ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ “ಮಾವಿನ ಹಣ್ಣಿನ ಅಭಿಷೇಕ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ  ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ಭಕ್ತರು ಸಮರ್ಪಿಸಿದ ಮಾವಿನ ಹಣ್ಣಿನಿಂದ ಅಭಿಷೇಕವನ್ನು ಮಾಡಲಾಯಿತು ಎಂದು ಶ್ರೀ ನಂದಕಿಶೋರ ಆಚಾರ್ಯರು  ತಿಳಿಸಿದರು, ಈ ಅಭಿಷೇಕದ ಪ್ರಸಾದವನ್ನು ಭಕ್ತ ಜನರಿಗೂ ವಿತರಿಸಲಾಯಿತು ಭಕ್ತರು ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವ ಶ್ರೀ ಗುರು  ರಾಯರ ಬೃಂದಾವನಕ್ಕೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳಿಂದ “ಲಕ್ಷ ಪುಷ್ಪಾರ್ಚನೆ”

ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವ ಶ್ರೀ ಗುರು  ರಾಯರ ಬೃಂದಾವನಕ್ಕೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳಿಂದ “ಲಕ್ಷ ಪುಷ್ಪಾರ್ಚನೆ”
ಬೆಂಗಳೂರಿನ ಜಯನಗರದ 5 ನೇಬಡಾವಣೆಯನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ ಶ್ರೀ 10೦8 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾಧೀಂದ್ರಾಚಾರ್ಯರ ಮತ್ತು ಶ್ರೀ ಗುಂಡಾಚಾರ್ಯರ ನೇತೃತ್ವದಲ್ಲಿ ಶ್ರೀ ಗುರು ರಾಯರ ಬೃಂದಾವನಕ್ಕೆ ವಿಶೇಷ ಫಲ  ಪಂಚಾಮೃತ ಅಭಿಷೇಕಗಳು ಹಾಗೂ ಅಲಂಕಾರವು ನಡೆಯಿತು ನಂತರ  ಪರಮ ಪರಮ ಪೂಜ್ಯ ಶ್ರೀ108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಅತ್ಯಂತ ಆತ್ಮೀಯರಾದ ಪರಮ ಪೂಜ್ಯ ಶ್ರೀ 108 ಶ್ರೀ ಪೇಜಾವರ ಮಠದ   ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀ ಪಾದಂಗಳವರು ಶ್ರೀ ಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ಆಹ್ವಾನದ ಮೇರೆಗೆ ರಾಯರ ಬೃಂದಾವನಕ್ಕೆ “ಲಕ್ಷ ಪುಷ್ಪ” ಅರ್ಚನೆ ಸೇವೆಯನ್ನು ಸಲ್ಲಿಸಲು ಆಗಮಿಸಿದ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು ನಂತರ ಗುರುಗಳು ತಮ್ಮ ಸಂಸ್ಥಾನ ಪೂಜೆ ನೆರವೇರಿಸಿ ರಾಯರ ಬೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ ಯನ್ನು ನೆರವೇರಿಸಿದರು ನಂತರ ವಿದ್ವಾಂಸರಾದ ಬಂಡಿ ಶಾಮಾ ಚಾರ್ಯರ ಸಂಪಾದಕತ್ವದಲ್ಲಿ ತಯಾರಾದ”ಪ್ರಸನ್ನ ವಚನಂ”ಧ್ಯಾಯೇತ್ ಎಂಬ ಪುಸ್ತಕವನ್ನು ಶ್ರೀ ಗುರುರಾಯರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ “ಲೋಕಾರ್ಪಣೆ” ಮಾಡಿದರು ನಂತರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ  ಮಹಿಮೆಯನ್ನು ವಿಶೇಷವಾಗಿ ಪ್ರವಚನ ಮಾಡುವ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ ಹಿರಿಮೆಯನ್ನು ತಿಳಿಸಿ ಭಕ್ತರನ್ನು ಅನುಗ್ರಹಿಸಿದರು, ತದನಂತರ  ಶ್ರೀಸುಬುಧೇಂದ್ರ ತೀರ್ಥ ಶ್ರೀಗಳ  ಅಭಿಮಾನವನ್ನು ಕೊಂಡಾಡಿ ತಮ್ಮ ಸಂತೋಷವನ್ನು ವ್ಯಕ್ತ  ಪಡಿಸಿದರು, ನಂತರದಲ್ಲಿ  ಶ್ರೀಮಠದಿಂದ ಶ್ರೀಗಳಿಗೆ ಮಠದ ಪರವಾಗಿ ಆರ್ ಕೆ ವಾದಿಂದ್ರ ಆಚಾರ್ಯರು ಗೌರವಗಳನ್ನು ಸಲ್ಲಿಸಿ ಫಲ ಕಾಣಿಕೆಗಳನ್ನು