
ರಾಜ್ಯಾದ್ಯಂತ ಕೋಲಿ ಗಂಗಾಮತ ಸಮುದಾಯವು ಸುಮಾರು 39 ಪಂಗಡಗಳ ಹೆಸರುಗಳಿಂದ ರಾಜ್ಯವ್ಯಾಪಿ ಹರಡಿಕೊಂಡಿದ್ದು, ಅಂದಾಜು ಜನಸಂಖ್ಯೆ 50 ಲಕ್ಷ ಇರುತ್ತದೆ. ಸದರಿ ಸಮುದಾಯವು ಕರ್ನಾಟಕ ಸರ್ಕಾರದಲ್ಲಿ ಪ್ರವರ್ಗ 1 ರಿಂದ ಗುರುತಿಸಲ್ಪಟ್ಟಿರುತ್ತದೆ. ಕಾರಣ ಸಮಾಜವು ಅತ್ಯಂತ ಹಿಂದುಳಿದ ವರ್ಗದಲ್ಲಿ ಬರುವ ಒಂದು ಸಮುದಾಯವಾಗಿದ್ದು, ರಾಜಕೀಯವಾಗಿ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಸಮಾಜವು ಕಳೆದ 30 ವರ್ಷಗಳಿಂದ ಪರಿಶಿಷ್ಟ ಪಗಂಡದ ಬೇಡಿಕೆಗಾಗಿ ಕೂಡ ಹೋರಾಟ ನಡೆಸಿಕೊಂಡು ಬಂದಿರುತ್ತದೆ. ಆದರೆ, ಈವರೆವಿಗೂ ಸಮುದಾಯದ ಬೇಡಿಕೆ ಈಡೇರಿರುವುದಿಲ್ಲ.
ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ರಾಜಕೀಯವಾಗಿ ಅಭಿವೃದ್ಧಿ ಹೊಂದುವುದು ಅತ್ಯವಶ್ಯವಾಗಿರುತ್ತದೆ. ಮತ್ತು ಸಮಾಜಕ್ಕೆ ಸಂಘಟನೆ ಹಾಗೂ ನಾಯಕತ್ವದ ಕೊರತೆಯಿಂದ ಸಮಾಜ ನಿಂತ ನೀರಾಗಿದ್ದು, ಅಭಿವೃದ್ಧಿ ಮರೀಚಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀ ಪ್ರಮೋದ್ ಮದ್ವರಾಜ್ ಅವರು ಸ್ವಬಲದ ಮೇಲೆ ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿನಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದು, ಮುಂದೆಯೂ ಅವಕಾಶಗಳ ಮೂಲಕ ಸೇವೆ ಸಲ್ಲಿಸಲು ಕಾತುರರಾಗಿರುತ್ತಾರೆ.
ಇವರ ನಾಯಕತ್ವ ಹಾಗೂ ಸೇವೆ ದೇಶದ ಅಭಿವೃದ್ಧಿಗಾಗಿ ಅಲ್ಲದೆ ಸಮಾಜದ ಗುರುತಿಸುವಿಕೆಗೂ ಕೂಡ ಅತ್ಯವಶ್ಯವಾಗಿರುತ್ತದೆ. ಮತ್ತು ಸಾಕಷ್ಟು ಅವಧಿಯಿಂದ ನಮ್ಮ ಸಮುದಾಯದಿಂದ ಯಾವೊಬ್ಬ ರಾಜಕಾರಣಿಯೂ ಸಂಸತ್ ಪ್ರವೇಶಿಸಿರುವುದಿಲ್ಲ.
ಈ ಕಾರಣದಿಂದ ಸದರಿಯವರಿಗೆ ಭಾರತೀಯ ಜನತಾ ಪಕ್ಷವು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಲು ಲೋಕಸಭಾ ಚುನಾವಣೆಗೆ ಅವಕಾಶ ನೀಡುವಂತೆ ಸಮುದಾಯವು ಅತ್ಯಂತ ನಮತೆಯಿಂದ ಆಗ್ರಹಪಡಿಸುತ್ತದೆ ಎಂದು ಸೀತಾರಾಮ್,ಉಪಾಧ್ಯಕ್ಷರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News 9341997936

You must be logged in to post a comment.