
ಬೆಂಗಳೂರು: ಇಂಡಿಯನ್ ಎಕ್ಸಪ್ರೆಸ್ ಆಂಗ್ಲ ದಿನ ಪತ್ರಿಕೆಯ ದೆಹಲಿ ಅವೃತಿಯಲ್ಲಿ ಜುಲೈ 19 ರಂದು ಪ್ರಕಟವಾಗಿರುವ ಜಾಹೀರಾತಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರ ಪ್ರಕಟವಾಗದಿರುವುದು ಜಾಹೀರಾತು ಏಜೆನ್ಸಿಯಿಂದ ಆಗಿರುವ ಪ್ರಮಾದವಾಗಿದೆ.
ಕೇಂದ್ರ ಸರ್ಕಾರವು ನೂತನವಾಗಿ ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಆರಂಭಿಸಿರುವುದಕ್ಕೆ ಶ್ರೀ ಬಿರೇಶ್ವರ ಕೊ ಆಪರೇಟಿವ್ ಸೊಸೈಟಿ ಲಿ. ನವರು ಜಾಹೀರಾತು ನೀಡಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನವರು ನಮ್ಮ ನೆಚ್ಚಿನ ನಾಯಕರಾಗಿದ್ದು, ಅವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಹೊಂದಿದವಳಾಗಿದ್ದೇನೆ.
ಜಾಹಿರಾತಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಭಾವಚಿತ್ರ ಪ್ರಕಟಿಸದಿರುವುದು ನನಗೂ ವಯಕ್ತಿಕವಾಗಿ ಬೇಸರ ತರಿಸಿದೆ.
ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಟಿಸುವುದು ಬೇಡ ಎಂದು ವಿನಂತಿಸಿಕೊಳ್ಳುತ್ತೇನೆ. ಇನ್ನು ಮುಂದೆ ಈ ರೀತಿಯ ಅಚಾತುರ್ಯ ನಡೆಯದಂತೆ ಕ್ರಮ ವಹಿಸಲು ಸಂಬಂಧ ಪಟ್ಟವರಿಗೆ ಸೂಚಿಸಿದ್ದೇನೆ.
–ಶಶಿಕಲಾ ಜೊಲ್ಲೆ,ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು
City Today News
9341997936

You must be logged in to post a comment.