
ಬೆಂಗಳೂರು: ನಗರದ ಗಾಂಧಿನಗರದಲ್ಲಿರುವ ಬಿಸಿಯು ಬೇಸ್ ಕ್ಯಾಂಪ್‌ನಲ್ಲಿ ಆಕರ್ಷಕವಾಗಿ ಆಯೋಜಿಸಲಾದ “ಸೆಲೆಬ್ರಿಟಿ ಥ್ರೋಬಾಲ್ ಹಾಗೂ ವಾಲಿಬಾಲ್ ಟೂರ್ನಮೆಂಟ್”ಗೆ ರಾಜ್ಯದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟ ಹಾಗೂ ನಿರ್ಮಾಪಕರಾದ ಗಂಡಸಿ ಸದಾನಂದ ಸ್ವಾಮಿ ಕ್ರೀಡಾಪಟುಗಳಿಗೆ ಶುಭಾಶಯ ತಿಳಿಸಿ, ಇಂತಹ ಕ್ರೀಡಾ ಕಾರ್ಯಕ್ರಮಗಳು ಯುವಜನರಲ್ಲಿ ಉತ್ಸಾಹವನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕರ ಜೀವನಶೈಲಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಟೂರ್ನಮೆಂಟ್‌ನ್ನು ಡೈರೆಕ್ಟರ್ ಕೆ.ಎಂ. ನಟರಾಜ್ ಅವರ ಮಾರ್ಗದರ್ಶನದಲ್ಲಿ, ಸಂಸ್ಥಾಪಕಿ ರೂಪಾ ಗೌಡ ಹಾಗೂ ಸಿಇಒ ಕಿರಣ್ ಗೌಡ ಅವರ ನೇತೃತ್ವದಲ್ಲಿ ಸಮರ್ಪಕವಾಗಿ ಆಯೋಜಿಸಲಾಗಿತ್ತು.
ಕಿರುತೆರೆ, ರಿಯಾಲಿಟಿ ಶೋ ಹಾಗೂ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧರಾಗಿರುವ ಅನೇಕ ಕಲಾವಿದರು ಟೂರ್ನಮೆಂಟ್‌ನಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು. ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಗಳು ಉತ್ಸಾಹಭರಿತವಾಗಿ ನಡೆದು ಪ್ರೇಕ್ಷಕರ ಮನ ಗೆದ್ದವು.
ಕ್ರೀಡೆ ಮತ್ತು ಮನರಂಜನೆ ಒಂದೇ ವೇದಿಕೆಯಲ್ಲಿ ಒಂದಾಗುವ ಮೂಲಕ ಈ ಕಾರ್ಯಕ್ರಮವು ಯುವಜನತೆಗೆ ಹೊಸ ಸ್ಪೂರ್ತಿಯನ್ನು ನೀಡಿತು.
City Today News 9341997936

You must be logged in to post a comment.