ಸಮರ್ಪಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು  ತಿಳಿಸಿದರು, ಶ್ರೀ ಮಠಕ್ಕೆ ಆಗಮಿಸಿದ ಸಾವಿರಾರು ಭಕ್ತ ಜನರಿಗೆ ಅನ್ನ ಸಂತರ್ಪಣೆಯ ಕಾರ್ಯಕ್ರಮವು ನೆರವೇರಿತು. ಈ ಪೂಜಾ ವೈಭವದಲ್ಲಿ ಪಾಲ್ಗೊಂಡ ಭಕ್ತರು ರಾಯರಿಗೆ ಸಮರ್ಪಿಸಿದ ಲಕ್ಷ ಪುಷ್ಪಾರ್ಚನೆ ಯಲ್ಲಿ  ಕಂಗೊಳಿಸಿದ ರಾಯರ ಬೃಂದಾವನದ ದರ್ಶನವನ್ನು ಕಣ್ಣು ತುಂಬಿಕೊಂಡು ಸಂತೋಷದಲ್ಲಿ ಜೈ ಶ್ರೀ ರಾಮ್ , ಜೈ ಶ್ರೀ ಗುರೋ ರಾಘವೇಂದ್ರ ಎಂಬ ಘೋಷ ದೊಂದಿಗೆ ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೆದ್ದ ಭಕ್ತ ಜನರು ನಂತರದಲ್ಲಿ ತೀರ್ಥ ಪ್ರಸಾದ ವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ಶ್ರೀ ಮಠಕ್ಕೆ ಆಗಮಿಸಿದ ಸಹಸ್ರಾರು ಭಕ್ತ ಜನರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಯನ್ನು ಮಾಡಲಾಗಿತ್ತು, ಈ ಸಂದರ್ಭದಲ್ಲಿ, ವಿದ್ವಾನ್ ಬಂಡಿ ಶಾಮಾಚಾರ್ಯ, ವಿದ್ವಾನ್ ಅಗ್ನಿಹೋತ್ರೀ ವೇಣುಗೋಪಾ ಲಾಚಾರ್ಯ, ಶಾಸಕರಾದ ಸಿ ಕೆ ರಾಮಮೂರ್ತಿ ಅವರು ಚಿತ್ರನಟಿ ಪ್ರೇಮಾರವರು ಇನ್ನು ಹಲವಾರು ಗಣ್ಯಾತಿ ಗಣ್ಯರು ಭಕ್ತರು  ಭಾಗವಹಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಉತ್ತರಾಧನೆ ಮಹೋತ್ಸವ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ೧೦೦೮ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀಮಠದ ವ್ಯವಸ್ಥಾಪಕರಾದ ಆರ್,ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ಪುರೋಹಿತರಾದ ಶ್ರೀ ನಂದಕಿಶೋರ ಆಚಾರ್ಯರು ಹಾಗೂ ಜಿ, ಕೆ ಆಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಉತ್ತರಾಧನೆ ಮಹೋತ್ಸವದ ಅಂಗವಾಗಿ ಜಯನಗರದ ರಾಜಬೀದಿಗಳಲ್ಲಿ ಸ್ವಾಮಿಗಳ ಮಹಾರಥೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

City Today News 9341997936

ಪ್ರತಿನಿತ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆ ಗಳನ್ನು ಪೂಜಿಸುತ್ತಿರುವ ಪರಮ ಪೂಜ್ಯ ಶ್ರೀ 108 ಶ್ರೀ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು!

ಪ್ರತಿನಿತ್ಯ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆ ಗಳನ್ನು ಪೂಜಿಸುತ್ತಿರುವ ಪರಮ ಪೂಜ್ಯ ಶ್ರೀ 108 ಶ್ರೀ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು!
ಇತ್ತೀಚೆಗೆ ಕಲ್ಯಾಣಿ ನಗರ ವಾದ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 108 ಶ್ರೀ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು,ಶ್ರೀಮನ್ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆಗೆ ಪೂಜೆಯನ್ನು ಮಾಡಿ ನಂತರ ರಾಯರ ಬೃಂದಾವನಕ್ಕೆ ಮಹಾಮಂಗಳಾರತಿಯನ್ನು ನೆರವೇರಿಸಿದರು .ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರಾಚಾರ್ಯರು, ಪುರೋಹಿತರಾದ ನಂದಕಿಶೋರಾಚಾರ್ಯರು ಹಾಗೂ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು

City Today News – 9341997936