
ಶ್ರೀ ಕೃಷ್ಣ ಜಯಂತಿ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ಶ್ರೀ “ಕೃಷ್ಣಾರ್ಘ್ಯ”
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಸುವರ್ಣದ ತೊಟ್ಟಿಲನಲ್ಲಿ ನಂದಗೋಕುಲವನ್ನು ನಿರ್ಮಾಣ ಮಾಡಿ ರಾತ್ರಿ 11:58 ಕ್ಕೆ ಜನಿಸಿದ ಶ್ರೀ ಕೃಷ್ಣನಿಗಾಗಿ ಉಪವಾಸದಿಂದ ಇದ್ದುಕೊಂಡು ಲೋಕಕಲ್ಯಾಣಕ್ಕಾಗಿ ಭಕ್ತರಿಂದ ಶ್ರೀ ಮಠದ ಸಿಬ್ಬಂದಿಗಳಿಂದ ರಾತ್ರಿ 11-58 ನಿಮಿಷಕ್ಕೆ ಕೃಷ್ಣಾರ್ಘ್ಯ ಪ್ರಧಾನ ಮಾಡಲಾಯಿತು ಕೃಷ್ಣಾರ್ಘ್ಯದ ಪ್ರಯುಕ್ತ ದೇವರಿಗೆ ಚಕ್ಕುಲಿ ಹುಂಡಿ ಇತ್ಯಾದಿ ತಿನಿಸುಗಳನ್ನು ತಯಾರಿಸಿ ದೇವರ ನೈವೇದ್ಯಕ್ಕೆ ಇರಿಸಲಾಗಿ ನಂತರ ಚಾಮರಸೇವೆ,ಜೋಗುಳದ ಲಾಲಿ ಹಾಡನ್ನು ಹಾಡುತ್ತಾ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ಅತ್ಯಂತ ವೈಭವದಿಂದ ನೆರವೇರಿತು, ಈ ಸಂದರ್ಭದಲ್ಲಿ ಆರ್, ಕೆ ವಾದಿಂದ್ರ ಆಚಾರ್ಯ ಮತ್ತು ಶ್ರೀ ನಂದಕಿಶೋರ್ ಆಚಾರ್ಯ, ಅರ್ಚಕ ವೃಂದದವರು ಭಕ್ತರು ಸಿಬ್ಬಂದಿಗಳು ಭಾಗವಹಿಸಿದ್ದರು.
City Today News 9341997936

You must be logged in to post a comment.