
ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಕರ್ನಾಟಕ ಕಂಡಂತಹ ಅಪ್ರತಿಮ ಧೀಮಂತ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಕಳೆದ 45 ವರ್ಷಕ್ಕೂ ಮೇಲ್ಪಟ್ಟು ರಾಜಕೀಯ ಜೀವನದಲ್ಲಿ ಕಳಂಕರಹಿತರಾಗಿ ಕಪ್ಪು ಚುಕ್ಕೆಯಿಲ್ಲದಂತೆ ಎರಡನೇ ದೇವರಾಜ ಅರಸು ಎಂಬ ಖ್ಯಾತಿಯೊಂದಿಗೆ ಎರಡನೇ ಭಾರಿ ಮುಖ್ಯಮಂತ್ರಿಯಾಗಿ ಕರ್ನಾಟಕ ರಾಜ್ಯದ ಮಹಾ ಜನತೆಗೆ ನೂರಾರು ಭಾಗ್ಯಗಳನ್ನು ಕೊಟ್ಟು ಅನ್ನ ಭಾಗ್ಯ ನೀಡುವ ಮೂಲಕ “ಅನ್ನರಾಮಯ್ಯ” ಎಂಬ ಖ್ಯಾತಿಯನ್ನು ಹೊಂದಿದ್ದು ಪ್ರಸ್ತುತ ಸರ್ಕಾರದಲ್ಲಿ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ಯಶಸ್ವಿ ಸರ್ಕಾರ ನಡೆಸುತ್ತಿರುವ ಸಂಧರ್ಭದಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ರವರಿಗೆ ರಾಜಕೀಯ ಭವಿಷ್ಯವಿಲ್ಲವೆಂದು ಭಾವಿಸಿ ಸಿದ್ದರಾಮಯ್ಯರವರನ್ನು ರಾಜಕೀಯವಾಗಿ ಮುಗಿಸಲು ಚಿಂತಿಸಿ ಮುಡಾ ಹಗರಣವನ್ನು ಸೃಷ್ಟಿಸಿ ಈ ವಿಚಾರದಲ್ಲಿ ಬಿಜೆಪಿ ಮತ್ತು ಜೆ.ಡಿಎಸ್ ರಾಜ್ಯದ ಜನರ ದಿಕ್ಕನ್ನು ಬದಲಾಯಿಸಲು ಹೊರಟಿರುವುದು ಅಕ್ಷಮ್ಯ ಅಪರಾದವಾಗಿರುತ್ತದೆ, ಹಾಗೇ ಆರ್.ಟಿ.ಐ ಕಾರ್ಯಕರ್ತನ ಮೂಲಕ ರಾಜ್ಯಪಾಲರಿಗೆ ದೂರು ನೀಡಿಸಿ ಪ್ರಾಸಿಕ್ಯಷನ್ ಗೆ ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಈ ವಿಚಾರವಾಗಿ ಕೂಲಂಕುಷವಾಗಿ ಚರ್ಚಿಸಿ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಸಮಯಾವಕಾಶವನ್ನು ಕೋರಿರುತ್ತೇವೆ. ಹಾಗೂ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಮೂಢಾ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ತನಿಕೆ ಪ್ರಗತಿಯಲ್ಲಿದ್ದು ತನಿಕೆ ಮುಗಿದು ವರದಿ ಬರುವವರೆಗೂ ಕಾಯಬಹುದಾಗಿದೆ.
