ಲೋಕಾಯುಕ್ತ ಮತ್ತು ಜಾಗೃತ ಕೋಶ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತನಿಖೆ ವಿಳಂಬ ವಾಗುತ್ತಿರುವುದಕ್ಕೆ ಆಕ್ಷೇಪಿಸಿ ಪತ್ರಿಕಾ ಘೋಷ್ಠಿ

ಲೋಕಾಯುಕ್ತ ಮತ್ತು ಜಾಗೃತ ಕೋಶ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತನಿಖೆ ವಿಳಂಬ ವಾಗುತ್ತಿರುವುದಕ್ಕೆ ಆಕ್ಷೇಪಿಸಿ ಪತ್ರಿಕಾ ಘೋಷ್ಠಿಯನ್ನು ಆಯೋಜಿಸುತ್ತಿದ್ದೇವೆ.

ದಿನಾಂಕ:17-12-2021 ರಂದು ರಾಜ್ಯದಲ್ಲಿ ಖಾಲಿ ಇದ್ದ 88 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳ ಭರ್ತಿಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಹಣ ಕೊಟ್ಟು ರೋಸ್ಟರ್ ಕಂ ಮೆರಿಟ್ ಪದ್ಧತಿಯನ್ನು ಪಾಲಿಸದೇ ಅಕ್ರಮವಾಗಿ ಆಯ್ಕೆಗೊಂಡಿದ್ದು, ಈ ಅಕ್ರಮದಲ್ಲಿ ಭಾಗಿಯಾಗಿರುವವರಲ್ಲಿ ಮಾಜಿ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಸದಸ್ಯ ಕಾರ್ಯದರ್ಶಿ, ವಿಶೇಷ ನೇಮಕಾತಿ ಸಮಿತಿಯ ಮುಖ್ಯ ಆಡಳಿತಾಧಿಕಾರಿ ಆರೋಗ್ಯ ಮತ್ತು ಕುಟುಂಬ ಎಲ್ಲಾ ಸಿಬ್ಬಂದಿಗಳು ಮತ್ತು ಇವರಿಗೆ ಹಣ ಕೊಟ್ಟು ಆಯ್ಕೆಯಾಗಿ ಪ್ರಸ್ತುತ ರಾಜ್ಯದ ವಿವಿದೆಡೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ದಂತ ವೈದ್ಯಾಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ನಿಜವಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಕೋರುತ್ತೇವೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಖಾಲಿ ಇದ್ದ 88 ದಂತ ವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ.ಹೆಚ್.ಎಫ್.ಡಬ್ಲ್ಯೂ./71/ ಹೆಚ್.ಎಸ್.ಹೆಚ್./2019, ದಿನಾಂಕ: 16-06-2020 ಮತ್ತು ದಿನಾಂಕ:25-08-2020 ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಇವರಲ್ಲಿ ಸಾಕಷ್ಟು ಅಭ್ಯರ್ಥಿಗಳು ಮೇಲೆ ಉಲ್ಲೇಖಿಸಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ ರೋಸ್ಟರ್ ಕಂ ಮೆರಿಟ್ ಪಾಲಿಸದೇ ಅಕ್ರಮವಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಲೋಕಾಯುಕ್ತ ಮತ್ತು ಜಾಗೃತ ಕೋಶ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತನಿಖೆ ವಿಳಂಬ ವಾಗುತ್ತಿರುವುದಕ್ಕೆ ಆಕ್ಷೇಪಿಸಿ ಪತ್ರಿಕಾ ಘೋಷ್ಠಿಯನ್ನು ಆಯೋಜಿಸುತ್ತಿದ್ದೇವೆ.

ಅಕ್ರಮವಾಗಿ ಆಯ್ಕೆಯಾಗಿ ಮೆರಿಟ್ ಇದ್ದು ಅನ್ಯಾಯಗೊಂಡ ಇನ್ನು ಹಲವಾರು ಅಭ್ಯರ್ಥಿಗಳು ಈ ಹುದ್ದೆಯಿಂದ ವಂಚಿತರಾಗಿದ್ದಾರೆ. ಇವರಿಗೆ ಅನ್ಯಾಯವಾಗಿದೆ ಈ ಅನ್ಯಾಯವನ್ನು ಸರಿಪಡಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಯವರಿಗೆ ಹಾಗೂ ಆರೋಗ್ಯ ಸಚಿವರಿಗೆ ಹಾಗೂ ಕಾನೂನು ಸಚಿವರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಗಮನಕ್ಕೆ ತಂದರೂ ಕೂಡಾ ಇನ್ನು ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಅದಕ್ಕಾಗಿ ಅನ್ಯಾಯವಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕೆಂದು ನಮ್ಮ ಕಳಕಳಿಯ ಮನವಿ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

ಯೋಗೀಶ್ ಆರಾಧ್ಯ, ಡಾ|| ನರಸಿಂಹಮೂರ್ತಿ ಶ್ರೀ ಲಕ್ಷ್ಮಿ ಡೆಂಟಲ್ ಕ್ಲಿನಿಕ್, ಏಳೂರು, ಡಾ. ಪ್ರಕಾಶ್ ಮತ್ತು ನಳೀನಾ, ವಕೀಲರು ಪತ್ರಿಕಾ ಗೋಷ್ಠಿ ಯಲ್ಲಿ ಹಾಜರಿದ್ದರು.

City Today News 9341997936