ಪ್ರಾಮಾಣೀಕೃತ ಹಾಗೂ ಪರಿಸರ ಸ್ನೇಹಿ ರೀತಿಯಲ್ಲಿ ಕಾಂಪೋಸ್ಟ್ ಆಗಿ ವಿಲೇವಾರಿ ಮಾಡಬಹುದಾದ ಸ್ಯಾನಿಟರಿ ನ್ಯಾಪ್ಕಿನ್ ಗಳ ಶ್ರೇಣಿ – ಆನಂದಿ ಅಥ್ಲೆಟಿಕ್ ರಿಟೇಲ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದ ಆಕಾರ್ ಇನ್ನೋವೇಷನ್ಸ್

ಬೆಂಗಳೂರು, ಅಕ್ಟೋಬರ್ 23, 2023 ಸಾಮಾಜಿಕ ಉದ್ಯಮ ಸಂಸ್ಥೆಯಾದ ಆಕಾರ್ ಇನ್ನೊವೇಷನ್ಸ್‌ನಿಂದ ಆವಿಷ್ಕರಿಸಿ, ಉತ್ಪಾದಿಸಲಾದ ಸ್ಯಾನಿಟರಿ ನ್ಯಾಪ್ಕಿನ್ ಗಳ ಶ್ರೇಣಿ – ಆನಂದಿ ಅಥ್ಲೆಟಿಕ್ ಅನ್ನು ಬಿಡುಗಡೆ ಮಾಡಲಾಗಿದೆ. ಇವು ಭಾರತದಲ್ಲಿ ಪ್ರಥಮಬಾರಿಗೆ ಪ್ರಾಮಾಣೀಕೃತ ಸ್ಯಾನಿಟರಿ ಪ್ಯಾಡ್‌ಗಳಾಗಿದ್ದು, ಶೇ.100ರಷ್ಟು ಪರಿಸರದಲ್ಲಿ ಕಾಂಪೋಸ್ಟ್ ಗೊಬ್ಬರವಾಗಿ ಮಿಶ್ರಣವಾಗುವಂತಹ ವಿಶೇಷ ಗುಣ ಹೊಂದಿದ್ದು, ಪೇಟೆಂಟ್ ಪಡೆದ ತಂತ್ರಜ್ಞಾನದ ಬೆಂಬಲ ಹೊಂದಿರುತ್ತದೆ. ಈ ನೂತನ ಶ್ರೇಣಿಯ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಬೆಂಗಳೂರಿನಲ್ಲಿ, ಜ್ಯೂಲಿಯಾ ಮಾರ್ಲಿ(ಮಿಸ್ ವರ್ಲ್ಡ್ ಆರ್ಗನೈಸೇಷನ್‌ನ ಸಿಇಒ) ಮತ್ತು ಕ್ಯಾರೋಲಿನಾ ಬಿಲಾವಸ್ಕಾ(2022ರ ಮಿಸ್ ವರ್ಲ್ಡ್) ಮತ್ತು ಸಿನಿ ಶೆಟ್ಟಿ(2022ರ ಮಿಸ್ ಇಂಡಿಯಾ) ಅವರ ಹಾಜರಿಯಲ್ಲಿ ಬಿಡುಗಡೆ ಮಾಡಲಾಗಿದೆ.

ತಮ್ಮ ಈ ಕ್ರಾಂತಿಕಾರಿ ತಂತ್ರಜ್ಞಾನದ ಮೂಲಕ ಆಕಾ‌ ಇನ್ನೋವೇಷನ್ಸ್ ಯಾವುದೇ ಹಾನಿಕಾರಕ ರಾಸಾಯನಿಕಗಳು ಮತ್ತು `ಪ್ಲಾಸ್ಟಿಕ್‌ಗಳಿಂದ ಮುಕ್ತವಾಗಿರುವಂತಹ, ಮಹಿಳೆಯರ ಮುಟ್ಟಾಗುವ ಸಂದರ್ಭದಲ್ಲಿ ಉಪಯೋಗಿಸುವಂತಹ ಸುಸ್ಥಿರವಾದ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇದು ಮಹಿಳೆಯರ ಆರೋಗ್ಯಕ್ಕೆ ಉತ್ತಮವಾಗಿದೆ. ಇದರ ಉತ್ಪನ್ನಗಳು ಕೃತಕ ಬಣ್ಣಗಳು ಮತ್ತು ಸುಗಂಧಗಳು, ಪ್ಲಾಸ್ಟಿಕ್‌ಗಳು, ಡಯಾಕ್ಸಿನ್ ಮತ್ತು ಇತರೆ ಕ್ಯಾನ್ಸರ್ ಕಾರಕ ವಸ್ತುಗಳಿಂದ ಮುಕ್ತವಾಗಿವೆ. ಇದರಿಂದಾಗಿ ಬಳಸಲು ಇವು ಅನುಕೂಲಕರ ಹಾಗೂ ಸುಲಭವಾಗಿರುವುದಲ್ಲದೆ, ವಿಲೇವಾರಿ ಕೈಗೊಳ್ಳಲು ಸುರಕ್ಷಿತವಾಗಿರುತ್ತವೆ.

