ವೈಟ್‌ಫೀಲ್ಡ್ ನಲ್ಲಿ ಇಂಡಿಯಾ ಸ್ವೀಟ್ ಹೌಸ್‌ನ 30ನೇ ಮಳಿಗೆ ಉದ್ಘಾಟನೆ

ಬೆಂಗಳೂರು, ಆಗಸ್ಟ್ 1, 2024 – ಸಿಹಿತಿಂಡಿ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಹೆಸರಾಂತ ಸಂಸ್ಥೆ ಇಂಡಿಯಾ ಸ್ವೀಟ್ ಹೌಸ್ ತನ್ನ 30ನೇ ಮಳಿಗೆಯನ್ನು ಬೆಂಗಳೂರಿನ ವೈಟ್‌ಫೀಲ್ಡ್‌ ನ ಟೆಕ್ ಹಬ್‌ನಲ್ಲಿ ಅದ್ಧೂರಿಯಾಗಿ ಉದ್ಘಾಟನೆ ಮಾಡಿದೆ. ಸುಪ್ರಸಿದ್ಧ ಖಾದ್ಯ ಅನ್ವೇಷಕ ಕೃಪಾಲ್ ಅಮನ್ನಾ ಈ ಹೊಸ ಮಳಿಗೆಯನ್ನು ಉದ್ಘಾಟನೆಗೊಳಿಸಿ ಶುಭ ಹಾರೈಸಿದರು. 966, ಐಟಿಪಿಎಲ್ ಮುಖ್ಯ ರಸ್ತೆ, ಹೂಡಿಯಲ್ಲಿ ಇರುವ ಹೊಸ ಮಳಿಗೆಯಲ್ಲಿ ಭಾರತೀಯ ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಖಾದ್ಯಗಳು ದೊರೆಯಲಿದ್ದು, ಮಳಿಗೆಗೆ ಭೇಟಿ ನೀಡುವವರಿಗೆ ಸಿಹಿಯಾದ ಅನುಭವವನ್ನು ಒದಗಿಸಲಿದೆ. ಇಂಡಿಯಾ ಸ್ವೀಟ್ ಹೌಸ್ ಗೆ ಇದು ಮಹತ್ವದ ಮೈಲಿಗಲ್ಲಾಗಿದ್ದು , ಸಂಸ್ಥೆಯು ಕೇವಲ ಮೂರು ವರ್ಷಗಳಲ್ಲಿ 30 ಮಳಿಗೆಗಳನ್ನು ಸ್ಥಾಪಿಸಿದೆ. ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಸಂಭ್ರಮಿಸುವ ಇಂಡಿಯಾ ಸ್ವೀಟ್ ಹೌಸ್‌ನ ಉದ್ದೇಶಕ್ಕೆ ಅನುಗುಣವಾಗಿ ವೈಟ್‌ಫೀಲ್ಡ್‌ ನ ಈ ಹೊಸ ಮಳಿಗೆ ಆರಂಭವಾಗಿದೆ. ವಿವಿಧ ಸಂಸ್ಕೃತಿಗಳನ್ನು ತನ್ನೊಳಗೆ ಸಮ್ಮಿಳಿತಗೊಳಿಸಿಕೊಂಡು , ಬಿಸಿನೆಸ್ ಡಿಸ್ಟ್ರಿಕ್ಟ್ ಆಗಿ ರೂಪುಗೊಂಡಿರುವ ವೈಟ್‌ಫೀಲ್ಡ್ ಗೆ ಈ ಹೊಸ ಅಂಗಡಿಯು ವ್ಯಾಪಕ ಶ್ರೇಣಿಯ ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಖಾರದ ಭಕ್ಷ್ಯಗಳನ್ನು ಒದಗಿಸಲು ಪರಿಪೂರ್ಣ ಸ್ಥಳವಾಗಿದೆ. ನೂತನ ಮಳಿಗೆಯ ಕುರಿತು ಮಾತನಾಡಿದ ಇಂಡಿಯಾ ಸ್ವೀಟ್ ಹೌಸ್ ಸಂಸ್ಥಾಪಕರಾದ ಶ್ವೇತಾ ಮತ್ತು ವಿಶ್ವನಾಥ್ ಅವರು, “ನಮ್ಮ 30ನೇ ಮಳಿಗೆ ಆರಂಭಿಸಲು ವೈಟ್‌ಫೀಲ್ಡ್ ಅನ್ನು ಆರಿಸಿಕೊಂಡಿರುವುದು