
ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ, ಸೌದಿ ಅರೇಬಿಯಾ ಮತ್ತು ಹೃದಯವಾಹಿನಿ – ಕರ್ನಾಟಕ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ.
17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನವು ಜನವರಿ 18 ಮತ್ತು 19, 2024ರಂದು ದಮಾಮ್ ನ ಸಫಾ ಸಭಾಂಣದಲ್ಲಿ 2 ದಿನಗಳ ಕಾಲ ಅದ್ಧೂರಿಯಾಗಿ ಹಮ್ಮಿಕೊಂಡಿರುತ್ತೇವೆ.

ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂದಪಟ್ಟಂತೆ ಕವಿಗೋಷ್ಠಿ, ಹಾಸ್ಯಗೋಷ್ಠಿ, ಮಾಧ್ಯಮಗೋಷ್ಠಿ ಹಾಗೂ ಅನಿವಾಸಿ ಕನ್ನಡಿಗರ ಗೋಷ್ಠಿ ಜರಗಲಿವೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪ, ಪಟ್ಲ ಫೌಂಡೇಶನ್ ನ ಬಹರೇನ್ ಮತ್ತು ಸೌದಿ ಅರೇಬಿಯಾ ಘಟಕದ ಕಲಾವಿದರಿಂದ ಯಕ್ಷಗಾನ, ಡೊಳ್ಳು ಕುಣಿತ, ಮಂಗಳೂರಿನ ಬ್ಯಾರಿ ಜಾನಪದ ಕಲಾವಿದರಿಂದ ದಫ್, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದಿಂದ ಜಾನಪದ ಸಂಭ್ರಮ ಮುಂತಾದ ಕಲೆಗಳು ಪ್ರದರ್ಶನಗೊಳ್ಳುವವು. ಕರ್ನಾಟಕದ ಕಲೆ, ಮತ್ತು ಸಂಸ್ಕೃತಿಗಳು ವಿದೇಶಿ ನೆಲವಾದ ದಮ್ಮಾಮ್ ನಲ್ಲಿ ಪ್ರತಿಬಿಂಬಿಸಲಿವೆ.
ಈ ಹಿಂದೆ 2004, 2012 ಮತ್ತು 2019ರಲ್ಲಿ ಅಬುಧಾಬಿ, 2005 ಮತ್ತು 2010ರಲ್ಲಿ ಸಿಂಗಾಪುರ, 2006 ಮತ್ತು 2011ರಲ್ಲಿ ಬಹರೇನ್, 2007ರಲ್ಲಿ ಕುವೈಟ್, 2008ರಲ್ಲಿ ಕತಾರ್, 2009ರಲ್ಲಿ ದುಬೈ ಮತ್ತು 2013ರಲ್ಲಿ ಆಫ್ರಿಕಾದ ಕೀನ್ಯಾ, 2014ರಲ್ಲಿ ಶಾರ್ಜಾ, 2017ರಲ್ಲಿ ಆಸ್ಟ್ರೇಲಿಯಾ, 2015 2018 ಕೆನಡಾ ಮತ್ತು 2021 ಮಸ್ಕಟ್ ಅನುಕ್ರಮವಾಗಿ 16 ಸಮ್ಮೇಳನಗಳು ಅದ್ಧೂರಿಯಾಗಿ ನಡಿದಿರುತ್ತವೆ.
ಸಮ್ಮೇಳನ ನಡೆಯಲಿರುವ ಸಭಾಂಗಣದ ಹೊರವಲಯದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಸೌದಿ ಅರೇಬಿಯಾದಲ್ಲಿ 40,000ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಚಾರ ನೀಡಲಾಗುವುದು. ಗಲ್ಫ್ ರಾಷ್ಟ್ರಗಳಾದ, ಬಹರೇನ್, ಅಬು ಧಾಬಿ, ಕುವೈತ್, ಕತಾರ್, ಶಾರ್ಜಾ, ಮತ್ತು ದುಬೈನಲ್ಲಿ ನೆಲೆಸಿರುವ ಕನ್ನಡಿಗರು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲಾಗುವುದು.
ಜನವರಿ 18 ರಂದು ಮಧ್ಯಾಹ್ನ ಉದ್ಘಾಟನೆ ನೆರವೇರಿಸಲು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರನ್ನು ಆಮಂತ್ರಿಸಲಾಗುವುದು. ಎರಡು ದಿನಗಳ ಸಮ್ಮೇಳನದ ಗಣ್ಯರನ್ನಾಗಿ ವಿಧಾನಸಭಾ ಸಭಾಪತಿಗಳಾದ ಶ್ರೀ ಯು ಟಿ ಖಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ್
ತಂಗಡಗಿ ಕೃಷಿ ಖಾತೆ ಸಚಿವರಾದ ಶ್ರೀ ಚೆಲುವರಾಯಸ್ವಾಮಿ, ಆರೋಗ್ಯ ಖಾತೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಉನ್ನತ ಶಿಕ್ಷಣ ಖಾತೆ ಸಚಿವರಾದ ಶ್ರೀ ಮಧು ಬಂಗಾರಪ್ಪ, ಪೌರಾಡಳಿತ ಮತ್ತು ಹಜ್ ಖಾತೆ ಸಚಿವರಾದ ಶ್ರೀ ರಹಿಂ ಖಾನ್ ಅನಿವಾಸಿ ಭಾರತೀಯ ವೇದಿಕೆ – ಕರ್ನಾಟಕ ಇದರ ಉಪಾಧ್ಯಕ್ಷರಾದ ಡಾ ಆರತಿ ಕೃಷ್ಣ, ಸೌದಿ ಅರೇಬಿಯಾದ ಭಾರತ ರಾಯಭಾರಿ ಡಾ.ಸುಹೇಲ್ ಆಜಾಜ್ ಖಾನ್, ವಿಧಾನ ಶಾಸಕ ಶ್ರೀ ಬಿ. ಎಂ. ಫಾರೂಕ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರನ್ನು ಆಮಂತ್ರಿಸಲಾಗಿದೆ.
ಜನವರಿ 19ರ ಸಂಜೆ ಸಮಾರೋಪ ಮತ್ತು ಪುರಸ್ಕಾರ ಸಮಾರಂಭ ಜರಗಲಿರುವವು. ಕರ್ನಾಟಕ ಮತ್ತು ಭಾರತದ ಇತರ ಭಾಗಗಳಿಂದ ಸುಮಾರು 100ಕ್ಕೂ ಹೆಚ್ಚು ಸದಸ್ಯರ ಸಾಂಸ್ಕೃತಿಕ ನಿಯೋಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದೆ. ವಿವಿಧ ದೇಶಗಳ ಕನ್ನಡ ಸಂಘಗಳ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿರುವರು.
ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯನ್ನು ಜನವರಿ ಮೊದಲ ವಾರ ಮಾಡಲಾಗುವುದು. ಹಿರಿಯ ಅರ್ಹ ಸಾಹಿತಿಗಳ ಹೆಸರು ಸೂಚಿಸಲಿಚ್ಚಿಸುವವರು ಜನವರಿ 2. 2024ರೊಳಗೆ hrudayavahini@rediffmail.com

