
ಬೆಂಗಳೂರು, ಮಾರ್ಚ್ 1: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ, ಬಿ. ಪ್ಯಾಕ್, ಶ್ರೀ ಕೃಷ್ಣ ವೆಲ್ ನೆಸ್ ಸೆಂಟರ್, ಹಾಗೂ ಆದರ್ಶ ಆಟೋ ಯೂನಿಯನ್ ಸಹಭಾಗಿತ್ವದಲ್ಲಿ ಉಚಿತ ಆಟೋ ಚಾಲನಾ ತರಬೇತಿ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ವೆಲ್ ನೆಸ್ ಸೆಂಟರ್‌ನ ಮುಖ್ಯಸ್ಥೆ ಮಿಮಿ ಪಾರ್ಥಸಾರಥಿ, ಬಿ. ಪ್ಯಾಕ್ ಸಂಸ್ಥೆಯ ಡಾ. ಸಿ. ಸಂಪತ್, ರಾಘವೇಂದ್ರ ಪೂಜಾರಿ, ಹರ್ಷಿತ ವಿ, ಕಾವೇರಿ ಕೇದಾರನಾಥ್, ಮಂಜುನಾಥ್ ಮುಂತಾದ ಗಣ್ಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಡಿ ಸಾವಿರಾರು ಮಹಿಳೆಯರು ಉಚಿತ ಆಟೋ ಚಾಲನಾ ತರಬೇತಿಯನ್ನು ಪಡೆಯಲಿದ್ದು, ಅವರ ಆರ್ಥಿಕ ಸ್ವಾತಂತ್ರ್ಯ ಮತ್ತು ಉದ್ಯೋಗಾವಕಾಶಗಳನ್ನು ವೃದ್ಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಅಭ್ಯರ್ಥಿಗಳು ತರಬೇತಿ ಪಡೆಯಲು ನಿಗದಿತ ಅರ್ಹತೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಸಂಸ್ಥೆಗಳ ಜೊತೆ ಸಂಪರ್ಕ ಸಾಧಿಸಬಹುದು.
City Today News 9341997936

You must be logged in to post a comment.