ಸುಪ್ರೀಂ ಕೋರ್ಟ್ ಆಗಸ್ಟ್ 1ರಂದು ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾತಿಯ ತೀರ್ಪು ನೀಡಿರುವ ಕುರಿತು ಬಿಜೆಪಿ ಸರ್ಕಾರಕ್ಕೆ ಧನ್ಯವಾದ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಜೆಪಿ ಸರ್ಕಾರದ ಶ್ರೀ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟವರ್ಗ ಮೀಸಲಾತಿ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಪರಿಶಿಷ್ಟ ಜಾತಿ ಮೀಸಲಾತಿ ಶೇ.15% ರಿಂದ ಶೇ.17%ಕ್ಕೆ ಏರಿಕೆ ಮಾಡುವುದರ ಜೊತೆಗೆ ಎಲ್ಲಾ 101 ಪರಿಶಿಷ್ಟ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣವನ್ನು ರೂಪಿಸಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ವರದಿ ಶಿಫಾರಸ್ಸು ಮಾಡಿ ದಲಿತರ ಬದುಕಿಗೆ ಹೊಸ ಇತಿಹಾಸ ಬರೆದ ರಾಜ್ಯ ಬಿ.ಜೆ.ಪಿ ಸರ್ಕಾರ ಮುಖ್ಯಪಾತ್ರ ವಹಿಸಿರುತ್ತದೆ.

ಇ.ವಿ.ಚನ್ನಯ್ಯ ವಿರುದ್ಧ ಆಂಧ್ರಪ್ರದೇಶ 2004ರ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರವರು ನೀಡಿದ ತೀರ್ಪು ಒಳ ಮೀಸಲಾತಿಯೇ ಅಸಂವಿಧಾನಿಕ ಎನ್ನುತ್ತಿದ್ದ ರಾಜಕಾರಣಿಗಳಿಗೆ ಪ್ರಗತಿಪರ ಹೋರಾಟಗಾರರಿಗೆ, ಸುಪ್ರೀಂ ಕೋರ್ಟ್‌ನ 7 ಜನ ನ್ಯಾಯಾಧೀಶರ ಪೀಠ ಮೀಸಲಾತಿ ಹಂಚಿಕೆ ಬಗ್ಗೆ ಉತ್ತರ ನೀಡಿದೆ. ಜನವರಿ ತಿಂಗಳಲ್ಲಿ ಮೂರು ದಿನ ವಿಸ್ತತ ಚರ್ಚೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.

ಮೂವತ್ತು ವರ್ಷಗಳ ಸುದೀರ್ಘ ಹೋರಾಟಗಳು, ಅವಮಾನಗಳು, ಪ್ರಾಣತ್ಯಾಗ ಮಾಡಿ ಈ ದಿನ ಮಾದಿಗ ಮತ್ತು ಮಾದಿಗ ಉಪಜಾತಿಗಳಿಗೆ ವಿಜಯ ಬಾವುಟವನ್ನು ಹಾರಿಸಿ ಮಾದಿಗರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿರುವ ರಾಷ್ಟ್ರೀಯ ನಾಯಕರು ಅಭಿನವ ಅಂಬೇಡ್ಕರ್ ಶ್ರೀ ಮಂದಕೃಷ್ಣ ಮಾದಿಗ ರವರಿಗೆ ಈ ಕೀರ್ತಿ ಸಲ್ಲುತ್ತದೆ.

ಆರ್ಥಿಕ, ಸಾಮಾಜಿಕ, ವಿದ್ಯಾ, ಉದ್ಯೋಗ ರಂಗಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಮೀಸಲಾತಿ ಹಂಚಿಕೆ ಮಾಡಬಹುದೆಂದು ಸಂವಿಧಾನವಾಗಿ 1-8-2024 ರಂದು ಪರಿಶಿಷ್ಟ ಜಾತಿ ಮತ್ತು ಉಪಜಾತಿಗಳ ಉಪವರ್ಗಿಕರಣ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

ಈ ಕೂಡಲೆ ಹಾಲಿ ಕಾಂಗ್ರೆಸ್ ಸರ್ಕಾರ ಸುಪ್ರೀಂಕೋರ್ಟ್ ಮೀಸಲಾತಿ ಹಂಚಿಕೆ ತೀರ್ಪು ಕುರಿತು ತಕ್ಷಣವೇ ಜಾರಿಗೆ ತಂದು ಕಾಂಗ್ರೆಸ್ ಸರ್ಕಾರ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಎಲ್ಲವನ್ನು ಸ್ಥಗಿತಗೊಳಿಸಿ ಮೀಸಲಾತಿ ಹಂಚಿಕೆ ಮಾಡುವಲ್ಲಿ ಸರ್ಕಾರವು 30 ದಿನಗಳೊಳಗಾಗಿ ಮುಂದಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ವಿಳಂಬ ಮಾಡಿದಲ್ಲಿ ಬೀದರ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ ಸರ್ಕಾರಕ್ಕೆ 7 ಮಂದಿ ತೀರ್ಪು ನೀಡಿರುವ ನ್ಯಾಯಾಧೀಶರುಗಳಿಗೆ, ಎಲ್ಲಾ ಹೋರಾಟಗಾರರಿಗೆ, ಬುದ್ಧಿಜೀವಿಗಳಿಗೆ ಮಾದಿಗ ದಂಡೂರ ಮಾದಿಗ ಹೋರಾಟ ಸಮಿತಿಯಿಂದ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಬಿ.ನರಸಪ್ಪ ದಂಡೂರ ರಾಜ್ಯ ಅಧ್ಯಕ್ಷರು ರವರು ಮಾದಿಗ ದಂಡೋರ ಸಮಿತಿಯ ಮುಖಂಡರುಗಳಾದ ಮಂಜುನಾಥ್ ಕೊಂಡಪಲ್ಲಿ,ಎಸ್.ರಾಮಕೃಷ್ಣ,ತ್ರಿಲೋಕ್ ಚಂದರ್,ಗಣೇಶ್ ದುಪ್ಪಳ್ಳಿ,ಫರ್ನಾಂಡೀಸ್ ಹಿಪ್ಪಳಾಂಗವ,ಜೆ.ಎಂ.ದೇವರಾಜ್ ಮತ್ತು ವೆಂಟೇಶ್ ಕತ್ತಿ ಯವರ  ಉಪಸ್ಥಿತಿಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುದರು.

City Today News 9341997936