
ಪರಮಪೂಜ್ಯ ಶ್ರೀ ಸುಜಯೀoದ್ರ ತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಲ್ಲಿ ಪ್ರತಿಷ್ಟಾಪನೆಗೊಂಡ ಬೆಂಗಳೂರಿನ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಪರಮ ಪೂಜ್ಯ ಶ್ರೀ108 ಶ್ರೀ ಸುಜಯೀoದ್ರ ತೀರ್ಥ ಶ್ರೀಪಾದಂಗಳವರ “ಆರಾಧನಾ” ಪ್ರಯುಕ್ತ ವಿಶೇಷ ಉತ್ಸವಗಳು ಮತ್ತು ವಿದ್ವಾಂಸರಾದ ವಿದ್ವಾನ್ ಗಯಾ ರಾಮಾಚಾರ್ಯರಿಂದ ಪ್ರವಚನ ನೆರವೇರಿತು ಹಾಗೂ ಭಜನಾ ಮಂಡಳಿಯಿಂದ ಶ್ರೀ ಹರಿ ಭಜನೆ ಸನ್ನಿಧಿಗೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಈ ಆರಾಧನಾ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
City Today News 9341997936

You must be logged in to post a comment.