
ಬೆಂಗಳೂರು, ಅಕ್ಟೋಬರ್ 24:
ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳನ್ನು ನಿಷ್ಠೆಯಿಂದ ನಡೆಸುತ್ತಿರುವ ಸಮರ್ಪಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಬ್ರಾಂಡ್ ಬಸವನಗುಡಿ ಸಂಯುಕ್ತ ಆಶ್ರಯದಲ್ಲಿ “ಕನ್ನಡ ಉತ್ಸವ – 2025” ಎಂಬ ಭವ್ಯ ಸಾಂಸ್ಕೃತಿಕ ಮಹೋತ್ಸವವನ್ನು ಅಕ್ಟೋಬರ್ 31ರಿಂದ ನವೆಂಬರ್ 4ರವರೆಗೆ ಬಸವನಗುಡಿಯಲ್ಲಿ ಆಯೋಜಿಸಲಾಗಿದೆ.
ಈ ಉತ್ಸವವು ಕನ್ನಡ ಸಂಸ್ಕೃತಿ, ಕಲೆ, ಶಿಕ್ಷಣ ಮತ್ತು ಸಾಮಾಜಿಕ ಏಕತೆಯ ಸಂಕೇತವಾಗಿ ನಡೆಯಲಿದ್ದು, ವಿವಿಧ ಕಲಾ ಕಾರ್ಯಕ್ರಮಗಳು, ನೃತ್ಯ, ಯಕ್ಷಗಾನ ಮತ್ತು ಜನಪದ ಸಂಭ್ರಮದಿಂದ ಕಂಗೊಳಿಸಲಿರುವುದು.
ಟ್ರಸ್ಟ್‌ನ ಉದ್ದೇಶಗಳು ಮತ್ತು ಗುರಿಗಳು
ಯಾವುದೇ ಧರ್ಮ, ವರ್ಣ ಅಥವಾ ಜಾತಿ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ಮತ್ತು ಆರೋಗ್ಯ ಲಭ್ಯವಾಗುವಂತೆ ಮಾಡಲು ಬದ್ಧತೆ.
ಶಾಲೆಗಳು, ಕಾಲೇಜುಗಳು ಹಾಗೂ ವೃತ್ತಿಪರ ಅಧ್ಯಯನ ಕೇಂದ್ರಗಳ ಸ್ಥಾಪನೆಯ ಮೂಲಕ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವುದು.
ಬಡ ಮತ್ತು ನಿರ್ಗತಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪುಸ್ತಕಗಳು, ಉಡುಪು ಮತ್ತು ಅಧ್ಯಯನ ಸಾಮಗ್ರಿಗಳು ಸೇರಿದಂತೆ ಶೈಕ್ಷಣಿಕ ಸಹಾಯ ಒದಗಿಸುವುದು.
ಪರಿಸರ ಸಂರಕ್ಷಣೆ, ಅರಣ್ಯ ಹಾಗೂ ಜಲ ಸಂಪನ್ಮೂಲಗಳ ಕಾಳಜಿ, ಔಷಧೀಯ ಸಸ್ಯಗಳ ಬೆಳವಣಿಗೆ ಮುಂತಾದ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಕೈಗೊಳ್ಳುವುದು.
ಕಣ್ಣಿನ ತಪಾಸಣೆ, ಮಧುಮೇಹ, ಕ್ಯಾನ್ಸರ್, ಹೃದಯ ರೋಗ, ಯೋಗ ಮತ್ತು ರಕ್ತದಾನ ಶಿಬಿರಗಳಂತಹ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಪ್ರತಿಭಾನ್ವಿತ ವಿದ್ಯಾರ್ಥಿಗಳು, ಕಲಾವಿದರು, ಕ್ರೀಡಾಪಟುಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವುದು.
ಮುಂದಿನ ದಿನಗಳಲ್ಲಿ ಬಡವರಿಗಾಗಿ ಶಾಲೆ, ಕಾಲೇಜು ಹಾಗೂ ಆಸ್ಪತ್ರೆಗಳನ್ನು ಸ್ಥಾಪಿಸುವುದು, ಮತ್ತು ಆರೋಗ್ಯಕರ ಸಮಾಜ ನಿರ್ಮಿಸುವುದು.
ಬ್ರಾಂಡ್ ಬಸವನಗುಡಿ – ಸೇವೆ, ಸಹಾಯ, ಸಂಕಲ್ಪ
ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು, ಮೂಲಭೂತ ಸೌಕರ್ಯಗಳನ್ನು ಸುಧಾರಿಸುವುದು ಮತ್ತು ನಾಗರಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಈ ಸಂಘಟನೆಯ ಧ್ಯೇಯವಾಗಿದೆ.
