
ವಾಲ್ಮೀಕಿ ನವಸಮಾಜ ಸಂಘದ ವತಿಯಿಂದ ದಿನಾಂಕ: 01-07-2024 ರ ಬೆಳಗ್ಗೆ 11.00 ಗಂಟೆಗೆ ಪ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಪ್ರತಿಭಟನೆಯು ಕರ್ನಾಟಕ ಮಹರ್ಷಿ ವಾಲೀಕ್ಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ಅವ್ಯವಹಾರದ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ನಾವು ಪರಿಶಿಷ್ಟ ಪಂಗಡದ ಸಮಾಜದವರಾಗಿ ನಮ್ಮ ಸಮುದಾಯದ ಬಡ ಮತ್ತು ಆರ್ಥಿಕ ಹಿಂದುಳಿದ ವರ್ಗದ ಜನರಿಗೆ ಅನ್ಯಾಯವಾಗಿದ್ದು ಈ ನಿಗಮದಲ್ಲಿ ಸಿಗಬಹುದಾದ ಸವಲತ್ತುಗಳು ಜನರಿಗೆ ತಲುಪದೇ ಅನ್ಯಾಯವಾಗಿರುತ್ತದೆ. ಮತ್ತು ಸಮಾಜದ ಇನ್ನು ಅನೇಕ ಬೇಡಿಕೆಗಳು ಇದುವರೆಗೂ ಸರ್ಕಾರವು ಈಡೇರಿಸದೇ ಇರುವುದು.
ನಮ್ಮ ಸಂಘದ ಧರಣಿಯ ಪ್ರಮುಖ ಬೇಡಿಕೆಗಳು
1. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ಅಕ್ರಮ ಹಣ ವರ್ಗಾವಣೆ ಕುರಿತು ಶೀಘ್ರ ತನಿಖೆ ಮಾಡಬೇಕು.
2. ಪರಿಶಿಷ್ಟ ಪಂಗಡದ 7% ಮೀಸಲಾತಿಯನ್ನು ಸಂವಿಧಾನದ ಅನುಚ್ಛಿತದ 9 ರಲ್ಲಿ ಸೇರ್ಪಡೆ ಮಾಡುವುದು.
3. ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆಗಟ್ಟಬೇಕು.
4. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬಾನುವಳಿ ಗ್ರಾಮದಲ್ಲಿ ತೆರವು ಗೊಳಿಸಲಾದ ರಾಜ್ಯ ವೀರ ಮದಕರಿ ನಾಯಕ ಮಹಾದ್ವಾರ ಮತ್ತು ವಾಲ್ಮೀಕಿ ನಾಮಫಲಕ ಮರು ಸ್ಥಾಪನೆ ಕುರಿತು ಮತ್ತು ಸಮಾಜದ ಮುಖಂಡರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿದೆ.
5. ಕಲ್ಯಾಣ ಕರ್ನಾಟಕ ಪ್ರತಿ ತಾಲ್ಲೂಕಿನಲ್ಲಿ ಪರಿಶಿಷ್ಟ ಪಂಗಡದ ಹಾಸ್ಟೆಲ್ ಸುಧಾರಣೆ ಮತ್ತು ಹೊಸ ಹಾಸ್ಟೆಲ್‌ಗಳ ನಿರ್ಮಾಣವನ್ನು ಮಾಡಬೇಕು
6. ಪರಿಶಿಷ್ಟ ಪಂಗಡಗಳಲ್ಲಿ ಹಣಕಾಸು ಸೌಲಭ್ಯವನ್ನು ಅದೇ ವರ್ಷದಲ್ಲಿ ಮೀಸಲ್ಟಿ ಹಣವನ್ನು ಸಮಾಜದ ಹೊಳಿತಿಗಾಗಿ ಖರ್ಚು ಮಾಡಬೇಕು.
7. ಬೆಂಗಳೂರಿನ ಹೃದಯಭಾಗದಲ್ಲಿ ವಾಲ್ಮೀಕಿ ಭವನವನ್ನು ನಿರ್ಮಾಣ ಮಾಡಬೇಕು.
8. ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಎಂದು ಮರು ನಾಮಕರಣ ಮಾಡಬೇಕು.
9. ವಾಲ್ಮೀಕಿ ಅಧ್ಯಯನ ಪೀಠಕ್ಕೆ ಹೆಚ್ಚುವರಿ ಹಣಕಾಸನ್ನು ಒದಗಿದುವುದು.
10. ದೇವನಹಳ್ಳಿಯಲ್ಲಿ ವಾಲ್ಮೀಕಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ಅಗ್ರಹ
11. ಎಸ್.ಇ.ಪಿ./ಟಿ.ಎಸ್.ಪಿ. ಮೀಸಲ್ಸಿ ಹಣವನ್ನು ಯಾವುದೇ ಕಾರಣಕ್ಕೂ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡುವಂತಿಲ್ಲ.
12. ಪರಿಶಿಷ್ಟ ಪಂಗಡದ ಸಮುದಾಯದಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನಗಳನ್ನು ಒದಗಿಸಬೇಕು.
13. ಗ್ರಾಮ ಪಂಚಾಯತಿಗಳಲ್ಲಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಮೀಸಲಿರುವ ಹಣವನ್ನು ಅದೇ ವರ್ಷದಲ್ಲಿ ಸಮುದಾಯದ ಹೊಳತಿಗಾಗಿ ಖರ್ಚು ಮಾಡಬೇಕು.
14. ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಎಲ್ಲಾ ಸಹಕಾರ ಸಂಸ್ಥೆಗಳಲ್ಲಿ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಕಲ್ಪಿಸಿಕೊಡಬೇಕು.
15. ಗೋಮಾಳದಲ್ಲಿ ಕೃಷಿಯನ್ನು ಕೈಗೊಂಡಿರುವ ಪರಿಶಿಷ್ಟ ಪಂಗಡದವರಿಗೆ ಸಾಗುವಳಿ ಚೀಟಿಯನ್ನು ಶೀಘ್ರ ಮಂಜೂರು ಮಾಡಬೇಕು.
16. ಕೇಂದ್ರ ಮತ್ತು ರಾಜ್ಯಸರ್ಕಾರದ ಅಡಿಯಲ್ಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡುವುದು.
17. ಚಿತ್ರದುರ್ಗದಲ್ಲಿ ಮದಕರಿ ನಾಯಕ ತೀಮ್ ಪಾರ್ಕ್‌ನ್ನು ನಿರ್ಮಾಣ ಮಾಡಬೇಕು.
18. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಲಸೆಯನ್ನು ತಡೆಗಟ್ಟಲು ಕೈಗಾರಿಕೆಗಳನ್ನು ಸ್ಥಾಪನೆ ಮಾಡಬೇಕು.
19. ಪಡಿಯುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಕಡ್ಡಾಯ ಹಾಸ್ಟೆಲ್ ಪ್ರವೇಶದ ಅವಕಾಶವನ್ನು ಕಲ್ಪಿಸಿಕೊಡಬೇಕು
20.ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿವೇತನ ಮತ್ತು ಮೆರಿಟ್ ಪ್ರೋತ್ಸಾಹದ ಹಣವು ಇನ್ನು ವಿಳಂಬವಾಗಿದ್ದು ಶೀಘ್ರವೇ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡುವುದು.
21. ಕರ್ನಾಟಕ ರಾಜ್ಯದಲ್ಲಿ ವಿಶೇಷ ಅನುದಾನಗಳ ಮೂಲಕ ಪರಿಶಿಷ್ಟ ಪಂಗಡಗಳ ಕಾಲೋನಿಗಳ ಅಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ಕೊಡಬೇಕು.
22.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ಮದ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ, ನಿಜವಾದ ಪಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆಗಳನ್ನು ಜನರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು.
23.ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠವನ್ನು ಸ್ಥಾಪಿಸಲು ಸೂಕ್ತ ಸೂಚನೆಯನ್ನು ನೀಡಬೇಕು.
ಈ ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಪ್ರತಿಭಟನೆಯನ್ನು ಕೈಗೊಳ್ಳಲಾಗಿದ್ದು, ವಾಲ್ಮೀಕಿ ಸಮಾಜದ ಎಲ್ಲಾ ಬಂಧುಗಳು, ಸಮುದಾಯದ ಎಲ್ಲಾ ಸಂಘಟನೆಗಳು ಸಂಘಟನೆಗಳ ರಾಜ್ಯಾಧ್ಯಕ್ಷರಗಳು, ಪದಾಧಿಕಾರಿಗಳು ಮತ್ತು ಎಲ್ಲಾ ಸಂಘಟನೆಗಳ ಸದಸ್ಯರುಗಳು ಸಮಾಜದ ಮುಖಂಡರುಗಳು, ಜನಪ್ರತಿನಿಧಿಗಳು ಒಟ್ಟಿಗೆ ಭಾಗವಹಿಸಿ, ರಾಜ್ಯದಲ್ಲಿ ವಾಲ್ಮೀಕಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಮತ್ತು ನಮ್ಮ ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ವಾಲ್ಮೀಕಿ ಸಮಾಜದ ದ್ವನಿಯು ಸರ್ಕಾರಕ್ಕೆ ಮುಟ್ಟುವಂತೆ ಮಾಡಲು ಈ ಪ್ರತಿಭಟನೆಯಲ್ಲಿ ಎಲ್ಲರೂ ಪಕ್ಷತೀತವಾಗಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇವೆ ಎಂದು ಸಂಘದ ವತಿಯಿಂದ ಹೇಳಿಕೆ ನೀಡಲಾಯಿತು.
ಪತ್ರಿಕಾ ಗೋಷ್ಠಿ ಯಲ್ಲಿ ಡಿ. ಎನ್. ಲಕ್ಷ್ಮೀಪತಿ-ಅಧ್ಯಕ್ಷರು, ಲಿಂಗಯ್ಯ ನಾಯಕ್ -ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷರು, ರಾಮಾಂಜೀ -ಕಾರ್ಯಧರ್ಶಿ, ಮತ್ತು ಸಂಘದ ವತಿಯಿಂದ ನಾಯಕರುಗಳಾದ ಶ್ರೀನಿವಾಸ್ ನಾಯಕ್, ಈರೇಶ್ ನಾಯಕ್ ಮತ್ತು ಶಿವರಾಜ್ ನಾಯಕ್ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.
City Today News 9341997936

You must be logged in to post a comment.