ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಸ್ಥಬ್ಧ ಚಿತ್ರಗಳಿಗೆ ಪ್ರಶಸ್ತಿಗಳ ವಿತರಣೆಯಲ್ಲಿ ತಾರಾತಮ್ಯವೆಸಗಿರುವುದರಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಸ್ಥಬ್ಧಚಿತ್ರಗಳಿಗೆ ಪ್ರಶಸ್ತಿ ನೀಡುವಲ್ಲಿ ಅನ್ಯಾಯವೆಸಗಲಾಗಿದೆ. ಈ ಬಾರಿ ಬಾಗಲಕೋಟೆ ಜಿಲ್ಲೆಯಿಂದ ಕರ್ನಾಟಕದ ಶ್ರೇಷ್ಠ ಕವಿ ರನ್ನನ ಗಧಾಯುದ್ಧ ಮತ್ತು ಶ್ರೀಕೃಷ್ಣ ಪಾರಿಜಾತ, ಐಹೊಳೆ ದುರ್ಗಾ ದೇವಸ್ಥಾನ ಹಾಗೂ ಜಿಲ್ಲೆಯ ಹೆಸರಾಂತ ಕಲಾವಿಧರ ಭಾವಚಿತ್ರಗಳನ್ನೊಳಗೊಂಡ ಸ್ಥಬ್ದಚಿತ್ರ ದಸರಾದಲ್ಲಿ ಪ್ರದರ್ಶನಗೊಂಡಿದ್ದು, ಬಹುಸಂಖ್ಯಾತ ಎಲ್ಲಾ ಜನರ ಮೆಚ್ಚುಗೆಗೆ ಪಾತ್ರವಾದ ಆಕರ್ಷಣೀಯ ಸ್ತಬ್ಧಚಿತ್ರವಾಗಿತ್ತು. ಅದರ ನಿರ್ಮಾಣ ಮಾಡಲು ನಿಗದಿಪಡಿಸಿದ್ದ ಸಮಯಕ್ಕೆ ಸರಿಯಾಗಿ ತಯಾರಿ ಮಾಡಿಕೊಡಲಾಯಿತು. ಆದರೆ ಆಯ್ಕೆ ಮಾಡುವ ಸಮಯದಲ್ಲಿ ನಿಯಮಗಳನ್ನು ಪಾಲಿಸದೆ ಉತ್ತರ ಕರ್ನಾಟಕವನ್ನು ಪ್ರಶಸ್ತಿಯಿಂದ ವಂಚನೆಗೊಳಪಡಿಸಲಾಗಿದೆ. ಆಡಳಿತ ಪಕ್ಷದ ಶಿಫಾರಸ್ಸುಗಳಿಗೆ ಒಳಗಾಗಿರುವ ಶಂಖೆ ವ್ಯಕ್ತವಾಗುತ್ತಿದೆ. ಪ್ರತಿವರ್ಷವೂ ಮಂಡ್ಯ ಚಾಮರಾಜನಗರ, ಮೈಸೂರು, ಮಡಿಕೇರಿ ಹೀಗೆ ಸತತವಾಗಿ ಇವರಿಗೆ ಮಾತ್ರ ಪ್ರಶಸ್ತಿಗಳನ್ನು ಕೊಡುತ್ತಾ ಬಂದಿರುತ್ತಾರೆ. ಆದರೆ ಉತ್ತರ ಕರ್ನಾಟಕದ ಕಲಾವಿಧರನ್ನು ಮತ್ತು ಸ್ತಬ್ಧಚಿತ್ರಗಳು ಮತ್ತು ಅದರಲ್ಲೂ ಖ್ಯಾತ ಕವಿ ರನ್ನನರ ಸ್ಥಬ್ಧ ಚಿತ್ರವನ್ನು ಆಯ್ಕೆಯಲ್ಲಿ ನಿರ್ಲಕ್ಷಿಸಲಾಗಿದೆ. ನಾವು ಅಖಂಡ ಕರ್ನಾಟಕವನ್ನು ಬಯಸಿರುವವರು. ಐತಿಹಾಸಿಕ ಮೈಸೂರು ದಸರಾ ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿ, ಕಲೆ ಸಾಹಿತ್ಯ, ಮತ್ತು ಕವಿಗಳ ಪರಿಚಯದ ಕ್ಷೇತ್ರಗಳನ್ನು ಪ್ರತಿಬಿಂಬಿಸುವ ಹಬ್ಬವಾಗಿ ಹೊಸ ಪೀಳಿಗೆಗೆ ಮನನ ಮಾಡಿಕೊಡುವ ಹಬ್ಬವಾಗಬೇಕೆಂದು ಸಾರ್ವಜನಿಕರು ಭಾವಿಸುತ್ತಾರೆ. ಕರ್ನಾಟಕದ ಎಲ್ಲಾ ವಿಭಾಗಗಳಿಂದಲೂ ಹೆಮ್ಮೆಯಿಂದ ಎಲ್ಲಾ ಜಿಲ್ಲೆಗಳಿಂದಲೂ ಸ್ಥಬ್ಧ ಚಿತ್ರಗಳನ್ನು ಜಿಲ್ಲಾ ಪಂಚಾಯಿತಿಗಳು ಅಪಾರ ವೆಚ್ಚ ಮಾಡಿ ಕಾಳಜಿಯಿಂದ ಕಳುಹಿಸುತ್ತಾರೆ. ಆದರೆ ಇಲ್ಲಿ ಮೈಸೂರು ವಿಭಾಗಕ್ಕೆ ಮಾತ್ರ ಪ್ರಾಧಾನ್ಯತೆಯನ್ನು ನೀಡಿ ಉತ್ತರ ಕರ್ನಾಟಕವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ. ಎನ್ನುವ ಹಾಗೆ ನಿರ್ಲಕ್ಷಿಸುತ್ತಿದ್ದಾರೆ. ಸ್ಥಬ್ಧ ಚಿತ್ರಗಳ ಪ್ರಶಸ್ತಿಗೆ ಆಯ್ಕೆ ಮಾಡುವ ಸಮಿತಿಯಲ್ಲಿ ನ್ಯಾಯಯುತವಾದ ಮಾನದಂಡಗಳನ್ನು ಅನುಸರಿಸದೆ ವಿವಿಧ ಕ್ಷೇತ್ರಗಳಲ್ಲಿ ನುರಿತ ತಜ್ಞರ ಕೊರತೆಯಿಂದಾಗಿ ಪ್ರಾಮಾಣಿಕವಾದ ತೀರ್ಪು ಬರಲು ಸಾಧ್ಯವಾಗುತ್ತಿಲ್ಲ. ತೀರ್ಪುಗಾರರು ಮೈಸೂರಿನವರೇ ಆಗಿರುವುದರಿಂದ ಅವರ ಪರಿಚಯವಿರುವ ವಿದ್ಯಾರ್ಥಿಗಳಿಗೆ ಮತ್ತು ಕಲಾವಿದರಿಗೆ ಶಿಫಾರಸ್ಸುಗಳ ಆಧಾರದ ಮೇಲೆ ಪ್ರಶಸ್ತಿ ಕೊಡುವ ಪರಂಪರೆಯನ್ನು ಇಲ್ಲಿಯವರೆಗೂ ಮುಂದುವರೆಸುತ್ತಾ ಬಂದಿರುತ್ತಾರೆ. ಎರಡು ವರ್ಷದ ಹಿಂದೆ ಈ ತಾರಾತಮ್ಯವನ್ನು ಬಾಗಲಕೋಟೆ ಜಿಲ್ಲೆಯಿಂದ ಪ್ರಶ್ನೆ ಮಾಡಿದಾಗ ಮೈಸೂರು ಜಿಲ್ಲಾ ಪಂಚಾಯಿತಿಯವರು ಮುಂದಿನ ಬಾರಿ ನಿಮಗೆ ಪ್ರಶಸ್ತಿ ಕೊಡುತ್ತೇವೆಂದು ಮಾಧ್ಯಮ ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟಿರುತ್ತಾರೆ. ಇವೆಲ್ಲಾ ಅಂಶವನ್ನು ಗಮನಿಸಿದಾಗ ಯಾವುದೇ ಮಾನದಂಡಗಳಿಗೆ ಮಾನ್ಯತೆ ನೀಡದೆ ಪ್ರಶಸ್ತಿಗಳನ್ನು ಕೊಟ್ಟಿರುವುದು ಕಂಡುಬರುತ್ತದೆ. ಕಟ್ಟಕಡೆಯ ಭಾಗ ಬೀದರ್‌ರವರು ಸಾವಿರ ಕಿ.ಮೀ ಗಳಿಂದ ಇಲ್ಲಿಗೆ ಬಂದು ಉತ್ತಮ ಸ್ಥಬ್ಧಚಿತ್ರ ರಚಿಸಿದರೂ ಪರಿಗಣಿಸಿರುವುದಿಲ್ಲ, ಒಟ್ಟಾರೆ ಹೇಳುವುದಾದರೆ ಇವರಿಗೆ ಉತ್ತರ ಕರ್ನಾಟಕದ ಸ್ಥಬ್ಧಚಿತ್ರಗಳು, ಕಲಾವಿಧರು ಲೆಕ್ಕಕ್ಕಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕದ ಜನತೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ಮತ್ತು ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ ಬದ್ದರಾಗಿರುವವರಾಗಿದ್ದು ಮಾನ್ಯ ಮುಖ್ಯ ಮಂತ್ರಿಯವರಲ್ಲಿ ನಾವೂ ಉತ್ತರ ಕರ್ನಾಟಕ ಎಲ್ಲಾ ಕಲಾವಿಧರ ಪರವಾಗಿ ಕೇಳಿಕೊಳ್ಳುವುದೇನೆಂದರೆ ಪ್ರಸ್ತುತ ಆಯ್ಕೆ ಮಾಡಿರುವ ಪ್ರಶಸ್ತಿಗಳ ಪಟ್ಟಿಯನ್ನು ರದ್ದು ಮಾಡಿ. ಕೂಡಲೇ ತಾವು ಸಂವಿಧಾನ ಜಾಗೃತಿ ಜಾತಾದಲ್ಲಿ ಸ್ಥಬ್ಧಚಿತ್ರಗಳಿಗೆ ವಿಭಾಗಾವಾರು ಪ್ರಶಸ್ತಿಗಳನ್ನು ಕೊಟ್ಟ ಹಾಗೆ ಸಾಮಾಜಿಕ ನ್ಯಾಯಕ್ಕೆ ದಕ್ಕೆಯಾಗದಂತೆ ಮೈಸೂರು ದಸರಾದ ಸ್ಥಬ್ದಚಿತ್ರಗಳನ್ನು ಮರು ಆಯ್ಕೆ ಮಾಡಿ ವಿಭಾಗಾವಾರು ಪ್ರಶಸ್ತಿಗಳನ್ನು ನೀಡಿ ನಮಗೆ ನ್ಯಾಯ ಒದಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಇಲಾಖಾ ಮಂತ್ರಿಗಳನ್ನು ಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ನಾವು ಉತ್ತರ ಕರ್ನಾಟಕದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆಂದು ಪ್ರಗತಿಪರ ಸಂಘಟನೆಗಳೆಲ್ಲರೂ ಕೂಡ ಎಚ್ಚರಿಸುತ್ತಿದ್ದೇವೆ.

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಪ್ರದರ್ಶನ ಆಗುತ್ತಿರುವ ಮಳಿಗೆಯಲ್ಲಿ ಬಾಬುಜಗಜೀವನರಾಂ ರವರ ಭಾವಚಿತ್ರವನ್ನು ಹಾಕದೆ ನಿರ್ಲಕ್ಷಿಸಿರುವುದಕ್ಕೆ ಸರ್ಕಾರವನ್ನು ಮತ್ತು ಸಮಾಜ ಕಲ್ಯಾಣ ಇಲಾಖೆಯ ಬೇಜವಾಬ್ದಾರಿ ತನವನ್ನು ಪ್ರಗತಿಪರ ಸಂಘಟನೆಗಳು ಖಂಡಿಸುತ್ತವೆ ಮತ್ತು ಅದನ್ನು ಸರಿಪಡಿಸಲು ಒತ್ತಾಯಿಸುತ್ತೇವೆ ಎಂದು ಕೇಶವಮೂರ್ತಿ ರಾಜ್ಯಾಧ್ಯಕ್ಷರು ಕರ್ನಾಟಕ ನಾಗರೀಕ ಹಕ್ಕುಗಳ ಜಾಗೃತಿ ಸಮಿತಿ, ಅಮರನಾರಾಯಣ ರಾಜ್ಯ ಕಾರ್ಯದರ್ಶಿಗಳು ವಿಶ್ವ ಆದಿಜಾಂಬವ ಮಹಾಸಭಾ,ಮೂರ್ತಿ ಎನ್ ಅಧ್ಯಕ್ಷರು ಬೆಂಗಳೂರು ನಗರ, ಕರ್ನಾಟಕ ನಾಗರೀಕ ಹಕ್ಕುಗಳ ಜಾಗೃತಿ ಸಮಿತಿ ಹಾಗೂ ನರಸಿಂಹಣ್ಣ ಗೌರವಾಧ್ಯಕ್ಷರು ಬೆಂಗಳೂರು ನಗರ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದವರುಗಳು ಜಂಟಿ ಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿನಡೆದ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936