
ಬೆಂಗಳೂರು, ಮಾರ್ಚ್ 18: ವಿಕಲಚೇತನರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟವು ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸುವ ಸಲುವಾಗಿ ‘ವಿಧಾನಸೌಧ ಚಲೋ’ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದೆ. ಶ್ರೀ ಜಗತ್ ಜ್ಯೋತಿ ಬಸವಣ್ಣನವರ ಜನ್ಮ ಸ್ಥಳ ಬಸವನ ಬಾಗೇವಾಡಿಯಿಂದ ಈ ಚಳುವಳಿ ಆರಂಭಗೊಂಡಿದ್ದು, ಮಾರ್ಗಮಧ್ಯೆ ನಾನಾ ಜಿಲ್ಲೆಗಳ ಮೂಲಕ ಬೆಂಗಳೂರು ವಿಧಾನಸೌಧಕ್ಕೆ ತಲುಪಲಿದೆ.
ವಿಕಲಚೇತನರ ಪ್ರಮುಖ ಬೇಡಿಕೆಗಳು:
1. ಪ್ರತಿಮಾಸ ₹6,000 ಮಾಸಾಶನವನ್ನು ಏಕರೂಪದಲ್ಲಿ ಹೆಚ್ಚಳ ಮಾಡಬೇಕು.
2. ವಿಕಲಚೇತನರಿಗೆ ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡಬೇಕು.
3. ರಾಜಕೀಯ ಮೀಸಲಾತಿ ನೀಡಬೇಕು.
4. ವಿಕಲಚೇತನರು ಮತ್ತು ಅವರ ಮಕ್ಕಳು ನವೋದಯ, ಸೈನಿಕ್, ಕಿತ್ತೂರ ರಾಣಿ ಚನ್ನಮ್ಮ, ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಮೀಸಲಾತಿ ಕಲ್ಪಿಸಬೇಕು.
5. ವಿಕಲಚೇತನರಿಗೆ ಎಸ್‌ಸಿ/ಎಸ್‌ಟಿ ಸಮಾನ ಹಕ್ಕುಗಳನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಜಾರಿಗೆ ತರಬೇಕು.
6. ರಾಜ್ಯಾದಂತ್ಯ ವಿಕಲಚೇತನರಿಗೆ ಉಚಿತ ಬಸ್ ಪಾಸ್ ನೀಡಬೇಕು.
7. ವಿಕಲಚೇತನರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು.
8. ವಿಆರ್‌ಡಬ್ಲೂ & ಎಂಆರ್‌ಡಬ್ಲೂ ಹುದ್ದೆಗಳನ್ನು ಕಾಯಂಗೊಳಿಸಬೇಕು.
9. ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಶೇ.5 ರಷ್ಟು ಹುದ್ದೆಗಳನ್ನು ವಿಕಲಚೇತನರಿಗೆ ಮೀಸಲಾತಿ ಮಾಡಬೇಕು.
10. ಎಸ್‌ಸಿ/ಎಸ್‌ಟಿ ಭೂ ಹಕ್ಕು ಯೋಜನೆಗಳನ್ನು ವಿಕಲಚೇತನರಿಗೂ ವಿಸ್ತರಿಸಬೇಕು.
ಚಳುವಳಿಯ ಮಾರ್ಗ:
ಬಸವನ ಬಾಗೇವಾಡಿಯಿಂದ ಪ್ರಾರಂಭವಾದ ಈ ಬೈಕ್ ರ್ಯಾಲಿ ನಿಡಗುಂದಿ, ಹುನಗುಂದ, ಇಲಕಲ್ಲು, ಕುಷ್ಟಗಿ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಮುಂತಾದ ಸ್ಥಳಗಳ ಮೂಲಕ ಬೆಂಗಳೂರು ವಿಧಾನಸೌಧಕ್ಕೆ ತಲುಪಲಿದೆ.
ಈ ಬಗ್ಗೆ ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟದ ನಾಯಕರಾದ ಮಲ್ಲಿಕಾರ್ಜುನ ಬಿರಾದರ, ರಘು ಎನ್ ಹುಬ್ಬಳ್ಳಿ, ಪಾಲ್ ರಾಮನಾಥನ್, ಆರುಣಕುಮಾರ ಎಸ್ ಮತ್ತು ನಾಗು ಕರಭಂಟನಾಳ ಅವರ ನೇತೃತ್ವದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.
City Today News 9341997936

You must be logged in to post a comment.