ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಪೂಜೆ, ಅನ್ನದಾನ ಹಾಗೂ ಗಾಯನ ಸೇವೆ

ಬೆಂಗಳೂರು, ಜೂನ್ 26: ಜಯನಗರ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರದಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ, ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಸಂಜೆಯ ವೇಳೆಗೆ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜಿಸಲ್ಪಟ್ಟಿದ್ದವು. ಈ ಸಂದರ್ಭದಲ್ಲಿ ಖ್ಯಾತ ಗಾಯನಶಿಲ್ಪಿ ವಿದುಷಿ ಶ್ರೀಮತಿ ಕಮಲಾ ಪ್ರಾಣೇಶ್ ಮತ್ತು ಅವರ ಸಂಗಡಿಗರು ಭಕ್ತಿಗೀತೆಗಳ ಗಾಯನ ಸೇವೆ ಸಲ್ಲಿಸಿದರು.

ಈ ಕುರಿತು ಮಾಹಿತಿ ನೀಡಿದ ಶ್ರೀ ನಂದಕಿಶೋರ್ ಆಚಾರ್ ಅವರು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಭಕ್ತಾದಿಗಳ ಸ್ಫೂರ್ತಿದಾಯಕ ಸನ್ನಿಧಾನದಿಂದ ಮಠದ ವಾತಾವರಣ ಧಾರ್ಮಿಕ ಭಾವನೆಗಳಿಂದ ತುಂಬಿತ್ತೆಂದು ತಿಳಿಸಿದ್ದಾರೆ.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶಿಷ್ಯರಿಗೆ ಶ್ರೀಮಠದಿಂದ ಉಚಿತ “ಪಂಚಾಂಗ”ವಿತರಣೆ

ಬೆಂಗಳೂರು : ಮಾರ್ಚ್ 16, ಭಾನುವಾರದಿಂದ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸನ್ನಿಧಿಯಲ್ಲಿ ಶ್ರೀ  ರಾಘವೇಂದ್ರ ಸ್ವಾಮಿಗಳ  ಮಠದ ನೂತನ ಶ್ರೀ ವಿಶ್ವಾವಸು ನಾಮ ಸಂವತ್ಸರದ ಸೂರ್ಯ ಸಿದ್ಧಾಂತ “ಪಂಚಾಂಗ”ವನ್ನು ಶ್ರೀಮಠದ ಶಿಷ್ಯರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪಂಚಾಂಗವನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೂ ಇತರೆ ಸಂಘ ಸಂಸ್ಥೆಗಳು ಶ್ರೀಮಠದ ರೀತಿ ಅನುಷ್ಠಾನ ಮಾಡುವ ಕಮಿಟಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದವರಿಗೆ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ತಮ್ಮ ಮಠದ  ಲೆಟರ್ ರೆಡ್ ನಲ್ಲಿ ಮಾಹಿತಿಯೊಂದಿಗೆ ಪತ್ರವನ್ನು ಲಗತ್ತಿಸಿ ಶ್ರೀ ಮಠದ ಪಂಚಾಂಗವನ್ನು ಸ್ವೀಕರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಯನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠ
08022443962-
ಮತ್ತು ಚಾಮರಾಜಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ
08026708642.

ಜಯನಗರದ ಶ್ರೀಮಠದಲ್ಲಿ ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:00 ವರೆಗೆ ಮತ್ತು ಸಂಜೆ 5:30 ರಿಂದ 8 ಗಂಟೆವರೆಗೆ ಪಂಚಾಂಗ‌ ವಿತರಣೆ ಮಾಡಲಾಗುವುದು ಒಬ್ಬರಿಗೆ ಒಂದು ಪಂಚಾಂಗ ಮಾತ್ರ ವಿತರಿಸಲಾಗುವುದು.

City Today News 9341997936

“ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ರಾಘವೇಂದ್ರ ಸ್ವಾಮಿಗಳ  ಬೃಂದಾವನಕ್ಕೆ ತೈಲಾಭ್ಯಂಜನ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ”

“ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಈ ರಾಘವೇಂದ್ರ ಸ್ವಾಮಿಗಳ  ಬೃಂದಾವನಕ್ಕೆ ತೈಲಾಭ್ಯಂಜನ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ”
ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ  ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಬೆಳಗ್ಗೆ ವಿಶೇಷ ಪೂಜಾ ವೈಭವ ನೆರವೇರಿತು  ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದರು, ಈ ಸಂದರ್ಭದಲ್ಲಿ ನೂರಾರು ಭಕ್ತರು ರಾಯರ ದರ್ಶನ ಪಡೆದು ಮಂಗಳಾರತಿಯನ್ನು ಸ್ವೀಕರಿಸಿ ಶ್ರೀ ಗುರು ರಾಯರ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ “ಪೂರ್ವಾರಾಧನೆ -ವೈಭವ “

