
~ ಬಹು-ನಗರಗಳಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಹಿಂದುಳಿದ ಸಮುದಾಯಗಳಿಗೆ ಕಲಿಕೆಯನ್ನು ಮರುರೂಪಿಸುವ ನವೀನ ಶಾಲೆಗಳು ಮತ್ತು ಶಾಲಾ ನಂತರದ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು ~
ಬೆಂಗಳೂರು: ಶೈಕ್ಷಣಿಕ ಕ್ಷೇತ್ರದ ಉದ್ಯಮಿಗಳನ್ನು ಪ್ರೇರೇಪಿಸುವ ಮೂಲಕ ಭಾರತದಲ್ಲಿ ಶಿಕ್ಷಣವನ್ನು ಮರುಶೋಧಿಸುವ ಕಡೆಗೆ ಶ್ರಮಿಸುತ್ತಿರುವ ಸಂಸ್ಥೆಯಾದ ‘ದಿ ಸರ್ಕಲ್ ಇಂಡಿಯಾ’, ಪರಿವರ್ತನಾತ್ಮಕ ಶಿಕ್ಷಣ ಮಾದರಿಗಳನ್ನು ಎತ್ತಿ ತೋರಿಸುವ, ಬಹು-ನಗರಗಳಲ್ಲಿ ಆಯೋಜಿಸಲಾದ ಪ್ರದರ್ಶನ ಕಾರ್ಯಕ್ರಮ ‘ರೀಇನ್ವೆಂಟಿಂಗ್ ದಿ ರಿಪಬ್ಲಿಕ್’ ಅನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಈ ಕಾರ್ಯಕ್ರಮವು ಪುಣೆ, ಮುಂಬೈ ಮತ್ತು ಬೆಂಗಳೂರು ಅಂತಹ ಮೂರು ಮಹಾನಗರಗಳಲ್ಲಿ ಆಯೋಜನೆಗೊಂಡಿದೆ. ಭಾರತದಾದ್ಯಂತದ ಹಿಂದುಳಿದ ಸಮುದಾಯಗಳಿಗೆ ಕಲಿಕೆ ಹೇಗಿರಬಹುದು ಎಂಬುದನ್ನು ಮರುಕಲ್ಪಿಸುವ ಆರು ಅದ್ಭುತ ಶಾಲೆಗಳು ಮತ್ತು ಶಾಲೆಯ ನಂತರದ ಕಾರ್ಯಕ್ರಮಗಳು ಇಲ್ಲಿ ಗಮನ ಸೆಳೆದವು.

“ಭಾರತವು ಈ ಶತಮಾನವನ್ನು ಮೀರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ, ಆದರೆ ಅದನ್ನು ಸಾಧಿಸಲು ನಮ್ಮಲ್ಲಿನ ಶಾಲೆಗಳು ನಮ್ಮನ್ನು ಮುನ್ನಡೆಸಬೇಕಾಗುತ್ತದೆ. ಅದಕ್ಕಾಗಿಯೇ ನಾವು ಕಾರ್ಪೊರೇಟ್ ಮತ್ತು ನಾಗರಿಕ ನಾಯಕರನ್ನು ನಮ್ಮ ಶಾಲೆಗಳು ಮತ್ತು ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದೇವೆ. ಈ ಮೂಲಕ ಅವರನ್ನು ವಿವಿಧ ಸಂವಾದದಲ್ಲಿ ತೊಡಗಿಸಿಕೊಳ್ಳಲು, ಬದಲಾವಣೆಗೆ ಚಾಲನೆ ನೀಡುವ ಶಿಕ್ಷಕರನ್ನು ಭೇಟಿ ಮಾಡಲು ಮತ್ತು ಭವಿಷ್ಯವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸುವಂತೆ ಮಾಡಲಾಗುತ್ತಿದೆ,” ಎಂದು ‘ದಿ ಸರ್ಕಲ್ ಇಂಡಿಯಾ’ ಸಂಸ್ಥಾಪಕರಾದ ಸಂದೀಪ್ ರಾಯ್ ಹೇಳಿದ್ದಾರೆ.
