ಈಗಾಗಲೇ ಕ್ವಾರಿ ಮತ್ತು ಕ್ರಷರ್ ಮಾಲೀಕರುಗಳಿಗೆ, ಲಾರಿ ಮಾಲೀಕರುಗಳಿಗೆ ವಿಧಿಸಿರುವ ಎಲ್ಲಾ ರೀತಿಯ ದಂಡವನ್ನು ‘ಮನ್ನಾ’ ಮಾಡಬೇಕು.

ಸರ್ಕಾರ ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಿಲ್ಲ. ಸರ್ಕಾರಿ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಮತ್ತು ಖಾಸಗೀ ಕಾಮಗಾರಿ ನಿರ್ವಹಣಾ ಗುತ್ತಿಗೆದಾರರು ಯಾವ ರೀತಿ ರಾಜಧನವನ್ನು ಎಲ್ಲಿ ಪಾವತಿಸಬೇಕೆಂದು ಕೇಂದ್ರ ಎಂ.ಎಂ.ಡಿ.ಆರ್-1957 ಮತ್ತು ರಾಜ್ಯ ಕೆ.ಎಂ.ಎಂ.ಸಿ-1994 ನಿಯಮಗಳಲ್ಲಿ ಸ್ಪಷ್ಟತೆ ಇದ್ದರೂ ಕೂಡಾ ಅದನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಅನುಷ್ಟಾನ ಮಾಡಿಲ್ಲ. ಮತ್ತು ಲಾರಿ ಮಾಲೀಕರುಗಳಿಗೂ ಸ್ಪಷ್ಟ ನಿರ್ದೇಶನವನ್ನೂ ನೀಡಿಲ್ಲ. ಅಲ್ಲದೇ ಕ್ರಷರ್ ಮತ್ತು ಕ್ವಾರಿ ಮಾಲೀಕರುಗಳಿಗೆ ಮತ್ತು ಲಾರಿ ಮಾಲೀಕರುಗಳಿಗೆ ದಿನಃಪ್ರತೀ ಕೋಟ್ಯಾಂತರ ರೂ. ದಂಡ ವಿಧಿಸುತ್ತಿದ್ದಾರೆ. ಇದರಿಂದಾಗಿ ಈಗ ಕ್ವಾರಿ ಮತ್ತು ಕ್ರಷರ್ ಮಾಲೀಕರುಗಳು, ಲಾರೀ ಮಾಲೀಕರುಗಳು ಆತ್ಮಹತ್ಯೆ ಮಾಡಿಕೊಳ್ಳುವ ಇಂತಹ ಪ್ರಕರಣ ನಡೆಯುತ್ತಿದೆ.

ರಾಜ್ಯದಾದ್ಯಂತ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗ ಈ ಆತ್ಮಹತ್ಯೆ ಮಾಡಿಕೊಂಡಿರುವ ಶ್ರೀ ನಾಗೇಶ್‌ರವರಿಗೂ ಕೂಡಾ ನೋಟೀಸನ್ನು ನೀಡಿ ಸುಮಾರು 8 ಲಕ್ಷದಷ್ಟು ದಂಡ ಕಟ್ಟಲು ಇಲಾಖೆ 2) ಗಿ ಒತ್ತಾಯ ಪಡಿಸಿದ ಕಾರಣ ಮನನೊಂದು ಇಲಾಖಾ ಕಛೇರಿಯ ಎದುರೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ.

ನಮ್ಮ ಪ್ರಮುಖ ಬೇಡಿಕೆಗಳು:-

01. ಲಾರಿ ಮಾಲೀಕರಾದ ಶ್ರೀ ನಾಗೇಶ್‌ರವರ ಕುಟುಂಬಕ್ಕೆ ಸರ್ಕಾರ ‘ಒಂದು ಕೋಟಿ ರೂ. ಪರಿಹಾರ ಧನವನ್ನು ಒಂದು ವಾರದೊಳಗೆ ಘೋಷಣೆ ಮಾಡಬೇಕು’.

02. ‘ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕವಾಗಿ ಒಂದು ವಾರದೊಳಗೆ ಅನುಷ್ಟಾನ’ಕ್ಕೆ ತರಬೇಕು. ಸರ್ಕಾರ ರಾಜಧನ ಪಾವತಿ ವ್ಯವಸ್ಥೆಯನ್ನು ಇದುವರೆಗೂ ಸಮರ್ಪಕಗೊಳಿಸದೇ ಇರುವುದರಿಂದ ಸರ್ಕಾರಕ್ಕೆ ಸಂದಾಯವಾಗತಕ್ಕ ರಾಜಧನ WEDA’s (Work Executive Department Agencies) and ನಿಂದ ಸರ್ಕಾರಕ್ಕೆ ಸಂದಾಯವಾಗಿರುವುದರಿಂದ ಈಗಾಗಲೇ ಕ್ವಾರಿ ಮತ್ತು ಕ್ರಷರ್ ಮಾಲೀಕರುಗಳಿಗೆ, ಲಾರಿ ಮಾಲೀಕರುಗಳಿಗೆ ವಿಧಿಸಿರುವ ಎಲ್ಲಾ ರೀತಿಯ ದಂಡವನ್ನು ‘ಮನ್ನಾ’ ಮಾಡಬೇಕು.

03. ಕ್ವಾರಿಗಳಿಗೆ ಮಾಡುತ್ತಿರುವ ಡೋಕ್ ಸರ್ವೆಯನ್ನು ಈಗಿನ ಪ್ರಸ್ತುತ ಭೂಮಟ್ಟವನ್ನು ದಾಖಲಿಸಿ ಮುಂದಿನ ಲೆಕ್ಕ ಪರಿಶೋಧನೆಗೆ ಅನುವು ಮಾಡಿಕೊಡಬೇಕು ಹೊರತು ಇದುವರೆಗೆ ತೆಗೆದಿರುವ ಖನಿಜಗಳ ಲೆಕ್ಕ ಹಾಕಿ ದಂಡ ವಿಧಿಸಬಾರದು ಎಂದು ಶ್ರೀ ಡಾ॥ ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷರು, ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಒರ್ನ ಅಸೋಸಿಯೇಷನ್(ರಿ), ಬೆಂಗಳೂರು. ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936