
ಪರಿಶಿಷ್ಟ ಜಾತಿಗಳ ಮೀಸಲಾತಿಯು 101 ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಪರಿಶಿಷ್ಟ ಮೀಸಲಾತಿಯನ್ನು 4 ಗುಂಪುಗಳನ್ನಾಗಿ ವರ್ಗೀಕರಣ ಮಾಡಲು ಒತ್ತಾಯಿಸಿ 3 ದಶಕಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಚಳುವಳಿ ಮಾಡಿದ ಹಲವರು ಜೀವ, ಜೀವನ ಮತ್ತು ಬದುಕನ್ನೇ ಬಲಿಕೊಟ್ಟು ಬಸವಳಿದಿದ್ದಾರೆ.
ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸಲು ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 2004ರಲ್ಲಿ ನಿ. ನ್ಯಾ ಎ.ಜೆ. ಸದಾಶಿವ ಆಯೋಗ ರಚಿಸಿತು. ಆಯೋಗ ಸರ್ಕಾರಕ್ಕೆ ದಿನಾಂಕ 14-06-2012ರಂದು ವರದಿ ಸಲ್ಲಿಸಿತು. ಹಿಂದಿನ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರದ “ಸಚಿವ ಸಂಪುಟ”ವು ನಿವೃತ್ತ ನ್ಯಾ. ಸದಾಶಿವರವರ ವರದಿಯಲ್ಲಿನ ದತ್ತಾಂಶದ ಪ್ಯಾರ-1ನ್ನು ಅಂಗೀಕರಿಸಿ ದಿನಾಂಕ 31-03-2023ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಸಹ ಪರಿಶಿಷ್ಠರ ಮೀಸಲಾತಿ ವರ್ಗೀಕರಣ ಮಾಡುವ ನಿರ್ಣಯವನ್ನು “ಸಚಿವ ಸಂಪುಟ ದಲ್ಲಿ ಅನುಮೋದಿಸಿ ದಿನಾಂಕ 17-03-2024ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.
ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡಲು ಒತ್ತಾಯಿಸಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಡ, ಜಾರ್ಖಂಡ್, ಹರಿಯಾಣ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಲವಾರು ದಶಕಗಳಿಂದ ಹೋರಾಟ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು :- ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕಾಗಿ ವಿವಿಧ ರಾಜ್ಯಗಳ ಆಯೋಗಗಳ
ವರದಿಗಳು ಮತ್ತು ಕೋರ್ಟ್‌ಗಳ ಹಲವು ತೀರ್ಪುಗಳನ್ನು ಪರಮಾರ್ಶಿಸಿದ ಸುಪ್ರೀಂಕೋರ್ಟ್‌ನ 7 ನ್ಯಾಯಾಧೀಶರ ಸಂವಿಧಾನ ಪೀಠ ದಿನಾಂಕ : 01-08-2024ರಂದು “ಐತಿಹಾಸಿಕ ತೀರ್ಪು’ ನೀಡಿತು. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವ ಸಂವಿಧಾನಬದ್ಧ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ತೀಪು ನೀಡಿದೆ
ಕೆನೆಪದರ :- ಮೂಲ ಸಂವಿಧಾನದ ಅನುಚ್ಛೇದ 15(4) ಮತ್ತು 16 (4)ರಂತೆ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಿದ ಮೀಸಲಾತಿಯು ಮೂಲಭೂತ ಹಕ್ಕಾಗಿದ್ದು ಕೆನೆ ಪದರಕ್ಕೆ ಅವಕಾಶವೇ ಇಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಪೀಠ 1992ರಲ್ಲಿ ಇಂದ್ರಸಾಕ್ಷಿ ಕೇಸ್‌ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಸಂವಿಧಾನದ ವಿಧಿ 15(4) ಮತ್ತು 16 (16) “ಸಮಕಾಲೀನ ಪಟ್ಟಿ” (Concurrent List of Subject) ಆಗಿದೆ. ಹಾಗಾಗಿ ಕೇಂದ್ರ ಸರ್ಕಾರ ಅಳವಡಿಸಿಕೊಂಡ ನೀತಿಯನ್ನೇ ರಾಜ್ಯಗಳು ಅನುಸರಿಸಬೇಕು. ಈಗಾಗಲೇ ಸುಪ್ರೀಂಕೋರ್ಟಿನ ಆದೇಶವನ್ನು ಸ್ವಾಗತಿಸಿರುವ ಕೇಂದ್ರ “ಸಚಿವ ಸಂಪುಟ” ಪ.ಜಾ / ಪ. ವರ್ಗಗಳಿಗೆ ಕೆನೆಪದರ ಮೀಸಲಾತಿ ಅಳವಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ರಾಜ್ಯ ಸರ್ಕಾರ ಮತ್ತಷ್ಟು ವಿಳಂಬ ಧೋರಣೆ ಮಾಡಿ ಮೀನಾಮೇಷ ಎಣಿಸದೆ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಹಾಗೂ ಸಂವಿಧಾನಕ್ಕೆ ಗೌರವ ನೀಡಿ ಈ ಕೂಡಲೇ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡಲು ದ.ಸಂ.ಸ. ಆಗ್ರಹಿಸಿದೆ.