ಕಡಿಮೆ ಆದಾಯ ಹೊಂದಿರುವ ಸಮುದಾಯಗಳ ಮಕ್ಕಳಿಗೆ ಶಿಕ್ಷಣವನ್ನು ಮರುಶೋಧಿಸುತ್ತಿರುವ ‘ದಿ ಸರ್ಕಲ್’ನ ಕೆಲವು ನವೀನ ಶಿಕ್ಷಣ ಉದ್ಯಮಿಗಳಿಗೆ ಬೆಂಗಳೂರು ಭದ್ರ ನೆಲೆಯಾಗಿದೆ.
“ಸಾಯಿದೇವಿ ಸಂಜೀವಿರಾಜ ಅವರು ಸರ್ಕಲ್ ಉದ್ಯಮಿಗಳ ಪ್ರಮುಖ ಪುನರ್ವಿಮರ್ಶೆಯ ಕಲಿಕೆಯಲ್ಲಿ ಒಬ್ಬರು, ತಮ್ಮ ‘ಥಿಕೆಟ್ ಟೇಲ್ಸ್’ ಮೂಲಕ ಸ್ಥಳ ಆಧಾರಿತ ಯೋಜನೆಗಳು, ಪ್ರಕೃತಿ ನಡಿಗೆಗಳು ಮತ್ತು ಕಥೆ ಹೇಳುವಿಕೆಯ ಮೂಲಕ ಪ್ರಕೃತಿಯಲ್ಲಿ ತಲ್ಲೀನಗೊಳ್ಳುವಂತೆ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅವರು ಇಲ್ಲಿಯವರೆಗೆ ಬೆಂಗಳೂರಿನಲ್ಲಿ 770 ಕ್ಕೂ ಹೆಚ್ಚು ಮಕ್ಕಳೊಂದಿಗೆ ಕೆಲಸ ಮಾಡಿದ್ದಾರೆ.” ಎಂದು ಸಂದೀಪ್ ಹೇಳಿದರು.
‘ದಿ ಸರ್ಕಲ್ ಇಂಡಿಯಾ’ 30ಕ್ಕೂ ಹೆಚ್ಚು ಶೈಕ್ಷಣಿಕೆ ಕ್ಷೇತ್ರದ ಉದ್ಯಮಿಗಳನ್ನು ಹುಟ್ಟು ಹಾಕಿದೆ, 5,000+ ವಿದ್ಯಾರ್ಥಿಗಳಿಗಾಗಿ 18 ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಮತ್ತು ದೇಶಾದ್ಯಂತ 8,500 ಶಿಕ್ಷಕರನ್ನು ತೊಡಗಿಸಿಕೊಂಡಿದೆ. 2028 ರ ವೇಳೆಗೆ 25,000 ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ಸಂಸ್ಥೆಯು ಹೊಂದಿದ್ದು, ಈ ಮೂಲಕ ಹಿಂದುಳಿದ ಸಮುದಾಯಗಳ ಮಕ್ಕಳು, ನವೀನ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿದೆ. ಉದ್ಯಮಿಗಳು ಎರಡು ವರ್ಷಗಳ ಕಠಿಣ ಕಾರ್ಯಕ್ರಮದ ಭಾಗವಾಗಿದ್ದು, ಆಧುನಿಕ ಸವಾಲುಗಳಿಗೆ ಅನುಗುಣವಾಗಿ ನವೀನ ಶಾಲೆಗಳು ಮತ್ತು ಶಾಲೆಯ ನಂತರದ ಕೇಂದ್ರಗಳನ್ನು ವಿನ್ಯಾಸಗೊಳಿಸಲು ಮತ್ತು ಪ್ರಾರಂಭಿಸಲು ಅವರಿಗೆ ಸಂಪನ್ಮೂಲಗಳು ಮತ್ತು ಮಾರ್ಗದರ್ಶನವನ್ನು ‘ದಿ ಸರ್ಕಲ್ ಇಂಡಿಯಾ’ ಒದಗಿಸುತ್ತದೆ.
City Today News 9341997936

You must be logged in to post a comment.