
ಬೆಂಗಳೂರು: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಬಲವರ್ಧನೆಗೆ ನಿಷ್ಠೆ, ಜವಾಬ್ದಾರಿ ಮತ್ತು ಸೇವಾ ಮನೋಭಾವದೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ಆಗ್ರಹಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘಟನೆಯಲ್ಲಿ ಯುವ ನಾಯಕತ್ವಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿ, ಸಮಾಜಮುಖಿ ಚಟುವಟಿಕೆಗಳಿಗೆ ಹೊಸ ಉತ್ಸಾಹ ತುಂಬಲಿದ್ದೇವೆ ಎಂದು ಹೇಳಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಜೋಶಿ ಅವರು, ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಸಮಾಜದ ಒಗ್ಗಟ್ಟನ್ನು ಬಲಪಡಿಸುವ ಯೋಜನೆಗಳನ್ನು ಸಂಘ ರೂಪಿಸಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರ ಮಾರ್ಗದರ್ಶನದ ಮೇರೆಗೆ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿಯಾಗಿ ಜಿ.ಎಲ್. ಪೂರ್ಣಿಮಾ ಅವರ ನೇಮಕಾತಿ ನಡೆಯಿತು. ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಾಗಿ ಎಸ್. ಜಯಶ್ರೀ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಾಥ್ ಟಿ.ಆರ್., ಆರ್.ಎನ್. ವೇಣುಗೋಪಾಲ್ ಮತ್ತು ಎಂ. ಅಮರನಾಥ್, ಖಜಾಂಚಿಯಾಗಿ ನಾರಾಯಣ ಎಸ್.ಎಸ್., ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಎ. ನೇಮಕಗೊಂಡರು. ನಿರ್ದೇಶಕರಾಗಿ ವೈ.ಎಸ್. ರಾಮಪ್ರಸಾದ್ ಅಧಿಕಾರ ಸ್ವೀಕರಿಸಿದರು.
ಮಹಿಳಾ ಘಟಕದಲ್ಲಿ ಉಪಾಧ್ಯಕ್ಷೆಯಾಗಾಗಿ ರಾಧಿಕಾ, ಪ್ರಧಾನ ಕಾರ್ಯದರ್ಶಿಗಳಾಗಿ ಭಾರತಿ ಆರ್. ಶಂಕರ್ ಮತ್ತು ಸುಮಾ ಎಚ್.ಎಲ್., ಕಾರ್ಯದರ್ಶಿಯಾಗಿ ಮೀರಾ, ಉಪಾಧ್ಯಕ್ಷೆಯಾಗಿ ನಾಗರಾಜ್ ಮತ್ತು ನಿರ್ದೇಶಕಿ ಸೌಮ್ಯ ಬಿ.ಎಸ್. ಅವರನ್ನು ಅಧಿಕೃತವಾಗಿ ಘೋಷಿಸಲಾಯಿತು.
City Today News 9341997936

You must be logged in to post a comment.