ಶ್ರೀ ಎನ್.ಆ‌ರ್. ನಾರಾಯಣ ಮೂರ್ತಿ, ಸಂಸ್ಥಾಪಕರು, ಇನ್ಫೋಸಿಸ್ ರವರಿಂದ Empowering India a 100 ಮಸ್ತಕದ ಲೋಕಾರ್ಪಣೆ

ಪ್ರಖ್ಯಾತ ವಿಜ್ಞಾನಿ ಪ್ರೊ. ಟಿ. ಪ್ರದೀಪ್ ಮತ್ತು ಉದ್ಯಮಿ ಕೃಷ್ಣನ್ ನಾರಾಯಣನ್ ಅವರು Empowering India-Ideas of Action by Scientists and Engineers ಪುಸ್ತಕವನ್ನು ರಚಿಸಿರುವರು.

ಬೆಂಗಳೂರು, 18ನೇ ಆಗಸ್ಟ್ 2023: ಭಾರತದ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಭಾರತವು ತನ್ನ 100ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಯಾವ ದೆಸೆಯಲ್ಲಿ ಕಾರ್ಯಸಾಧಿಸಬೇಕೆಂಬುದರ ಕುರಿತು ದೂರದರ್ಶತ್ವದೊಂದಿಗಿನ ಅವಲೋಕನವನ್ನು ಪ್ರಖ್ಯಾತ ವಿಜ್ಞಾನಿ ಪ್ರೊ|| ಟಿ, ಪ್ರದೀಪ್ ಮತ್ತು ಉದ್ಯಮಿ ಕೃಷ್ಣನ್ ನಾರಾಯಣನ್ ಅವರು Empowering India-Ideas of Action by Scientists and Engineers ಮಂಡಿಸಿರುವರು. ಈ ಪುಸ್ತಕವನ್ನು ಭಾರತೀಯ ವಿಜ್ಞಾನ ಅಕಾಡೆಮಿ ಮತ್ತು ಐ.ಐ.ಟಿ, ಮದ್ರಾಸ್ ಅಲುಮ್ಮಿ ಅಸೋಸಿಯೇಷನ್‌ ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸಿವೆ.

Empowering India-Ideas of Action by Scientists and Engineers ಪುಸ್ತಕವನ್ನು ವಿಜ್ಞಾನಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಐ.ಐ.ಟಿ. ಮದ್ರಾಸ್‌ನ ಪ್ರೊ|| ಟಿ. ಪ್ರದೀಪ್ ಮತ್ತು ಶ್ರೀ ಕೃಷ್ಣನ್ ನಾರಾಯಣನ್, ಅಧ್ಯಕ್ಷರು ಇತಿಹಾಸ ರಿಸರ್ಚ್ ಹಾಗೂ ಡಿಜಿಟಲ್ ಸಂಸ್ಥೆ ಮತ್ತು ಐ.ಐ.ಟಿ. ಮದ್ರಾಸ್ ಅಲುಮ್ಮಿ ಅಸೋಸಿಯೇಷನ್‌ನ ನಿಕಟಪೂರ್ವ ಅಧ್ಯಕ್ಷರು ಈ ಪುಸ್ತಕವನ್ನು ರಚಿಸಿರುವರು. 100 ಕ್ಕೂ ಹೆಚ್ಚು ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ಕೈಗಾರಿಕೋದ್ಯಮದ ಪ್ರತಿನಿಧಿಗಳೊಂದಿಗಿನ ಚರ್ಚೆ ಮತ್ತು ಸಂಗೋಷ್ಟಿಯ ವಿಷಯಾಧಾರಿತ ಪ್ರಣಾಳಿಕೆಗಳನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಈ ಪುಸ್ತಕವನ್ನು ಭಾರತೀಯ ವಿಜ್ಞಾನ ಅಕಾಡೆಮಿಯ ಫೆಲೋ ವಿಜ್ಞಾನಿಗಳು ಪರಾಮರ್ಶಿಸಿರುವರು.

