ವಾಸನ್ ಐ ಕೇರ್ ಯಿಂದ ನವೀನ ಕಾಂಟೌರಾ ಲೇಸರ್ ವಕ್ರೀಕಾರಕ ಸೂಟ್ ಪ್ರಾರಂಭ

ಭಾರತದ ಮೂನ್ ಮ್ಯಾನ್ – ಪದ್ಮಶ್ರೀ ಡಾ.ಮೈಲ್ಸಾಮಿ ಅಣ್ಣಾದೊರೈ ರವರಿಂದ ವಾಸನ್ ಕಣ್ಣಿನ ಆಸ್ಪತ್ರೆಯಲ್ಲಿ ಕಾಂಟೌರಾ ಲೇಸರ್ – ವಕ್ರೀಕಾರಕ ಸೂಟ್ ಉದ್ಘಾಟನೆ.

ಬೆಂಗಳೂರು, ಡಿಸೆಂಬರ್ 17, 2023: ಕಾಂಟೌರಾ ಲೇಸರ್ ವಕ್ರೀಕಾರಕ ಸೂಟ್ ನನ್ನು ವಾಸನ್ ಕಣ್ಣಿನ ಆಸ್ಪತ್ರೆ ರಾಜಾಜಿನಗರ ಶಾಖೆಯಲ್ಲಿ ಅಳವಡಿಸಲ್ಪಟ್ಟಿದ್ದು, ಈ ಮಹತ್ವದ ಸಂದರ್ಭದಲ್ಲಿ, ಹೊಸ ಸೌಲಭ್ಯದ ಅನಾವರಣಗೊಳಿಸುವುದಲ್ಲದೆ, ಸುಧಾರಿತ ವೈದ್ಯಕೀಯ ಆರೈಕೆ ಹಾಗೂ ಅತ್ಯಾಧುನಿಕ ಹೊಸ ಯುಗದ ತಂತ್ರಜ್ಞಾನಕ್ಕೆ ವಾಸನ್ ಕಣ್ಣಿನ ಆಸ್ಪತ್ರೆ ನಾಂದಿ ಹಾಡಿದೆ.

ಆರೋಗ್ಯ ಸೇವೆಯಲ್ಲಿನ ಶ್ರೇಷ್ಠತೆಯ ಅನ್ವೇಷಣೆಯಲ್ಲಿ, ನಮ್ಮ ಶಸ್ತ್ರಚಿಕಿತ್ಸಾ ವಿಭಾಗ ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಗಳೊಂದಿಗೆ ಸುಸಜ್ಜಿತವಾಗಿದೆ. ವಕ್ರೀಕಾರಕ ಶಸ್ತ್ರ ಚಿಕಿತ್ಸೆಯಲ್ಲಿ ಅತ್ಯುನ್ನತ ಗುಣಮಟ್ಟವನ್ನು ಒದಗಿಸಲು, ಈ ಕೌಂಟೌರಾ ಲೇಸರ್ ನಲ್ಲಿ ನಿಖರತೆ ದಕ್ಷತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಸದಾ ಮೀಸಲಾದ ನುರಿತ ಶಸ್ತ್ರಚಿಕಿತ್ಸಕರು ಹಾಗೂ ಆರೋಗ್ಯ ವೃತ್ತಿಪರರ ತಂಡವು ಈ ಸೌಲಭ್ಯವನ್ನು ಪೂರ್ಣ ಸಾಮರ್ಥ್ಯಕ್ಕೆ ಬಳಸಿಕೊಂಡು ಅತ್ಯುತ್ತಮವಾದ ಫಲಿತಾಂಶಗಳನ್ನು ನೀಡುವಲ್ಲಿ ಸಿದ್ದವಾಗಿದೆ.

ಈ ಸೌಲಭ್ಯವನ್ನು, ಭಾರತದ ಮೂನ್ ಮ್ಯಾನ್ ಎಂದೇ ಖ್ಯಾತಿಯಾಗಿರುವ ಪದ್ಮಶ್ರೀ ಡಾಕ್ಟರ್ ಮೈಲ್ಸಾಮಿ ಅಣ್ಣಾದೊರೈ ಅವರು ಭಾನುವಾರ ಡಿಸೆಂಬರ್ ದಿನಾಂಕ 11ರಂದು ವಾಸನ್ ಕಣ್ಣಿನ ಆಸ್ಪತ್ರೆ, ಬೆಂಗಳೂರಿನ ರಾಜಾಜಿನಗರದ ಶಾಖೆಯಲ್ಲಿ ಉದ್ಘಾಟಿಸಿದರು.

ಗಮನಾರ್ಹವಾದ ಕಾಂಟೌರಾ ಲಾಸಿಕ್ ಎಂಬ ದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಸಹಕರಿಸಿದ ಎಲ್ಲರಿಗೂ ವಾಸನ್ ಕಣ್ಣಿನ ಆಸ್ಪತ್ರೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ರೋಗಿಗಳ ಯೋಗಕ್ಷೇಮಕ್ಕಾಗಿ ತಮ್ಮ ಅಚಲವಾದ ಸಮರ್ಪಣೆಯನ್ನು ಮುಂದುವರೆಸಿದೆ.

For Further Information, Please Contact

Name: Mr. Sundaramurugesan

Mob: +91 97862 00009

Email: Sundaramurugesan@gmail.com

Mr. Nagendra

Mob: +91 90365 45223

Email: nagendra.zonalmarketing@vasaneye.com

City Today News 9341997936