ಬಿಬಿಎಂಪಿ ವ್ಯಾಪ್ತಿಯ ರಸ್ತೆ, ಸ್ವಚ್ಛತೆ, ಪಾದಚಾರಿ ಮಾರ್ಗ, ಉದ್ಯಾನವನ, ವಿದ್ಯುತ್ ದೀಪಗಳು, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ-ಕಾಲೇಜುಗಳ ಸ್ವಚ್ಛತೆ ಮತ್ತು ಶಿಕ್ಷಣ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು.
ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಮತ್ತು ಬಡ ವಿದ್ಯಾರ್ಥಿಗಳಿಗೆ ಸಹಾಯದ ವ್ಯವಸ್ಥೆ ಕಲ್ಪಿಸುವುದು ಸಂಸ್ಥೆಯ ಮತ್ತೊಂದು ಉದ್ದೇಶವಾಗಿದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಮಾನತೆ, ಕಾನೂನು ಪಾಲನೆ ಮತ್ತು ಸಂವಿಧಾನ ಬದ್ಧತೆ ಎಂಬ ಮೌಲ್ಯಗಳೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತದೆ.
ಕನ್ನಡ ಉತ್ಸವ–2025 : ಕಾರ್ಯಕ್ರಮಗಳ ವೇಳಾಪಟ್ಟಿ
ಸ್ಥಳ: ಬ್ರಾಂಡ್ ಬಸವನಗುಡಿ ಮೈದಾನ
ದಿನಾಂಕಗಳು: 31 ಅಕ್ಟೋಬರ್ 2025ರಿಂದ 4 ನವೆಂಬರ್ 2025ರವರೆಗೆ
🔸 31 ಅಕ್ಟೋಬರ್ (ಶುಕ್ರವಾರ)
ಬೆಳಿಗ್ಗೆ 11.30 – ಮೇಳ ಉದ್ಘಾಟನೆ
ಸಂಜೆ 6.30 – ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ
🔸 1 ನವೆಂಬರ್ (ಶನಿವಾರ)
ಬೆಳಿಗ್ಗೆ 10.30 – ಧ್ವಜಾರೋಹಣ ಸಮಾರಂಭ
ಮಧ್ಯಾಹ್ನ 2.00 – ಭರತನಾಟ್ಯ ಪ್ರದರ್ಶನ
ಸಂಜೆ 6.30 – ಆರ್ಟ್ ಬೀಟ್ ಇಂಡಿಯಾ ತಂಡದ ನೇರ ರಸಮಂಜರಿ ಕಾರ್ಯಕ್ರಮ
🔸 2 ನವೆಂಬರ್ (ಭಾನುವಾರ)
ಮಧ್ಯಾಹ್ನ 2.00 – ಯಕ್ಷಗಾನ ಪ್ರದರ್ಶನ
ಸಂಜೆ 6.30 – ನೃತ್ಯ ಕಾರ್ಯಕ್ರಮ
🔸 3 ನವೆಂಬರ್ (ಸೋಮವಾರ)
ಮಧ್ಯಾಹ್ನ 2.00 – ಮಾದಪ್ಪನ ಭಜನ ಕಾರ್ಯಕ್ರಮ
ಸಂಜೆ 6.30 – ಜನಪದ ನೃತ್ಯ ಪ್ರದರ್ಶನ
🔸 4 ನವೆಂಬರ್ (ಮಂಗಳವಾರ)
ಸಂಜೆ 6.30 – ಅಂಧ ಕಲಾವಿದರಿಂದ ವಾದ್ಯಗೋಷ್ಠಿ ಹಾಗೂ ಉತ್ಸವದ ಮುಕ್ತಾಯ ಸಮಾರಂಭ
ಈ ಉತ್ಸವವು ಕರ್ನಾಟಕದ ಅತಿ ದೊಡ್ಡ ಕನ್ನಡ ಸಂಸ್ಕೃತಿ ಮೇಳವಾಗಿದ್ದು, ಕಲಾ, ಕ್ರೀಡೆ, ಸಾಹಿತ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ವೇದಿಕೆಯಾಗಿ ಬೆಳಗಲಿದೆ.
ಸಮರ್ಪಣ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ.) – ಬ್ರಾಂಡ್ ಬಸವನಗುಡಿ
“ಸೇವೆ, ಸಹಾಯ, ಸಂಕಲ್ಪ” ಎಂಬ ಧ್ಯೇಯದೊಂದಿಗೆ ಸಮಾಜಮುಖಿ ಚಟುವಟಿಕೆಗಳತ್ತ ಹೆಜ್ಜೆ ಇಡುತ್ತಿದೆ.
City Today News 9341997936

You must be logged in to post a comment.