ದಿನಾಂಕ: 20-08-2023 ರಂದು ಬೆಂಗಳೂರಿನ ಜಯನಗರದ, 2ನೇ ಬ್ಲಾಕ್‌ನಲ್ಲಿರುವ ಇನ್‌ಫೋಸಿಸ್ ಸೈನ್ಸ್ ಪೌಂಡೇಷನ್ ಸಭಾಂಗಣದಲ್ಲಿ ಬೆಳಿಗ್ಗೆ ಆಯೋಜಿತಗೊಂಡಿರುವ ಸಮಾರಂಭದಲ್ಲಿ ಶ್ರೀ ಎನ್.ಆ‌ರ್. ನಾರಾಯಣ ಮೂರ್ತಿ, ಸಂಸ್ಥಾಪಕರು, ಇನ್ಫೋಸಿಸ್ – ಪುಸ್ತಕದ ಲೋಕಾರ್ಪಣೆ ಮಾಡುವರು. 11.00 ಗಂಟೆಗೆ ,

2047ರ ಕಾಲಮಾನಕ್ಕೆ ಭಾರತವು ಆರ್ಥಿಕತೆಯಲ್ಲಿ ಜಗತ್ತಿನ ಮೊದಲ ಮೂರು ಅಪ್ರತಿಮ ರಾಷ್ಟ್ರಗಳಲ್ಲಿ ಒಂದಾಗಿ ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನದ ಅಭಿವೃದ್ಧಿ, ವಾಣಿಜ್ಯಕ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈಯ್ಯಲಿದೆ. ಈ ದೃಷ್ಟಿಕೋನದ ಸಾಧನೆಗೆ ಏಳು ವಿವಿಧ ಕ್ಷೇತ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅನ್ವೇಷಣೆಗಳ ಕುರಿತಾದ 30 ಶಿಫಾರಸ್ಸುಗಳನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಪುಸ್ತಕದ ಮಾರಾಟದಿಂದ ಒದಗಿದ ಹಣಕಾಸನ್ನು ವಿಜ್ಞಾನದ ಅಭಿವೃದ್ಧಿಗೆ ಭಾರತೀಯ ವಿಜ್ಞಾನ ಅಕಾಡೆಮಿಯ ಚಟುವಟಿಕೆಗಳ ವಿನಿಯೋಗಿಸಲಾಗುವುದು,

ಪುಸ್ತಕದ ಕುರಿತಾಗಿ ಭಾರತದ ಖ್ಯಾತ ವಿಜ್ಞಾನಿಗಳು ಈ ಕೆಳಕಂಡಂತೆ ಉಲ್ಲೇಖಿಸಿದ್ದಾರೆ: ಪ್ರೊ| ಸಿ.ಎನ್.ಆರ್. ರಾವ್: ವಿಜ್ಞಾನ ಮತ್ತು ತಂತ್ರಜ್ಞಾನದ ಯುಕ್ತ ಬಳಕೆಯೊಂದಿಗೆ ಭಾರತವು ಸಫಲವಾಗಿ ಮುನ್ನಡೆವ ದೃಷ್ಟಿಕೋನವನ್ನು ಮಸ್ತಕವು ನೀಡಿದೆ. ಭಾರತವು ಸರ್ವಾಂಗೀಣ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ಪ್ರಕಟಗೊಳ್ಳುತ್ತಿರುವುದು ಸಮಯೋಚಿತವೆನಿಸಿದೆ. ಆಶಯದ ಸುಸಂದರ್ಭದಲ್ಲಿ ಪುಸ್ತಕ

ಡಾ| ಕೆ. ಕಸ್ತೂರಿರಂಗನ್ ವಿಷಯಾಧಾರಿತ ಮತ್ತು ಉತ್ಕೃಷ್ಟ ಚಿಂತನೆಯೊಂದಿಗೆ ಸಂಶೋಧನಾಧರಿತವಾಗಿ ಈ ಮಸ್ತಕವನ್ನು ಪ್ರಕಟಿಸಿರುವುದು ಸಂತಸತಂದಿದೆ. ಪುಸ್ತಕವು ಅನೇಕ ಅನ್ವೇಷಣೆಯ ಮಾದರಿಗಳನ್ನು ಮತ್ತು 21ನೇ ಶತಮಾನದಲ್ಲಿ ಶಿಕ್ಷಣದ ಉನ್ನತಿಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನೇಕ ಆಶಯಗಳನ್ನು ಕಾರ್ಯಕ್ರಮವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಡಾ|| ಎಸ್. ಕೃಷ್ಣ ಗೋಪಾಲಕೃಷ್ಣನ್, ಸಹ ಸಂಸ್ಥಾಪಕರು ಇನ್‌ಫೋಸಿಸ್: ಭಾರತವು ಸಂಶೋಧನೆ ಮತ್ತು ಅನ್ವೇಷಣೆಯ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಅಳವಡಿಸಿಕೊಳ್ಳಬೇಕಾಗಿರುವ ಮತ್ತು ಅಗತ್ಯವಿರುವ ಅವಕಾಶಗಳನ್ನು ಅಳವಡಿಸಿಕೊಂಡು ಒಂದು ರೂಪಗೊಳ್ಳುವಲ್ಲಿನ ಅಂಶಗಳನ್ನು ಒಳಗೊಂಡಿದೆ. ಪ್ರಬಲ ಅಭಿವೃದ್ಧಿಗೊಂಡ ರಾಷ್ಟ್ರವಾಗಿ

