳಂ ಸೂಪರ್ ಸ್ಟಾರ್ ಜಯರಾಮ್ ಅವರು ರಾಜ ರಾಜಶೇಖರನ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಗುಲ್ಶನ್ ದೇವಯ್ಯ ಕುಲಶೇಖರ ಎಂಬ ರಾಜನ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಮೋದ್ ಶೆಟ್ಟಿ ಭೋಗೇಂದ್ರ ಪಾತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತರ ಅನೇಕ ಕಲಾವಿದರ ಅಭಿನಯವೂ ಚಿತ್ರಕ್ಕೆ ಹೆಚ್ಚುವರಿ ಬಲ ನೀಡಿದೆ.
ಬೇರ್ಮೆ ಪಾತ್ರದಲ್ಲಿ ರಿಷಬ್ ಶೆಟ್ಟಿಯ ಅಭಿನಯ ಅತ್ಯಂತ ನೈಜವಾಗಿದ್ದು, ಶಕ್ತಿ, ಆಧ್ಯಾತ್ಮಿಕತೆ ಮತ್ತು ಭಾವನಾತ್ಮಕ ಆಳತೆಯಿಂದ ತುಂಬಿದೆ. ಚಿತ್ರದ ಮೊದಲಾರ್ಧದಲ್ಲಿ ಪೌರಾಣಿಕತೆ ಮತ್ತು ಭಾವನಾತ್ಮಕ ದೃಶ್ಯಗಳು ಮನಸೂರೆಗೊಳ್ಳುವಂತೆ ಇದ್ದರೆ, ದ್ವಿತೀಯಾರ್ಧದಲ್ಲಿ ತೀವ್ರ ಆಕ್ಷನ್ ದೃಶ್ಯಗಳು ಹಾಗೂ ದೈವಿಕ ಕ್ಷಣಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ದೃಶ್ಯ ವೈಭವ, ಕಥನ ಶೈಲಿ ಮತ್ತು ತಂತ್ರಜ್ಞಾನಗಳ ಸಮನ್ವಯದಿಂದ ‘ಕಾಂತಾರ: ಚಾಪ್ಟರ್ 1’ ಒಂದು ಅದ್ಭುತ ದೃಶ್ಯಕಾವ್ಯವಾಗಿ ರೂಪುಗೊಂಡಿದೆ.
ಈ ಕುರಿತು ಮಾತನಾಡಿದ ಜೀ ಕನ್ನಡ ಹಾಗೂ ಕನ್ನಡ ZEE5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು,
“‘ಕಾಂತಾರ: ಚಾಪ್ಟರ್ 1’ ಒಂದು ಸಿನಿಮಾ ಮಾತ್ರವಲ್ಲ; ಅದು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಪ್ರತಿಬಿಂಬ. ಈ ಸಿನೆಮಾಟಿಕ್ ಮಾಸ್ಟರ್‌ಪೀಸ್ ಅನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡುವುದಕ್ಕೆ ನಮಗೆ ಅಪಾರ ಹೆಮ್ಮೆ. ನಮ್ಮ ವಾಹಿನಿಯ ಮೂಲಕ ಕುಟುಂಬದೊಂದಿಗೆ ಕೂತು ಈ ಚಿತ್ರವನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ,” ಎಂದು ಹೇಳಿದರು.
ವೀಕ್ಷಿಸಿ ‘ಕಾಂತಾರ: ಚಾಪ್ಟರ್ 1’ – ಇದೇ ಜನವರಿ 24ರಂದು ಸಂಜೆ 7 ಗಂಟೆಗೆ, ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ.
City Today News 9341997936

You must be logged in to post a comment.