ಶ್ರೀನಗರ: “ಆಪರೇಶನ್ ಸಿಂಧೂರ” – ವೋಕಲ್ ಫಾರ್ ಲೋಕಲ್ ಶಪಥ ಕಾರ್ಯಕ್ರಮ

ಭಾರತೀಯ ಉತ್ಪನ್ನಗಳ ಬಳಕೆ, ಸ್ಥಳೀಯ ಕಲೆ-ಕುಶಲತೆ, ಸ್ವದೇಶಿ ಉದ್ಯಮ, ಸ್ವಚ್ಚತೆ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ವಿಶೇಷ ಶಪಥ ಅಭಿಯಾನ – “ಆಪರೇಶನ್ ಸಿಂಧೂರ” ಆರಂಭವಾಗಿದೆ. “ವೋಕಲ್ ಫಾರ್ ಲೋಕಲ್” ಘೋಷವಾಕ್ಯದಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 20 ಶಪಥಗಳನ್ನು ಒಳಗೊಂಡು, ಭಾರತವನ್ನು ಆತ್ಮನಿರ್ಭರ (ಸ್ವಾವಲಂಬಿ) ಹಾಗೂ ಸಂಸ್ಕೃತಿಸಮೃದ್ಧ ರಾಷ್ಟ್ರವನ್ನಾಗಿಸುವ ಸಲುವಾಗಿ ಸಂಕಲ್ಪವನ್ನು ಯುವಕರು ಮತ್ತು ನಾಗರಿಕರು ತೆಗೆದುಕೊಂಡರು.

ಈ ಶಪಥಗಳಲ್ಲಿ ‘ಮೇಕ್ ಇನ್ ಇಂಡಿಯಾ’, ‘ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್’, ‘ವೆಡ್ ಇನ್ ಇಂಡಿಯಾ’, ‘ಬೇಟಿ ಬಚಾವೋ ಬೇಟಿ ಪದಾವೋ’, ‘ಆಯುಷ್ಮಾನ್ ಭಾರತ’, ‘ಡಿಜಿಟಲ್ ಇಂಡಿಯಾ’ ಮುಂತಾದ ರಾಷ್ಟ್ರೀಯ ಅಭಿಯಾನಗಳಿಗೆ ಬಲ ನೀಡುವ ಉದ್ದೇಶವಿದೆ. ದೇಶದ ವೀರ ಯೋಧರ ಗೌರವದಿಂದ ಹಿಡಿದು, ರೈತರು, ಶಿಲ್ಪಿಗಳು ಮತ್ತು ಮಹಿಳಾ ಸಬಲೀಕರಣದವರೆಗಿನ ಬದ್ಧತೆಯನ್ನು ಈ ಶಪಥಗಳ ಮೂಲಕ ಪುನರುಚ್ಚರಿಸಲಾಗಿದೆ.

ಈ ಆಪರೇಶನ್ ಸಿಂಧೂರ – ವೋಕಲ್ ಫಾರ್ ಲೋಕಲ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸುನಿಲ್ ಸಿಂಗ್ಹಿ, ಅಧ್ಯಕ್ಷರು, ರಾಷ್ಟ್ರೀಯ ವ್ಯಾಪಾರಿ ಕಲ್ಯಾಣ ಮಂಡಳಿ (GOI), ಶ್ರೀ ಉದಯ ಗರುಡಾಚಾರ್, ಶಾಸಕರು – ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ, ಮತ್ತು ಕಮೋಡೋರ್ ಆರ್‌ಎಲ್ ಬ್ರಹ್ಮಪ್ರಕಾಶ್, ನೌಕಾಪಡೆಯ ಅಧಿಕಾರಿ ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪ್ರಕಾಶ್ ಪಿರ್ಗಲ್, ಸದಸ್ಯರು – ರಾಷ್ಟ್ರೀಯ ವ್ಯಾಪಾರಿ ಕಲ್ಯಾಣ ಮಂಡಳಿ ವಹಿಸಿದ್ದರು.

ಈ ಕಾರ್ಯಕ್ರಮ ದೇಶದ ಸ್ವಾವಲಂಬನೆಯ ಪಥದತ್ತ ಸಾರ್ವಜನಿಕ ಜಾಗೃತಿ ಹಾಗೂ ನಾಗರಿಕ ಹೊಣೆಗಾರಿಕೆಗೆ ನಾಂದಿಯಾಗಿ ಹೊಸ ಚೇತನವನ್ನು ತುಂಬಿದೆ.

City Today News 9341997936