ಭಾರತೀಯ ವಿಜ್ಞಾನ ಅಕಾಡೆಮಿ ವಿಜ್ಞಾನ ಕುರಿತು: 1934ರಲ್ಲಿ ಸರ್, ಸಿ.ವಿ.ರಾಮನ್ ಅವರಿಂದ ಸ್ಥಾಪಿತಗೊಂಡು ಮೂಲಭೂತ ಮತ್ತು ಅನ್ವಯಿಕ ವಿಜ್ಞಾನಗಳ ಅಭಿವೃದ್ಧಿ ಮತ್ತು ಉನ್ನತೀಕರಣದ ದೆಸೆಯಲ್ಲಿ ಅಕಾಡೆಮಿಯು ಶ್ರಮಿಸುತ್ತಿದೆ. ಉನ್ನತ ಸಂಶೋಧನೆಯ ವೈಜ್ಞಾನಿಕ ಅಂಶಗಳನ್ನು ಪತ್ರಿಕೆಗಳು ಮತ್ತು ಪುಸ್ತಕಗಳ ಮೂಲಕ ಹಾಗೂ ವೈಜ್ಞಾನಿಕ ಸಂಶೋಧನಾ ಅಂಶಗಳನ್ನು ಸಭೆ-ಚರ್ಚಾಗೋಷ್ಠಿಗಳಂತಹ ಕಾರ್ಯಕ್ರಮಗಳು ಮತ್ತು ರಾಷ್ಟ್ರದಲ್ಲಿ ವಿಜ್ಞಾನ ಶಿಕ್ಷಣದ ಅಭಿವೃದ್ಧಿಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅಕಾಡೆಮಿಯು ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯನಿರ್ವಹಿಸುತ್ತಿದೆ. ಇಲಾಖೆಯ ಸ್ವಾಯತ್ತ… ಸಂಸ್ಥೆಯಾಗಿ ಸರ್ಕಾರದ

ಐ.ಐ.ಟಿ, ಮದ್ರಾಸ್ ಅಲುಮ್ಮಿ ಅಸೋಸಿಯೇಷನ್ ಕುರಿತು: 1967ರಲ್ಲಿ ಸ್ಥಾಪನೆಗೊಂಡು 50 ಸಾವಿರಕ್ಕೂ ಹೆಚ್ಚು ಐ.ಐ.ಟಿ, ಮದ್ರಾಸ್‌ನ ಅಲುಮ್ಮಿಗಳನ್ನು ಹೊಂದಿದೆ. ಅಲುಮ್ಮಿಗಳು, ವಿದ್ಯಾರ್ಥಿಗಳು ಮತ್ತು ಐ.ಐ.ಟಿ. ಮದ್ರಾಸ್ ಸಂಸ್ಥೆಯೊಂದಿಗೆ ನಿಕಟ ಒಡನಾಟದಲ್ಲಿ ವೃತ್ತಿಪರ ಆಸರೆಗೆ ಒತ್ತಾಸೆ ನೀಡುವುದು, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಅನ್ವೇಷಣೆಗಳ ಕ್ಷೇತ್ರದಲ್ಲಿ ಸಮಾಲೋಚನೆಗೆ ಒಂದು ವೇದಿಕೆಯನ್ನು ರೂಪಿಸುವುದು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ 30.80.83. ಮದ್ರಾಸ್‌ನ ಅಲುಮ್ಮಿಗಳು ಸಾಮಾಜಿಕ ತೊಡಗಿಸಿಕೊಳ್ಳಲು ನೆರವಾಗುವುದು ಅಸೋಸಿಯೇಷನ್‌ ಮುಖ್ಯ ಉದ್ದೇಶಗಳು. ಬದಲಾವಣೆಗೆ

ಹೆಚ್ಚಿನ ವಿವರಗಳಿಗೆ ದಯಮಾಡಿ ಸಂಪರ್ಕಿಸಿ:

ಮಹೇಶ್‌ ಚಂದ್ರ, ಕಾರ್ಯಕಾರಿ ಕಾರ್ಯದರ್ಶಿ, ಭಾರತೀಯ ವಿಜ್ಞಾನ ಅಕಾಡೆಮಿ : 9008032004, eo: mahesh@ias.ac.in

City Today News 9341997936