ಅತ್ಯುತ್ತಮ ನಿರ್ಧಾರವಾಗಿದೆ. ವಿಭಿನ್ನ ಸಂಸ್ಕೃತಿಗಳ ಜನರ ನೆಲೆಸುವಿಕೆಗೆ ಖ್ಯಾತಿ ಹೊಂದಿರುವ ಈ ಪ್ರದೇಶವು ವ್ಯಾಪಾರ ಬೆಳವಣಿಗೆಗೆ ಸೂಕ್ತವಾಗಿದೆ. ವೇಗವಾಗಿ ಬೆಳೆಯುತ್ತಿರುವ ವೈಟ್ ಫೀಲ್ಡ್ ನಮ್ಮ ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಖಾದ್ಯಗಳನ್ನು ಪರಿಚಯಿಸಲು ಸೂಕ್ತವಾದ ಸ್ಥಳವಾಗಿದೆ. ನಾವು ನಮ್ಮ ಅಥೆಂಟಿಕ್ ಫ್ಲೇವರ್ ಗಳನ್ನು ಇಲ್ಲಿನ ಗ್ರಾಹಕರಿಗೆ ಒದಗಿಸುವ ಮೂಲಕ ಸ್ಥಳೀಯ ಸಮುದಾಯದ ಜೊತೆ ಸಂಭ್ರಮಿಸಲು ಉತ್ಸುಕರಾಗಿದ್ದೇವೆ. ಈ ವರ್ಷದ ಹಬ್ಬದ ಸೀಸನ್ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಸಾಂಪ್ರದಾಯಿಕ ತಿಂಡಿಗಳು ಮತ್ತು ಉಡುಗೊರೆಗೆ ಅರ್ಹವಾದ ಉತ್ಪನ್ನಗಳನ್ನು ನಮ್ಮಿಂದ ನಿರೀಕ್ಷಿಸಬಹುದು ” ಎಂದು ಹೇಳಿದರು. ವಿಶಾಲವಾಗಿರುವ ವೈಟ್‌ಫೀಲ್ಡ್ ನ ಈ ಅಂಗಡಿಯಲ್ಲಿ ಗ್ರಾಹಕರು ತಮ್ಮ ನೆಚ್ಚಿನ ತಿಂಡಿಗಳನ್ನು ಸವಿಯಬಹುದಾದ ಆರಾಮದಾಯಕ ವಾತಾವರಣವಿದೆ . ಸಾಕಷ್ಟು ಆಸನ ಸಾಮರ್ಥ್ಯಗಳನ್ನು ಹೊಂದಿರುವ ಈ ಮಳಿಗೆಯು, ಆಪ್ತ ವಲಯಗಳ ಮಿಲನ ಮತ್ತು ಸಂಭ್ರಮಾಚರಣೆಗಳಿಗೆ ಸೂಕ್ತವಾಗಿದೆ. ವೈಟ್‌ಫೀಲ್ಡ್ ನಲ್ಲಿರುವ ಗ್ರಾಹಕರು ಇಂಡಿಯಾ ಸ್ವೀಟ್ ಹೌಸ್‌ ನ ಉತ್ಕೃಷ್ಟತೆಯನ್ನು ಇಲ್ಲಿ ನೋಡಬಹುದು. ವೈವಿಧ್ಯಮಯ ಶ್ರೇಣಿಯ ಅಥೆಂಟಿಕ್ ಭಾರತೀಯ ಸಿಹಿತಿಂಡಿಗಳು ಮತ್ತು ಖಾರದ ತಿಂಡಿಗಳು ಇಲ್ಲಿ ದೊರೆಯುತ್ತವೆ. ಬಂಗಾಳಿ ಸಿಹಿತಿಂಡಿಗಳಿಂದ ಹಿಡಿದು ವಿವಿಧ ಪ್ರಾದೇಶಿಕ ವಿಶೇಷ ತಿಂಡಿಗಳವರೆಗೆ ಅಧಿಕೃತ ಫ್ಲೇವರ್ ಗಳನ್ನು ಬಯಸುವ ಗ್ರಾಹಕರು ಈ ಅಂಗಡಿಗೆ ಭೇಟಿ ನೀಡಬಹುದಾಗಿದೆ. ಇಂಡಿಯಾ ಸ್ವೀಟ್ ಹೌಸ್‌ನ ಸಿಹಿ ತಿಂಡಿಗಳನ್ನು ಸಂಸ್ಥೆಯ ಸ್ವಂತ ಡೈರಿ ಫಾರ್ಮ್‌ನ ಸಾವಯವ ತುಪ್ಪ, ಖೋವಾ ಮತ್ತು ತಾಜಾ ಹಾಲಿನಲ್ಲಿ ತಯಾರಿಸಲಾಗುತ್ತದೆ.

City Today News 9341997936