ಶ್ರೀಶೈಲ ಮಹಾಕ್ಷೇತ್ರದಲ್ಲಿ ಯುಗಾದಿ ಮಹೋತ್ಸವಗಳು 06.04.2024 ರಿಂದ 10.04.2024 ರವರೆಗೆ ನಡೆಯಲಿವೆ.

ಐದು ದಿನಗಳ ಕಾಲ ನಡೆಯುವ ಈ ಯುಗಾದಿ ಉತ್ಸವಗಳಲ್ಲಿ 6 ಲಕ್ಷಕ್ಕೆ ಮೀರಿ ಭಕ್ತರು ಶ್ರೀಶೈಲಕ್ಷೇತ್ರವನ್ನು ಸಂದರ್ಶಿಸ ಬಹುದೆಂದು ಭಾವಿಸಲಾಗಿದೆ.ಯುಗಾದಿ ಉತ್ಸವಗಳು ಪ್ರಾರಂಭವಾಗುವ 10 ದಿನಗಳ ಮೊದಲು ಅಂದರೆ 27.03.2024 ರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಈ ಸ್ಥಳಕ್ಕೆ ಆಗಮಿಸುತ್ತಾರೆ.
ಈ ಉತ್ಸವಗಳಿಗೆ ಕರ್ನಾಟಕ ರಾಜ್ಯದಿಂದ ವಿಶೇಷವಾಗಿ ಉತ್ತರ ಕರ್ನಾಟಕದ ಭಕ್ತರು ಮತ್ತು ಮಹಾರಾಷ್ಟ್ರದ ಸೋಲಾಪುರ, ಸಾಂಗ್ಲಿ ಹಾಗೂ ಇತರ ಭಾಗಗಳಿಂದ ಕೂಡ ಭಕ್ತರು ಸೇರುತ್ತಾರೆ. ಹಲವು ಪ್ರದೇಶಗಳಿಂದ ಭಕ್ತರು ಪಾದಯಾತ್ರೆಯೊಂದಿಗೆ ಶ್ರೀಶೈಲಕ್ಕೆ ಆಗಮಿಸುತ್ತಿರುವುದು ವಿಶೇಷ.
ಯುಗಾದಿ ಮಹೋತ್ಸವಗಳಲ್ಲಿ ಸರ್ವ ಭಕ್ತರಿಗೆ ಅನುಕೂಲವಾದ ದರ್ಶನಕ್ಕಾಗಿ ಅಂದರೆ 06.04.2024 ರಿಂದ 10.04.2024 ರವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅಲಂಕಾರಿಕ ದರ್ಶನ (ಲಘು ದರ್ಶನ)ವನ್ನು ಒದಗಿಸಲಾಗುವುದು. ಯುಗಾದಿ ಉತ್ಸವ ದಿನಗಳಲ್ಲಿ ಸ್ವಾಮಿಯ ಸ್ಪರ್ಶದರ್ಶನಕ್ಕೆ ಅವಕಾಶವಿಲ್ಲ. ಆದಾಗ್ಯೂ, ಉತ್ಸವಗಳ 10 ದಿನಗಳ ಹಿಂದಿನಿಂದ ಅಂದರೆ 27.03.2024 ರಿಂದ 05.04.2024ರ ವರೆಗೆ, ಭಕ್ತರಿಗೆ ಪ್ರತಿದಿನ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಹಂತಗಳಾಗಿ ಶ್ರೀ ಸ್ವಾಮಿಯವರನ್ನು ಸ್ಪರ್ಶಿಸುವ ಸ್ಪರ್ಶದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ಸ್ಪರ್ಶದರ್ಶನದ ಟಿಕೆಟ್ ಶುಲ್ಕ ರೂ.500.00 ನಿಗದಿಪಡಿಸಲಾಗಿದೆ. ಪ್ರತಿ ಹಂತದಲ್ಲಿ 1500 ಟಿಕೆಟ್‌ಗಳನ್ನು ಮಾತ್ರ ನೀಡಲಾಗುವುದು. ಭಕ್ತರು ನಿರ್ದಿಷ್ಟ ಸಮಯಗಳಲ್ಲಿ ಕರೆಂಟ್ ಬುಕಿಂಗ್ ಮೂಲಕ ಈ ಟಿಕೆಟ್‌ಗಳನ್ನು ದೇವಸ್ಥಾನದಲ್ಲಿಯೇ ಪಡೆಯಬಹುದು.
ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವು ಭಕ್ತರ ಸಂಘಗಳು, ಪಾದಯಾತ್ರೆ ತಂಡಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ 21.03.2024 ಬಾಗಲಕೋಟ ಜಿಲ್ಲೆಯ ರವಿ ನಗರದಲ್ಲಿ ಸಮನ್ವಯ ಸಭೆಯನ್ನು ಸಹ ಆಯೋಜಿಸಲಾಗಿದೆ.
ಸಮಸ್ತ ಭಕ್ತರಿಗೆ ದರ್ಶನದ ಬಗ್ಗೆ ಬೇಕಾದ ಸಮಾಚಾರವನ್ನು ತಿಳಿಸಲು, ಭಕ್ತ ಸಮೂಹಗಳ ಪ್ರತಿನಿಧಿಗಳಿಗೆ ಹಬ್ಬದ ದಿನಗಳಲ್ಲಿ ದರ್ಶನ ವ್ಯವಸ್ಥೆ ಹಾಗೂ ದೇವಸ್ಥಾನದ ಭಕ್ತರಿಗೆ ಒದಿಗಿಸುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ಯುಗಾದಿ ಹಬ್ಬದ ಪ್ರಯುಕ್ತ ದೇವಾಲಯವು ಭಕ್ತರ ಅನುಕೂಲಕ್ಕಾಗಿ ವಿವಿಧ ವ್ಯವಸ್ಥೆಗಳನ್ನು ಮಾಡುತ್ತಿದೆ. ಮುಖ್ಯವಾಗಿ ಪಾದಚಾರಿ ಮಾರ್ಗ, ಭಕ್ತರಿಗೆ ವಿಶ್ರಾಂತಿ ಪಡೆಯಲು ತಂಪಾದ ಹೊರಾಂಗಣ ಚಪ್ಪರಗಳು, ಕುಡಿಯುವ ನೀರು. ಅನ್ನಸಂತರ್ಪಣೆ, ಅನುಕೂಲವಾದ ದರ್ಶನ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಭಕ್ತರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಉಚಿತ ಬಸ್‌ಗಳ ವ್ಯವಸ್ಥೆ, ಉಚಿತ ಬ್ಯಾಟರಿ ವಾಹನಗಳ ವ್ಯವಸ್ಥೆ, ನೈರ್ಮಲ್ಯ ನಿರ್ವಹಣೆ, ಸ್ವಚ್ಚತಾ ವ್ಯವಸ್ಥೆ ಇತ್ಯಾದಿಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.
ಆದುದರಿಂದ ಸರ್ವ ಭಕ್ತಾದಿಗಳು ಈ ವಿಷಯಗಳನ್ನು ಗಮನಿಸಿ ದೇವಸ್ಥಾನಕ್ಕೆ ಸಹಕರಿಸ ಬೇಕೆಂದು ವಿನಂತಿ.
ಈ ಸಂದರ್ಭದಲ್ಲಿ ಸಮಸ್ತ ಭಕ್ತಾದಿಗಳು ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನಸ್ವಾಮಿಯವರ ಅನುಗ್ರಹವನ್ನು ಸದಾ ಪಡೆಯಲಿ ಎಂದು ಹಾರೈಸುತ್ತೇವೆ ಎಂದು ಡಿ. ಪೆದ್ದಿರಾಜು, ಉಪ ಕಲೆಕ್ಟರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
City Today News 9341997936

You must be logged in to post a comment.