
ಸಾಧಕ/ಸಾಧಕಿಯರಿಗೆ ಸಿಂಪೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರದಾನ.
ಬೆಂಗಳೂರು ಪ್ರೆಸ್ ಕ್ಲಬ್: ಸಿಂಪೋನಿ ಸ್ವರ ಪ್ರತಿಷ್ಠಾನ ವತಿಯಿಂದ ಎರಡನೇ ವರ್ಷದ ರಾಜ ಪುನೀತೋತ್ಸವ ಸಮಾರಂಭ, ರಾಜ್ ನಮನ, ಪುನೀತ್ ನಮನ ಸಂಗೀತ ಸಂಜೆ ಮತ್ತು ಸಿಂಫೋನಿ ರಾಜ್ ರತ್ನ ಮತ್ತು ಸಿಂಪೋನಿ ಪುನೀತ್ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 28ರಂದು ಭಾನುವಾರ ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ, ಇದರ ಕುರಿತು ಸಿಂಪೋನಿ ಸ್ವರ ಪ್ರತಿಷ್ಠಾನ ಅಧ್ಯಕ್ಷರಾದ ಸಿಂಪೋನಿ ಶಿವುರವರು ಮಾಧ್ಯಮ ಗೋಷ್ಠಿ ಏರ್ಪಡಿಸಿದ್ದರು.

ಅಧ್ಯಕ್ಷರಾದ ಸಿಂಪೋನಿ ಶಿವು ರವರು ಮಾತನಾಡಿ ಕನ್ನಡ ನಾಡಿಗೆ ಎರಡು ಆಮೂಲ್ಯ ವಜ್ರಗಳು ಮೇರುನಟ ಡಾ|| ರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರವರು ಚಲನಚಿತ್ರ ಅಭಿನಯದಂತೆ ನಿಜ ಜೀವನದಲ್ಲಿಯೂ ಸಹ ಆದರ್ಶ ಪುರುಷರಂತೆ ಬದುಕಿ ಇಡೀ ಸಮಾಜಕ್ಕೆ ಮಾದರಿಯಾದರು.
ಡಾ|| ರಾಜ್ ಮತ್ತು ಪುನೀತ್ ರವರ ಸವಿನೆನಪಿನಲ್ಲಿ ಸಿಂಪೋನಿ ಸ್ವರ ಪ್ರತಿಷ್ಠಾನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಏಪ್ರಿಲ್ 28ರಂದು ಸಂಜೆ 6 ಗಂಟೆಗೆ ರಾಜ ಪುನೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಜ ಪುನೀತೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಚಲನಚಿತ್ರ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡ ಅವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಪರಿಷತ್ ಸದಸ್ಯರಾದ ಡಿ.ಎಂ.ಸಾಲಿ, ಯುವ ನಾಯಕ ನಟ ಯುವ ರಾಜ್ ಕುಮಾರ್, ಐಪಿಎಸ್ ಪೊಲೀಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ, ಲಹರಿ ಆಡಿಯೊ ಸಂಸ್ಥೆಯ ಲಹರಿ ವೇಲು, ಅಖಿಲ ಕರ್ನಾಟಕ ಡಾ॥ ರಾಜ್ ಕುಮಾರ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಎನ್.ಆರ್.ರಮೇಶ್, ಸೌಂಡ್ ಆಫ್ ಮ್ಯೂಸಿಕ್ ಮಾಲೀಕರಾದ ಗುರುರಾಜ್, ದಕ್ಷಿಣ ಭಾರತ ಚಲನಚಿತ್ರ ಸಮನ್ವಯಕಾರರಾದ ಎಸ್.ಕೆ.ಅನಂತ ಮುಂತಾದವರು ಭಾಗವಹಿಸಲಿದ್ದಾರೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾಜದ ಹಲವಾರು ಗಣ್ಯ ವ್ಯಕ್ತಿಗಳು ಮತ್ತು ಸಾಧಕರಿಗೆ ಸಿಂಫೋನಿ ರಾಜ್ ರತ್ನ ಹಾಗೂ ಸಿಂಫೋನಿ ಪುನೀತ್ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ತಿಳಿಸಿದರು.
ಹೇಳುತೈತೆ” ಸಮೂಹ ಗೀತ ಗಾಯನ.
ಸಿಂಪೋನಿ ಸಂಸ್ಥೆಯ 100 ಗಾಯಕ, ಗಾಯಕಿಯರಿಂದ ಪುನೀತ್ ರವರ ಅಜರಾಮರ ಗೀತೆ “ಬೊಂಬೆ
ಡಾ| ರಾಜ್ ಮತ್ತು ಪುನೀತ್ ರಾಜ್ ಕುಮಾರ್ ರವರ ಚಿತ್ರಗಳ ಭಿತ್ತಿ ಚಿತ್ರ ಪ್ರದರ್ಶನ ಮತ್ತು ವಿಶೇಷ ನೃತ್ಯಗಳು. ಪ್ರತಿರೂಪಗಳು ಎಲ್ಲವನ್ನೂ ಏರ್ಪಡಿಸಲಾಗಿದೆ.
ಡಾ|| ರಾಜ್ ನಮನ ಮತ್ತು ಪುನೀಶ್ ನಮನ ಸಂಗೀತ ರಸ ಸಂಜೆಯಲ್ಲಿ ನಾಡಿನ ಪ್ರಖ್ಯಾತ ಗಾಯಕ, ಗಾಯಕಿಯರಿಂದ ಗೀತ ಗಾಯನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
City Today News 9341997936

You must be logged in to post a comment.