ಸುಪ್ರಸಿದ್ಧ ಕಲಾವಿದರಾದ. ಕುದ್ರೋಳಿ ಗಣೇಶ್ ಅವರ ತಂಡದಿಂದ ಮ್ಯಾಜಿಕ್ ಶೋ, ಮಿಮಿಕ್ರಿ ಗೋಪಿ ಅವರಿಂದ ಸ್ವರಾನುಕರಣೆ, ಮಹದೇವ ಸತ್ತಿಗೇರಿ ಅವರಿಂದ ಹಾಸ್ಯ ಭಾಷಣ, ಗೋ ನಾ ಸ್ವಾಮಿ, ಪುಷ್ಪ ಆರಾಧ್ಯ, ಅನಿಲ್ ಬಾಸಗಿ ಮತ್ತು ಶಿವು ಮುಂತಾದ ಗಾಯಕರಿಂದ ಸ್ವರಮಂಜರಿ, ರಂಗ ಸಂಸ್ಕೃತಿ ಬೆಂಗಳೂರು ತಂಡದಿಂದ ಕಿರುನಗೆ ನಾಟಕ, ಬಹರೇನ್ ಕಲಾವಿದರಿಂದ ಯಕ್ಷಗಾನ, ಮಂಗಳೂರಿನ ಬ್ಯಾರಿ ಕಲಾವಿದರಿಂದ ದಫ್ ಪ್ರದರ್ಶನ, ಪುಷ್ಕರ ಪರ್ಫಾರ್ಮಿಂಗ್ ಆರ್ಟ್ಸ್ ಬೆಂಗಳೂರು ಇವರಿಂದ. ಭರತನಾಟ್ಯ,
ಸಾಗರ ಮತ್ತು ಮಂಡ್ಯ ಜಾನಪದ ಕಲಾವಿದರಿಂದ ಡೊಳ್ಳು ಕುಣಿತ ಇನ್ನು ಹಲವಾರು ಕಲಾವಿದರಿಂದ. ವೈವಿಧ್ಯಮಯ ಕಾರ್ಯಕ್ರಮಗಳು ಸೌದಿ ಅರೇಬಿಯಾದ ಕನ್ನಡಿಗರನ್ನು ರಂಜಿಸಲಿವೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ: ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಸೌದಿ ಅರೇಬಿಯಾ ಗೌರವಾಧ್ಯಕ್ಷರಾದ ಝಕರಿಯಾ ಬಟ್ಟೆ, ಶೇಖ್ ಕರ್ನಿರೆ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಸ್ಥಾಪಕ ಅಧ್ಯಕ್ಷ, ಕೆ. ಪಿ ಮಂಜುನಾಥ್ ಸಾಗರ್, ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಬಜಾಲ್, ರಫೀಜ್ ಸೂರಿಂಜೆ ಕಾರ್ಯದರ್ಶಿ ಆಯಾಜ್, ಸಮ್ಮೇಳನ ಸಮಿತಿ ಜಂಟಿ ಕಾರ್ಯದರ್ಶಿ ಗೋ ನಾ. ಸ್ವಾಮಿ. ಕಲಾವಿದರ ಒಕ್ಕೂಟದ ಅಧ್ಯಕ್ಷ ನಾಗರಾಜ್ ಇದ್ದರು.
City Today News 9341997936

You must be logged in to post a comment.