ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಅಧಿಕೃತವಾಗಿ 1999ರಲ್ಲಿ ರಾಜವೀರ ಮದಕರಿ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತವನ್ನು ನಿರ್ಮಿಸಿದ್ದರು ಸಹ ಆ ಮಹಾದ್ವಾರವನ್ನು ಜಿಲ್ಲಾಡಳಿತದವರು ತೆರವುಗೊಳಿಸಿರುತ್ತಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಅಧಿಕೃತವಾಗಿ 1999ರಲ್ಲಿ ರಾಜವೀರ ಮದಕರಿ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತವನ್ನು ನಿರ್ಮಿಸಿದ್ದರು ಸಹ ಆ ಮಹಾದ್ವಾರವನ್ನು ಜಿಲ್ಲಾಡಳಿತದವರು ತೆರವುಗೊಳಿಸಿರುತ್ತಾರೆ.

ದಿನಾಂಕಃ 11-03-2024 ರಂದು ಹರಿಹರ ತಾಲ್ಲೂಕು ಭಾನುವಳ್ಳಿ ಗ್ರಾಮದಲ್ಲಿ ರಾಜವೀರ ಮದಕರಿ ಮಹಾದ್ವಾರ ಮತ್ತು ವಾಲ್ಮೀಕಿವೃತದ ನಾಮಫಲಕವನ್ನು ಜಿಲ್ಲಾಡಳಿತದವರು ತೆರವುಗೊಳಿಸಿದ್ದು ತುಂಬಾ ಖಂಡನೀಯ ಹಾಗೂ ವಿಷಾದವನ್ನು ವ್ಯಕ್ತಪಡಿಸುತ್ತಿದ್ದೇವೆ.

ಈ ಹಿಂದೆ 1999ರಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಅನುದಾನದಡಿಯಲ್ಲಿ ನಿರ್ಮಾಣಗೊಂಡು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಜಗದ್ಗುರು ಪುಣ್ಯನಂದಪುರಿ ಇವರ ದಿವ್ಯಸಾನಿದ್ಯದಲ್ಲಿ ಹಾಗೂ ಅಂದಿನ ಸಚಿವರಾದ ಹೆಚ್.ಶಿವಪ್ಪನವರು ರಾಜವೀರ ಮದಕರಿ ಮಹಾದ್ವಾರವನ್ನು ಉದ್ಘಾಟನೆ ಮಾಡಿ ವಾಲ್ಮೀಕಿ ಸಮುದಾಯದವರಿಗೆ ಕೊಡುಗೆಯನ್ನು ಕೊಟ್ಟಿರುತ್ತಾರೆ. ಇಂತಹ ಮಹನೀಯರು ಉದ್ಘಾಟನೆ ಮಾಡಿರುತ್ತಾರೆ. ಅನ್ಯಕೋಮಿನ ಜನಾಂಗದವರು ಈ ಸಮಾಜದ ಏಳಿಗೆ ಬಯಸದೆ ಇಂತಹ ಹೀನ ಕೃತ್ಯವನ್ನು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಮಾಡಿರುತ್ತಾರೆ. ಇದನ್ನು ಅವಲೋಕಿಸದೇ ಸರ್ಕಾರದಿಂದ ಮಂಜೂರಾದ ಅನುದಾನದಿಂದ ರಾಜವೀರ ಮದಕರಿ ಮಹಾದ್ವಾರದ ದ್ವಾರಬಾಗಿಲು ನಿರ್ಮಾಣಗೊಂಡು ಇಲ್ಲಿಗೆ ಸರಿಸುಮಾರು 25 ವರ್ಷಗಳು ಆಗಿದ್ದು, ಇತ್ತೀಚೆಗೆ ಭಾನುವಳ್ಳಿ ಗ್ರಾಮಪಂಚಾಯ್ತಿಯ ಪಿ.ಡಿ.ಒ. ಮತ್ತು ಕಾರ್ಯದರ್ಶಿಯವರ ಕುಮ್ಮಕ್ಕಿನಿಂದ ಜಾತಿ ಸಂಘರ್ಷಣೆ ತಂದಿರುವ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು. ಸದರಿ ಅಧಿಕಾರಿಗಳು ನಾಮಫಲಕವನ್ನು ತೆರವುಗೊಳಿಸಿ ನಷ್ಟಮಾಡಿರುವುದಲ್ಲದೆ ನಾಡಿನ ಇತಿಹಾಸ ಪುರಷ ಮದಕರಿ ನಾಯಕರಿಗೆ ಅಪಮಾನಗೊಳಿಸಿದಂತೆ ಆಗಿರುತ್ತದೆ. ಅದಕ್ಕಾಗಿ ಸರ್ಕಾರವು ರಾಜವೀರ ಮದಕರಿ ಮಹಾದ್ವಾರವನ್ನು ಪುನ‌ರ್ ಪ್ರತಿಷ್ಠಾಪನೆ ಮಾಡಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಸರ್ಕಾರದ ವಿರುದ್ದ ಉಪ್ಪ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಈ ಮೂಲಕವಾಗಿ ತಮ್ಮ ಗಮನಕ್ಕೆ ತಂದು ಮನವಿಯ ಮೂಲಕ ಕೇಳಿಕೊಳ್ಳುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಡಾ.ಟಿ. ಆರ್. ತುಳಸಿರಾಮ್ ತಿಳಿಸಿದರು.

ಪತ್ರಿಕಾ ಗೋಷ್ಠಿ ಯಲ್ಲಿ ಜನಾರ್ಧನ ರಾಜ್ಯ ಪ್ರಧಾನ ಕಾರ್ಯದರ್ಶಿ, ಪ್ರಕಾಶ್. ಪಿ, ಅಧ್ಯಕ್ಷರು,ಬೆಂಗಳೂರು ನಗರ ಜಿಲ್ಲೆ,- ಅಖಿಲ ಕರ್ನಾಟಕ ವಾಲ್ಮೀಕಿ ಮಹಾ ಸಭಾ ಯುವ ಘಟಕ,ಕೆ.ಸಿ, ನಾಗರಾಜು, ಅಧ್ಯಕ್ಷರು -ಕಾರ್ಮಿಕ ಘಟಕ,ರಂಗನಾಥ ನಾಯಕ ಮತ್ತು ರಾಜ್ಯ ನಿರ್ದೇಶಕರು ಉಪಸ್ಥಿತರಿದ್ದರು.

City Today News 9341997936