ಮುಂದುವರೆದು ದಿನಾಂಕ 09-08-2024 ರಂದು ಮೈಸೂರಿನಲ್ಲಿ ಸಿದ್ದರಾಮಯ್ಯರನ್ನ ಬೆಂಬಲಿಸಿ ನಡೆಯುವ ಮಹಾ ಸಮಾವೇಶದಲ್ಲಿ ನಾವು ಸೇರಿದಂತೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು, ಅಲೆಮಾರಿ ಬುಡಕಟ್ಟು ಜನಾಂಗದವರು ಹಾಗೂ ಪ್ರವರ್ಗ 1 ಮತ್ತು ಪ್ರವರ್ಗ -2 ಒಟ್ಟು 197 ಜಾತಿಗಳ ಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಸ್ವ ಇಚ್ಛೆಯಿಂದ ಭಾಗವಹಿಸತ್ತಿದ್ದು ನಾವೂ ಸಹ ಬೆಂಬಲವನ್ನು ಸೂಚಿಸಿರುತ್ತೇವೆ. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದೇವೆ.
ಈ ವಿಚಾರವನ್ನು ಬಿಜೆಪಿ ಮತ್ತು ಜೆಡಿಎಸ್ ರವರು ಮಾಡಿರುವ ಷಡ್ಯಂತರವನ್ನು ಕೈಬಿಡದ್ದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆಗಳನ್ನು ಮಾಡುತ್ತಾ ಬ್ರಷ್ಟ ಬಿಜೆಪಿ ಸರ್ಕಾರದಲ್ಲಿ ನಡೆದಂತಹ ಹಗರಣ ಮತ್ತು ಬ್ರಷ್ಟಚಾರಗಳನ್ನು ದಾಖಲೆ ಸಮೇತ ಹೊರತೆಗೆದು ಜನರ ಮುಂದಿಟ್ಟು ನ್ಯಾಯ ಕೇಳಲು ನಿರ್ದರಿಸಿದ್ದೇವೆ.
ಮುಖ್ಯಮಂತ್ರಿಗಳು ಎರಡು ಭಾರಿ ಮುಖ್ಯಮಂತ್ರಿಗಳಾಗಿ ಜನಪರ ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಟ್ಟು ಜನಪ್ರಿಯ ಗಳಿಸಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಗಾಂಧೀಜಿಯವರ ಸತ್ಯಮೇವ ಜಯತೇ ಎಂಬ ನಾನ್ನುಡಿಯಂತೆ ಮತ್ತು ಸರ್ವರಿಗೂ ಸಮ ಬಾಳು. ಸರ್ವರಿಗೂ ಸಮ ಪಾಲು ಎಂಬ ಬಸವಣ್ಣನವರ ತತ್ವದಂತೆ ನಡೆಯುತ್ತಿರುವ ಮುಖ್ಯಮಂತ್ರಿಗಳಿಗೆ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜ್ಯದ ಎಲ್ಲಾ ವಿಚಾರಗಳನ್ನು ಸಂವಿಧಾನಾತ್ಮಕವಾಗಿ ನೋಡುವ ಸ್ಥಾನದಲ್ಲಿದ್ದು ಏಕ ಪಕ್ಷೀಯವಾಗಿ ವರ್ತಿಸಬಾರದೆಂದು ಅಧ್ಯಕ್ಷರು-ಎಂ.ಸಿ. ವೇಣುಗೋಪಾಲ್, ಮಾಜಿ ಶಾಸಕರು, ಸವಿತಾ ಸಮಾಜ ಬೆಂಗಳೂರು,ಪ್ರಧಾನ ಕಾರ್ಯದರ್ಶಿ-ಎಂ. ನಾಗರಾಜು, ಹೆಳವ ಸಮಾಜ ಬೆಂಗಳೂರು, ಖಜಾಂಚಿ-ಎಲ್.ಎ. ಮಂಜುನಾಥ್, ನಿವೃತ್ತ ಡಿ.ಸಿ. ಅಬಕಾರಿ, ತಿಗಳ ಸಮಾಜ ಬೆಂಗಳೂರು ಮತ್ತು ಇತರ ಮುಖಂಡರುಗಳ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ (ರಿ) ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ವಿನಯಪೂರ್ವಕವಾಗಿ ಕೋರಿಕೆ ಸಲ್ಲಿಸಲಾಯಿತು.
City Today News 9341997936

You must be logged in to post a comment.