
ಬೆಂಗಳೂರು, ಏಪ್ರಿಲ್ 25, 2025:
ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ 63 ವರ್ಷದ ಯೆಮೆನ್ ಮೂಲದ ಮಹಿಳೆಯೊಬ್ಬರ ಮೇಲೆ ರೋಬೋಟ್ ನೆರವಿನ ಬೈಲಾಟರಲ್ ಮೊಣಕಾಲು ಬದಲಿಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದ್ದು, ಐದು ವರ್ಷಗಳ ಬಳಿಕ ಅವರಿಗೆ ಪುನಃ ಚಲನಶೀಲತೆ ಸಾಧ್ಯವಾಗಿದೆ.
ದೀರ್ಘಕಾಲದಿಂದ ಮೊಣಕಾಲು ಅಸ್ಥಿಸಂಧಿವಾತದಿಂದ ಬಳಲುತ್ತಿದ್ದ ಶ್ರೀಮತಿ ಜಮ್ಹಾಮ್ ಅವರಿಗೆ ಸ್ಥಳೀಯ ಮಟ್ಟದಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದೆ, ಅವರು ಭಾರತ ಪ್ರವಾಸಮಾಡಿ ಫೋರ್ಟಿಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸಮಾಲೋಚನೆ ಪಡೆದರು. ಆಸ್ಪತ್ರೆಯ ಹಿರಿಯ ಮೂಳೆ ತಜ್ಞರು, ಪ್ರಧಾನ ನಿರ್ದೇಶಕ ಡಾ. ನಾರಾಯಣ್ ಹುಲ್ಸೇ ಅವರ ನೇತೃತ್ವದಲ್ಲಿ ವೇಲಿನ್ ರೋಬೋಟಿಕ್ ತಂತ್ರಜ್ಞಾನವನ್ನು ಉಪಯೋಗಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಶಸ್ತ್ರಚಿಕಿತ್ಸೆಯ ನಂತರ ಎರಡನೇ ದಿನವೇ ರೋಗಿಗೆ ನಿಲ್ಲುವುದು ಹಾಗೂ ಬೆಂಬಲದೊಂದಿಗೆ ನಡೆದುಕೊಳ್ಳುವುದು ಸಾಧ್ಯವಾಗಿದ್ದು, ವೇಗದ ಚೇತರಿಕೆ ಕಂಡುಬಂದಿದೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಶಸ್ತ್ರಚಿಕಿತ್ಸೆ ಅತ್ಯಂತ ನಿಖರವಾಗಿ ಹಾಗೂ ಕಡಿಮೆ ನೋವಿನಿಂದ ನೆರವೇರಿದ ಪರಿಣಾಮ, ರೋಗಿಯ ಜೀವನಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ.

ಡಾ. ನಾರಾಯಣ್ ಹುಲ್ಸೇ ಮಾತನಾಡುತ್ತಾ, “ಫೋರ್ಟಿಸ್ ಆಸ್ಪತ್ರೆಯಲ್ಲಿ ನಾವು ಈಗಾಗಲೇ 150 ಕ್ಕೂ ಹೆಚ್ಚು ರೋಬೋಟ್ ನೆರವಿನ ಮೊಣಕಾಲು ಬದಲಿಯ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದೇವೆ. ಈ ತಂತ್ರಜ್ಞಾನ ರೋಗಿಗಳಿಗೆ ವೇಗವಾಗಿ ಚೇತರಿಸಿಕೊಳ್ಳಲು, ಕಡಿಮೆ ನೋವು ಅನುಭವಿಸಲು ಹಾಗೂ ಉತ್ತಮ ಫಲಿತಾಂಶ ಪಡೆಯಲು ನೆರವಾಗುತ್ತಿದೆ,” ಎಂದು ತಿಳಿಸಿದರು.

ಫೋರ್ಟಿಸ್ ಆಸ್ಪತ್ರೆಗಳ ಬೆಂಗಳೂರು ವಿಭಾಗದ ಬಿಸಿನೆಸ್ ಮುಖ್ಯಸ್ಥ ಶ್ರೀ ಅಕ್ಷಯ್ ಒಲೆಟಿ ಅವರು, “ರೋಗಿಗಳ ಆರೈಕೆ ಹಾಗೂ ಕ್ಲಿನಿಕಲ್ ಫಲಿತಾಂಶಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಾವು ಸದಾ ನವೀನ ವೈದ್ಯಕೀಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ವೇಲಿನ್ ರೋಬೋಟಿಕ್ ವ್ಯವಸ್ಥೆಯ ಪರಿಚಯ, ಈ ದೃಷ್ಟಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ,” ಎಂದು ಹೇಳಿದರು.
ಫೋರ್ಟಿಸ್ ಬನ್ನೇರುಘಟ್ಟ ಆಸ್ಪತ್ರೆ ರಾಜ್ಯದಲ್ಲಿ ಈ ತಂತ್ರಜ್ಞಾನ ಹೊಂದಿದ ಏಕೈಕ ಆಸ್ಪತ್ರೆಯಾಗಿದ್ದು, 100 ಕ್ಕೂ ಹೆಚ್ಚು ರೋಬೊಟಿಕ್ ಸೊಂಟ ಬದಲಿ ಹಾಗೂ 100 ಕ್ಕೂ ಹೆಚ್ಚು ರೋಬೊಟಿಕ್ ಭಾಗಶಃ ಮೊಣಕಾಲು ಬದಲಿಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದು, ಆರೋಗ್ಯರಕ್ಷಣಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ದಾಖಲಿಸಿದೆ.
City Today News 9341997936

You must be logged in to post a comment.