ಚಿಕ್ಕಮಗಳೂರು ದತ್ತ ಪೀಠದಲ್ಲಿಯ ಇಸ್ಲಾಮಿಕ್ ಅತಿಕ್ರಮಣ ಮುಕ್ತಿಗಾಗಿ, ಸಂಪೂರ್ಣ ಹಿಂದೂ ಪೀಠಕ್ಕಾಗಿ ನಡೆಯುವ ದತ್ತ ಮಾಲಾ ಅಭಿಯಾನ.

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಅತ್ಯಂತ ಸುಂದರ ರಮಣೀಯ ದತ್ತ ಪೀಠ ಇಸ್ಲಾಮಿಕ್ ಅತಿಕ್ರಮಣ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆದಿತ್ತು. ಇದರ ವಿರುದ್ಧ ನಿರಂತರ 20 ವರ್ಷಗಳಿಂದ ಶ್ರೀರಾಮ ಸೇನಾ ಸಂಘರ್ಷ, ಹೋರಾಟ.ರಥಯಾತ್ರೆ, ಶೋಭಾಯಾತ್ರೆ, ಕಾನೂನು ಹೋರಾಟ, ಧರ್ಮ ಸಭೆ, ಸಾಮೂಹಿಕ ದತ್ತ ಜಪ ಮುಂತಾದವುಗಳ ಮೂಲಕ ನಮ್ಮ ಹಕ್ಕನ್ನು ಪಡೆಯಲು ಪ್ರಯತ್ನ ನಡೆಯುತ್ತಲೇ ಇದೆ.

ಪ್ರತಿವರ್ಷದಂತೆ ಈ ವರ್ಷವೂ ದತ್ತ ಮಾಲಾ ಅಭಿಯಾನ -2024 ನವೆಂಬರ್ 4 ರಿಂದ ನವೆಂಬರ್ 10 ರ ವರೆಗೆ ಜರುಗಲಿದೆ.

ನವೆಂಬರ್ 4- ಮಾಲಾ ಧಾರಣೆ

ನವೆಂಬರ್ 7- ದತ್ತ ದಿಪೋತ್ಸವ

ನವೆಂಬರ್ 9-ಪಡಿ ಸಂಗ್ರಹ ( ಭೀಕ್ಷಾಟನೆ )

ನವೆಂಬರ್ 10- ಚಿಕ್ಕಮಗಳೂರಲ್ಲಿ ಧರ್ಮ ಸಭೆ, ಶೋಭಯಾತ್ರೆ, ದತ್ತ ಪೀಠದಲ್ಲಿ ಹೋಮ, ಹವನ, ಪ್ರಸಾದ ವಿತರಣೆ.

ಈ ರೀತಿ ಕಾರ್ಯಕ್ರಮ ಆಯೋಜನೆಯಾಗಿದ್ದು ನವೆಂಬರ್ 10 ಕ್ಕೆ ಜರುಗುವ ಧರ್ಮ ಸಭೆಗೆ ಮುಖ್ಯ ಅತಿಥಿಯಾಗಿ ಹಿಂದೂ ಸಿಂಹಿಣಿ, ಪ್ರಖರ ಹಿಂದೂವಾದಿ, ಹೈದ್ರಾಬಾದ್ ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಓವೈಸಿ ವಿರುದ್ಧ ತೊಡೆ ತಟ್ಟಿದ್ದ ಶ್ರೀಮತಿ ಮಾಧವಿ ಲತಾ, ವಿಧಾನ ಪರಿಷತ್ ಸದಸ್ಯ, ಹಿಂದೂವಾದಿ ಶ್ರೀ ಸಿ.ಟಿ. ರವಿ, ಮಾಜಿ ಸಂಸದ, ಲೇಖಕ ಅಪ್ಪಟ ಹಿಂದುವಾದಿ ಪ್ರತಾಪ್ ಸಿಂಹ ಧರ್ಮ ಸಭೆಯಲ್ಲಿ ಭಾಗವಹಿಸಲಿದ್ದು ಹಿಂದೂ ಹೃದಯ ಸಾಮ್ರಾಟ್ ಶ್ರೀ ಪ್ರಮೋದಜಿ ಮುತಾಲಿಕರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಲಿವೆ.

ಸರ್ಕಾರಕ್ಕೆ ನಮ್ಮ ಪ್ರಮುಖ ಬೇಡಿಕೆಗಳು:

*ದತ್ತ ಪೀಠದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರ.

*ಕೇವಲ ಹಿಂದೂ ಅರ್ಚಕರು ಇರಬೇಕು. ಮೌಲ್ವಿ ತಗೆದು ನಾಗೇನಹಳ್ಳಿಗೆ ಕಳುಹಿಸಬೇಕು.

*ದತ್ತ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಆಗಲೇಬೇಕು.ವಸತಿ ವ್ಯವಸ್ಥೆ ಸಹ ಆಶ್ವೇಕು.

*ಪೀಠದಲ್ಲಿ ಕಳುವಾದ ಎಲ್ಲವೂ ಪೀಠಕ್ಕೆ ತಿರುಗಿಸಬೇಕು.

*ನಿತ್ಯ ಗಾಣಗಪುರದಿಂದ ದತ್ತ ಪೀಠಕ್ಕೆ ಬಸ್ ಸೇವೆ ಪ್ರಾರಂಭ ಆಗೋಕು

‘ಇಷ್ಟು ವರ್ಷದ ಹೋರಾಟದ ಫಲ::

*ಗೋರಿಗಳಿಗೆ ಹಸಿರು ಚಾದರ್ ಬಂದ್.

*ನಮಾಜ್ ಬಂದ್

*ಮಾಂಸಹಾರ ಬಂದ್

*ಅರ್ಚಕರ ನೇಮಕ.

*ದತ್ತ ಪೀಠದ ಆಸ್ತಿ ಕಬಳಿಸಿದವರಿಗೆ ನೋಟೀಸ್, ಅಧ್ಯಕ್ಷರು, ಶ್ರೀ ರಾಮ ಸೇನೆ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನDeda

ಹೀಗೆ ಹಂತಹಂತವಾಗಿ ಯಶಸ್ವಿಯತ್ತ ಮುನ್ನುಗ್ಗುತ್ತಿದ್ದು ಈ ಸಾರಿ ನಮ್ಮ ಜಿಲ್ಲೆಯಿಂದ ಮಾಲಾಧಾರಿ 350 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಹೊರಡುವವರಿದ್ದಾರೆ ಎಂದು ಎಸ್. ಬಾಸ್ಕರಣ್,ಅಧ್ಯಕ್ಷರು, ಶ್ರೀ ರಾಮ ಸೇನೆ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936