-: ಹಕ್ಕೋತ್ತಾಯಗಳು :-
+ ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಿ.
+ 2023-2024 ಮತ್ತು 2024-2025ನೇ ಸಾಲಿನಲ್ಲಿ 25,391 ಕೋಟಿ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ
ಎಸ್‌ಸಿಪಿ/ಬಿಎಸ್‌ಪಿ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಈ ಹಣವನ್ನು ಈ ಸಮಾಜದ
ಅಭಿವೃದ್ಧಿಗೆ ವಾಪಸ್ ನೀಡಲೇಬೇಕು. + ಪ.ಜಾತಿ / ಪ. ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸರಿಯಾಗಿ ನೀಡುತ್ತಿಲ್ಲ ಹಾಗೂ ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶದಲ್ಲಿ ಎಸ್.ಸಿ/ಎಸ್.ಟಿ. ವ್ಯಾಸಂಗ ಮಾಡಲು ಇದ್ದ ಪ್ರಬುದ್ಧ ಯೋಜನೆ ರದ್ದು ಮಾಡಲಾಗಿದೆ. ಪುನಃರಾರಂಭಿಸಲಿ.
+ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಜಾರಿಯಾಗುವವರೆಗೂ ಕೇಂದ್ರ ಮತ್ತು ರಾಜ್ಯದ ಎಲ್ಲಾ ಉದ್ಯೋಗ ನೇಮಕಾತಿಗಳನ್ನು ಸ್ಥಗಿತಗೊಳಿಸಲಿ.
+ ಪಾಸಗಿ ಉದ್ಯೋಗ ಕ್ಷೇತ್ರ ಮತ್ತು ಗುತ್ತಿಗೆ ನೇಮಕಾತಿಗಳಲ್ಲಿಯೂ ಎಸ್.ಸಿ/ಎಸ್.ಟಿ ಮೀಸಲಾತಿ ಜಾರಿಯಾಗಲಿ.
+ ಕೇಂದ್ರ ಸರ್ಕಾರ ಕೂಡಲೇ ಎಸ್.ಸಿ/ಎಸ್.ಟಿ ಅಭಿವೃದ್ಧಿಗಾಗಿ ಎಸ್ ಸಿಪಿ/ಬಿಎಸ್ಪಿ ಕಾಯ್ದೆ ರಚಿಸಿ ಜನಸಂಖ್ಯೆಗನುಗುಣವಾಗಿ ಐಜೆಟ್‌ನಲ್ಲಿ ಹಣ ನೀಡಬೇಕು ಎಂದು ದಾದಾ ಸಾಹೇಬ್ ಡಾ॥ ಎನ್. ಮೂರ್ತಿ ದ.ಸಂ.ಸ ರಾಜ್ಯಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಆಗ್ರಹಿಸಿದರು.

You must be logged in to post a comment.