ಒಂದು ಶತಮಾನಕ್ಕಿಂತಲೂ ಹಿಂದಿನಿಂದ ಸ್ಥಾಪಿತವಾಗಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ, ಭಾವಸಾರ ಕ್ಷತ್ರಿಯ ಜನಾಂಗದ ಮುಖಂಡರ ಸಮಾವೇಶ ಹಾಗೂ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಇದೇ ಭಾನುವಾರ, ದಿನಾಂಕ 6ನೇ ಆಗಸ್ಟ್, 2023 ರಂದು ಬೆಳಿಗೆ 10 ಘಂಟೆಗೆ ಪ್ರಾರಂಭವಾಗುತ್ತದೆ, ಬೆಂಗಳೂರಿನ ವಸಂತ ನಗರದ ಮಿಲ್ಲರ್ಸ್ ರಸ್ತೆ ಯಲ್ಲಿರುವ ಡಾ|| ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.

ಈ ಸಮಾವೇಶ ಹಾಗೂ ಕಾರ್ಯಕಾರಿಣಿ ಸಭೆಗೆ, ಭಾವಸಾರ ಕ್ಷತ್ರಿಯ ಜನಾಂಗದ ರಾಷ್ಟ್ರೀಯ ಮುಖಂಡರಲ್ಲದೆ, ಕರ್ನಾಟಕ ರಾಜ್ಯದ ಎಲ್ಲಾ ಹೋಬಳಿ, ತಾಲ್ಲೂಕು ಮತ್ತು ಜಿಲ್ಲೆಗಳಿಂದ ಜನಾಂಗದ ಮುಖಂಡರುಗಳು ಭಾಗವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 24 ಲಕ್ಷದಷ್ಟು ಈ ಜನಾಂಗದವರಿದ್ದು, ಸರಿಸುಮಾರು 2,000 ಮುಖಂಡರುಗಳು ಭಾಗವಹಿಸಲಿದ್ದಾರೆ. ಭಾವಸಾರ ಕ್ಷತ್ರಿಯ ಜನಾಂಗವು ಕರ್ನಾಟಕ ರಾಜ್ಯದ ಹಿಂದುಳಿದ ಜಾತಿಗಳ ಪ್ರವರ್ಗ 2(A) ಪಟ್ಟಿಯಲ್ಲಿದೆ.
ಸಮಾವೇಶವನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಉದ್ಘಾಟಿಸಿ, ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀಯುತ ದಿನೇಶ್ ಗುಂಡು ರಾವ್ ರವರು ಮತ್ತು ಕರ್ನಾಟಕ ವಿಧಾನ ಸಭೆಯ ಉಪ ಸಭಾಪತಿಗಳಾದ ಶ್ರೀ ರುದ್ರಪ್ಪ ಎಂ ಲಮಾಣಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀಕ್ಷೇತ್ರ ಪಂಡರಾಪುರದ ಹರಿಭಕ್ತ ಪಾರಾಯಣ ಶ್ರೀ ಪ್ರಭಾಕರ ದಾದ ಭೋಧಲೆ ಮಹರಾಜ್ ರವರ ಆಶೀರ್ವಚನವಿರುತ್ತದೆ.
ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ಏನ್. ವಿ. ಶ್ರೀನಿವಾಸ ರಾವ್ ಪಿಸ್ಪೆರವರು ಸಮಾವೇಶದ ಅಧ್ಯಕ್ಷತೆ ವಹಿಸುತ್ತಾರೆ ಹಾಗು ಕರ್ನಾಟಕದ ಹೈ ಪವರ್ ಕಮಿಟಿ ಅಧ್ಯಕ್ಷರಾದ ಶ್ರೀ ರಮೇಶ್ ತಾಪ್ಪ ರವರು ಕಾರ್ಯಕ್ರಮದ ಛೇರ್ಮನ್ ರಾಗಿ ಕಾರ್ಯಕ್ರಮದ ಮುಂದಾಳತ್ವ ವಹಿಸಲಿದ್ದಾರೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ತಿಳಿಸಲಾಯಿತು.
City Today News 9341997936

You must be logged in to post a comment.