
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹ ದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ ಹಾಗೂ ಧರ್ಮಾಧಿಕಾರಿಗಳಾದ ಜಿ ,ಕೆ ಆಚಾರ್ಯರ ನೇತೃತ್ವದಲ್ಲಿ “ಚಂದ್ರ ಗ್ರಹಣ” ಶಾಂತಿಯ ನಿಮಿತ್ತ ಲೋಕ ಕಲ್ಯಾಣಕ್ಕಾಗಿ ಮಧ್ಯ ರಾತ್ರಿ 1 ಗಂಟೆ 2 ನಿಮಿಷದಿಂದ 2 ಗಂಟೆ 11 ನಿಮಿಷದವರೆಗೆ ಚಂದ್ರ ಗ್ರಹಣ ನವಗ್ರಹದ ಶಾಂತಿಯ ಹೋಮ ವನ್ನು ಪುರೋಹಿತರಾದ ನಂದಕಿಶೋರ್ ಆಚಾರ್ಯ, ಗೊಗ್ಗಿ ರಾಮಚಂದ್ರ ಚಾರ್ಯರ ಪೌರೋಹಿತ್ಯದಲ್ಲಿ ನವಗ್ರಹ ಸಹಿತ ಚಂದ್ರ ಗ್ರಹಣ ಶಾಂತಿ ಹೋಮವನ್ನು “ಲೋಕ ಕಲ್ಯಾಣಕ್ಕಾಗಿ”ಸಂಕಲ್ಪಿಸಿ ಮತ್ತು ಸೇವಾಕರ್ತಗಳ ಹಾಗೂ ಭಕ್ತರ ಹೆಸರುಗಳ ಉಚ್ಚಾರಣೆ ಯೊಂದಿಗೆ ಸಂಕಲ್ಪಿಸಿ ಹೋಮ ವನ್ನು ಮಾಡಲಾಯಿತು, ವಿಶೇಷವಾಗಿ ರಂಗೋಲಿಯಲ್ಲಿ ಅರಳಿದ ಶ್ರೀ ಲಕ್ಷ್ಮೀನರಸಿಂಹ ದೇವರನ್ನು ಮಂಡಲದಲ್ಲಿ, ಧ್ಯಾನಿಸಿ ದೇವರ ಪ್ರಾರ್ಥನೆಯೊಂದಿಗೆ ಸಮಾಪ್ತಿಯಾಯಿತು ಈ ಮಧ್ಯರಾತ್ರಿಯ ಪೂಜಾ ಕಾರ್ಯಕ್ರಮದಲ್ಲಿ ಶ್ರೀಮಠದ ಸಿಬ್ಬಂದಿಗಳು ಮತ್ತು ನೂರಾರು ಭಕ್ತಾದಿಗಳು ಭಾಗವಹಿಸಿ, ಶ್ರೀ ಹರಿ ವಾಯು ಗುರು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.
City Today News 9341997936

You must be logged in to post a comment.