ಈ ದಿನ ಶ್ರೀ ರಾಘವೇಂದ್ರ ಸ್ವಾಮಿಗಳ “ಪೂರ್ವಾರಾಧನೆ” ಪ್ರಯುಕ್ತ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗಿನ ಜಾವಾ ಸುಪ್ರಭಾತ  ನಾದಸ್ವರ ವಾದ್ಯದೊಂದಿಗೆ ಪ್ರಾರಂಭವಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅರ್ಚಕರಿಂದ  ವಿಶೇಷವಾಗಿ ಹಾಲು (ಮೊಸರು) ಮಜ್ಜಿಗೆ, ತುಪ್ಪ ,ಜೇನುತುಪ್ಪ, ಸಕ್ಕರೆ ಎಳೆನೀರು, ಇತ್ಯಾದಿ ನಾನಾ ಬಗೆಯ ಫಲಗಳಿಂದ ಫಲ ಪಂಚಾಮೃತ ಅಭಿಷೇಕ ವನ್ನು ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣದೊಂದಿಗೆ  ನೆರವೇರಿಸಿ ಆ  ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು, ನಂತರ ಶ್ರೀ ಮಠದ ವತಿಯಿಂದ ಆರ್,ಕೆ ವಾದಿಂದ್ರಾಚಾರ್ಯರು, ಜಿ , ಕೆ ಆಚಾರ್ಯರು ಮತ್ತು ಶ್ರೀ  ನಂದಕಿಶೋರಾಚಾರ್ಯರು “ಲೋಕ-ಕಲ್ಯಾಣಕ್ಕಾಗಿ” ಗುರು ರಾಯರಲ್ಲಿ  ಪ್ರಾರ್ಥನೆಯನ್ನು ಸಲ್ಲಿಸಿ  ಸ್ವರ್ಣ ಸಿಂಹಾಸನದಲ್ಲಿ ಶ್ರೀ ರಾಯರಿಗೆ ಪಾದಪೂಜೆ  ನೆರವೇರಿಸಿದರು, ಭಕ್ತರು ಕೂಡ ಸಾಮೂಹಿಕವಾಗಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಪಾದಪೂಜೆ ಫಲ ಸಮರ್ಪಣೆ ಸಮರ್ಪಿಸಿದರು,  ಈ ಸಂದರ್ಭದಲ್ಲಿ  ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸುಗಂಧ ದ್ರವ್ಯ ನಾನಾ ವಿಧವಾದ ಪುಷ್ಪಗಳಿಂದ ಅಲಂಕರಿಸಲಾಯಿತು, ಶ್ರೀ ಮಠಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆಯು   ನೆರವೇರಿತು, ಗುರು ರಾಯರ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಅಚ್ಚುಕಟ್ಟಾದ ಕ್ಯೂ ವ್ಯವಸ್ಥೆ, ಪ್ರಸಾದಕ್ಕೂ ಕ್ಯೂ ವ್ಯವಸ್ಥೆ, ಹಿರಿಯ ನಾಗರಿಕ ವಯೋವೃದ್ಧರಿಗೂ  ಪ್ರತ್ಯೇಕ ಕ್ಯೂ ವ್ಯವಸ್ಥೆಯನ್ನು ಮಾಡಲಾಗಿದೆ,  ಈ ದಿನ ಸಂಜೆ “ಪ್ರವಚನ” ವಿಶೇಷವಾಗಿ ‘ರಜತ – ಸ್ವರ್ಣ -ಲೇಪಿತ ಗಜವಾಹನ ಉತ್ಸವದೊಂದಿಗೆ ಸಂಜೆ 7 ಕ್ಕೆ “ದಾಸ-ಲಹರಿ” ವಿದ್ವಾನ್- ಶ್ರೀ ಪ್ರಾದೇಶಾಚಾರ್ಯ ವೃಂದ  ದಿಂದಗಾಯನ ಕಾರ್ಯಕ್ರಮವು ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳು ರಾಯರ ಅನುಗ್ರಹ  ಮತ್ತು ಭಕ್ತರ, ಸ್ವಯಂ ಸೇವಕರ ಸಿಬ್ಬಂದಿಗಳ, ಸಹಕಾರ ಹಾಗೂ ಮಂತ್ರಾಲಯ ಶ್ರೀಗಳ ಆಶೀರ್ವಾದದಿಂದ, ಆರ್ ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ನೆರವೇರುತ್ತಿದೆ.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ “ಆರಾಧನಾ” ಮಹೋತ್ಸವ

ಜಯನಗರದ 5ನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ “ಆರಾಧನಾ” ಮಹೋತ್ಸವದ ಆಹ್ವಾನಪತ್ರಿಕೆಯನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರ ಆಚಾರ್ಯರಿಂದ ಸ್ವೀಕರಿಸಿದ ಹಿರಿಯ ಹಾಸ್ಯ ಚಿತ್ರನಟರಾದ ಶ್ರೀ ಉಮೇಶ್ ರವರು .ಈ ಸಂದರ್ಭದಲ್ಲಿ ಶ್ರೀ ನಂದಕಿಶೋರ್ ಆಚಾರ್ಯರು ಉಪಸ್ಥಿತರಿದ್ದರು.

City Today News 9341997936