
ದೇಶದ 18ನೇ ಲೋಕಸಭಾ ಚುನಾವಣೆಯನ್ನು ಚುನಾವಣಾ ಆಯೋಗವು 7 ಹಂತಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡು ಫಲಿತಾಂಶವೂ ಕೂಡ ಹೊರಬಂದಿದೆ. ಭಾರತದ ಜನಸಾಮಾನ್ಯರ ಮತದಾರರ ಪ್ರಭುದ್ದತೆ ಮತ್ತೊಮ್ಮೆ ಸಾಭೀತಾಗಿದೆ. ದೇಶವನ್ನು ಧಾರ್ಮಿಕ ಆಧಾರದ ಮೇಲೆ ವಿಭಜನೆ ಮಾಡುವ ಕೋಮುವಾದಿಗಳನ್ನು ಕಟ್ಟಿಹಾಕಿದೆ. ಈ ಬಾರಿ 400 ಕ್ಷೇತ್ರಗಳನ್ನು ಗೆಲ್ಲುವ ಉಮೇದಿನಲ್ಲಿ ಇದ್ದ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವ ಮೂಲಕ ಜನತೆ ಈ ಚುನಾವಣೆಯಲ್ಲಿ ತಮ್ಮ ವಿವೇಕದ ನಡೆ ತೋರಿದ್ದಾರೆ. ದೇಶದ ನಿರುದ್ಯೋಗ, ಬಡತನ, ಹಸಿವು ಈ ಎಲ್ಲಾ ಅಂಶಗಳನ್ನು ಬದಿಗೊತ್ತಿ ಕೇವಲ ಆಡಂಬರದ ಬ್ರಮಾತ್ಮಕ ವಿಚಾರಗಳನ್ನು ಚುನಾವಣೆಯಲ್ಲಿ ಘೋಷಿಸಿಕೊಂಡಿದ್ದ ಮೋದಿ ಮತ್ತು ಬಿಜೆಪಿ ಪಟಾಲಂಗೆ ಸರಿಯಾದ ಶಾಸ್ತಿಯನ್ನು ಮತದಾರ ಮತಹಾಕುವ ಮೂಲಕ ತನ್ನ ಜವಾಬ್ದಾರಿಯನ್ನು ಮೆರೆದಿದ್ದಾರೆ. ಆದ್ದರಿಂದ ದೇಶದ ಜನತೆಗೆ ಅಭಿನಂದನೆಯನ್ನು ಸಲ್ಲಿಸುತ್ತೇವೆ.

ಕರ್ನಾಟಕದಲ್ಲಿ ಪ್ರಭಲ ಜಾತಿಗಳ ರಾಜಕೀಯ ಅನೈತಿಕ ಹೊಂದಾಣಿಕೆ ತಳ ಸಮುದಾಯಗಳಲ್ಲಿ ಐಕ್ಯತೆಯ ಎಚ್ಚರಿಕೆಯನ್ನು ಮೂಡಿಸಿದೆ. ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳ ಸ್ವಾಭಿಮಾನ ಮತ್ತು ಸಾಮಾಜಿಕ ಸಭಲೀಕರಣಕ್ಕಾಗಿ ಸದಾ ದುಡಿಯುತ್ತಿದ್ದ ದಲಿತ ಚೇತನ ಪ್ರೊ: 29. ಕೃಷ್ಣಪ್ಪರವರ 86ನೇ ಜನ್ಮ ದಿನಾಚರಣೆಯನ್ನು “ಸಂಘರ್ಷ ಸಮಾನತೆಯ ದಿನ”ವನ್ನಾಗಿ ಆಚರಿಸಲು ಸಮಿತಿಯು ತೀರ್ಮಾನಿಸಿದೆ. De ಕಾರ್ಯಕ್ರಮವನ್ನು ದಿನಾಂಕ 09.06.2024 ರ ಭಾನುವಾರದಂದು ឋម 11:30 ಬೆಂಗಳೂರಿನ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸನ್ಮಾನ್ಯಶ್ರೀ ಸತೀಶ್ ಜಾರಕಿಹೊಳಿರವರು, ಸಚಿವರು, ಲೋಕೋಪಯೋಗಿ ಇಲಾಖೆ, ಸನ್ಮಾನ್ಯಶ್ರೀ ಹೆಚ್.ಸಿ. ಮಹದೇವಪ್ಪರವರು, ಸಚಿವರು, ಸಮಾಜಕಲ್ಯಾಣ ಇಲಾಖೆ, ಶ್ರೀಮತಿ ಇಂದಿರಾ ಕೃಷ್ಣಪ್ಪ, ಮುಖ್ಯಸ್ಥರು, ಪ್ರೊ: ಬಿ. ಕೃಷ್ಣಪ್ಪ ಟ್ರಸ್ಟ್, ಮತ್ತು ರುದ್ರಪ್ಪ ಹನಗವಾಡಿ, ಹಿರಿಯ ದಲಿತ ಮುಖಂಡರು ಭಾಗವಹಿಸಲಿದ್ದು ಡಾ: ಸಿ.ಜಿ. ಲಕ್ಷ್ಮಿಪತಿ, ಉಪನ್ಯಾಸಕರು, ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಾವಳ್ಳಿ ಶಂಕರ್ ರವರು ವಹಿಸಿಕೊಂಡಿರುತ್ತಾರೆ. ದ.ಸಂ.ಸ. (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯ ಪದಾಧಿಕಾರಿಗಳಾದ ರಮೇಶ್ ಡಾಕುಳಿಕಿ, ಎನ್. ನಾಗರಾಜ್, ನಾಗಣ್ಣ ಬಡಿಗೇರ ಮುಂತಾದವರು ಉಪಸ್ಥಿತರಿರುತ್ತಾರೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಿಳಿಸಲಾಯಿತು.
City Today News 9341997936

You must be logged in to post a comment.