
ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಮಧ್ವ ನವಮೀ ಪ್ರಯುಕ್ತ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹ ದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯರ, ಮತ್ತು ಕೃಷ್ಣಗುಂಡಾಚಾರ್ಯರ ನೇತೃತ್ವದಲ್ಲಿ ಶ್ರೀಮಠದ ಅರ್ಚಕ ರಿಂದ “ಮುಖ್ಯಪ್ರಾಣ”ದೇವರಿಗೆ ಮಧುಅಭಿಷೇಕ, ಶ್ರೀಪವಮಾನ ಹೋಮ ಹಾಗೂ ವಿಶೇಷವಾಗಿ ಲಕ್ಷಾವರ್ತಿ ಅಷ್ಟೋತ್ತರ ಪಾರಾಯಣ ಸಂಘದಿಂದ ಶ್ರೀ ವಿಷ್ಣು ಸಹಸ್ರನಾಮ, ಶ್ರೀಹರಿ ವಾಯುಸ್ತುತಿ, ಶ್ರೀಸುಮಧ್ವ ವಿಜಯ ಪಾರಾಯಣ ಮತ್ತು ಶ್ರೀ ಮಧ್ವನಾಮದೊಂದಿಗೆ “ಸರ್ವ ಮೂಲ” ಗ್ರಂಥಗಳನ್ನು ಅಂಬಾರಿಯಲ್ಲಿ ಇರಿಸಿ ವಿಶೇಷ ಮೆರವಣಿಗೆ ಮಾಡಲಾಯಿತು, ಸ್ವರ್ಣ ಲೇಪಿತ ಪಲ್ಲಕ್ಕಿ ಉತ್ಸವ, ಸ್ವರ್ಣ ಲೇಪಿತ ಗಜವಾಹನ ಉತ್ಸವ, ರಜತ ರಥೋತ್ಸವವೂ ಶ್ರೀ ಹರಿ ಭಜನೆ ಯೊಂದಿಗೆ ನೆರವೇರಿತು, ತದನಂತರ ಸ್ವರ್ಣಸಿಂಹಾಸನದಲ್ಲಿ ಶ್ರೀ ಮಧ್ವಾಚಾರ್ಯರ ಭಾವಚಿತ್ರಕ್ಕೆ “ಪುಷ್ಪಾರ್ಚನೆ” ಕನಕಾಭಿಷೇಕ ಮತ್ತು ಶ್ರೇಷ್ಠ ವಿದ್ವಾಂಸರು ಗಳಿಂದ”ಪ್ರವಚನದ-ಮಾಲಿಕೆ” ಯೂoದಿಗೆ ಈ ಕಾರ್ಯಕ್ರಮ ವೂ ಭಕ್ತರ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದರು,ಈ ಕಾರ್ಯಕ್ರಮದ ಉತ್ಸವ ಜ್ಞಾನ ಯಜ್ಞದಲ್ಲಿ ಸಾವಿರಾರು ಭಕ್ತರು ಭಕ್ತಿಯಿಂದ ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
City Today News 9341997936

You must be logged in to post a comment.