7 ಎಕ್ಸ್‌ಎಲ್ ಪ್ಯಾಡ್‌ಗಳಿಗೆ ಪ್ರಸ್ತುತ ರೂ. 65 ಮತ್ತು 1 ಎಕ್ಸ್‌ಎಕ್ಸ್‌ಎಲ್ ಪ್ಯಾಡ್‌ಗಳಿಗೆ 80 ರೂ. ಬೆಲೆಯನ್ನು ಆನಂದಿ ಅಥ್ಲೆಟಿಕ್ ಪ್ಯಾಡ್‌ಗಳು ಹೊಂದಿರುತ್ತವೆ. ಬೆಂಗಳೂರಿನ ನೂರಕ್ಕೂ ಹೆಚ್ಚಿನ ರಿಟೇಲ್ ಮಳಿಗೆಗಳಲ್ಲಿ ಇವು ಈಗ ಲಭ್ಯವಿರುತ್ತವೆ. ಆನಂದಿ ಅಥ್ಲೆಟಿಕ್ ಪ್ಯಾಡ್‌ಗಳು ಶೀಘ್ರದಲ್ಲಿಯೇ ಕರ್ನಾಟಕ ರಾಜ್ಯದ ಎಲ್ಲೆಡೆ ರಿಟೇಲ್ ಸ್ಟೋರ್‌ಗಳಲ್ಲಿ ದೊರೆಯಲಿವೆ.

ಈ ಸಂದರ್ಭದಲ್ಲಿ ಆಕಾ‌p ಇನ್ನೋವೇಷನ್ಸ್‌ನ ಸ್ಥಾಪಕರಾದ ಜೈದೀಪ್ ಮಂಡಲ್ ಅವರು ಮಾತನಾಡಿ, ‘ದೀರ್ಘಕಾಲಿಕವಾಗಿ ನೋಡಿದಾಗ, ಮುಟ್ಟು ಅಥವಾ ಋತುಸ್ರಾವ ಸಂದರ್ಭದಲ್ಲಿ ನೈರ್ಮಲ್ಯಯುತವಾಗಿ ನಿರ್ವಹಣೆ ಕೈಗೊಳ್ಳುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸಂವೇದನೆ ಮೂಡಿಸುವುದು ಆಕಾ‌ ಇನ್ನೋವೇಷನ್ಸ್‌ನಲ್ಲಿ ನಮ್ಮ ಗುರಿಯಾಗಿದೆ. ಸ್ಯಾನಿಟರಿ ಪ್ಯಾಡ್‌ಗಳು ಎಲ್ಲಾ ಮಹಿಳೆಯರಿಗೆ ಲಭ್ಯವಾಗಬಹುದು ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರೆಯಬಹುದು ಹಾಗೂ ಇವು ಹೆಚ್ಚು ಆರೋಗ್ಯಕರವಾಗುವಂತೆ ಅಲ್ಲದೆ, ಪರಿಸರಕ್ಕೆ ಸುಸ್ಥಿರವಾಗಿರುವಂತೆ ಹೇಗೆ ಮಾಡುವುದು ಎಂಬ ಉದ್ದೇಶ ನಮ್ಮದಾಗಿರುತ್ತದೆ. ಈ ಎಲ್ಲಾ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡ ಅಂತಹ ಒಂದು ಪರಿಹಾರದಡಿ ಬಂದಿರುವ ಉತ್ಪನ್ನ ಆನಂದಿ ಅಥ್ಲೆಟಿಕ್ ಪ್ಯಾಡ್ ಆಗಿರುತ್ತದೆ. ಅಗತ್ಯವಿರುವ ಮಹಿಳೆಯರು ಮತ್ತು ಬಾಲಕಿಯರಿಗೆ ಪ್ಯಾಡ್‌ಗಳನ್ನು ಪೂರೈಸುವುದು ಮತ್ತು ಋತುಸ್ರಾವ ಸಂದರ್ಭದಲ್ಲಿ ನೈರ್ಮಲ್ಯ ಕುರಿತಂತೆ ಶಿಕ್ಷಣವನ್ನು ವಿಸ್ತರಿಸುವುದಕ್ಕೆ ನಮ್ಮ ಉತ್ಪನ್ನಗಳ ಮಾರಾಟ ಕೊಡುಗೆ ನೀಡುತ್ತದೆ’ ಎಂದರು.

ಅನುಕೂಲಕರವಾಗಿರುವ ಖಾತ್ರಿ ಮಾಡಿಕೊಳ್ಳುತ್ತದೆ

ಆನಂದಿ ಅಥ್ಲೆಟಿಕ್‌ನ ನೂತನ ಉತ್ಪನ್ನವನ್ನು ಗೊಬ್ಬರವಾಗಿ ವಿಲೇವಾರಿಯಾಗುವಂತಹ ಸ್ಯಾನಿಟರಿ ಪ್ಯಾಡ್‌ಗಳನ್ನು ತರುವ ಉದ್ದೇಶದೊಂದಿಗೆ ಮಹಿಳೆಯರಿಗಾಗಿ ವಿಸ್ತಾರವಾದ ಶ್ರೇಣಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಉತ್ಪನ್ನ ಇಂದಿನ ಮಹಿಳೆಯರ ಅಗತ್ಯಗಳಿಗೆ ನಿರ್ದಿಷ್ಟವಾಗಿ ಹೊಂದಿಕೊಳ್ಳುತ್ತದೆ, ಈ ಮಹಿಳೆಯರು ಸ್ಯಾನಿಟರಿ ನ್ಯಾಪ್ಕಿನ್ ಗಳ ಆಯ್ಕೆ ಕುರಿತು ಕಡಿಮೆ ಚಿಂತೆ ಹೊಂದಿರುವಂತೆ ಮಾಡಿ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಕನಸುಗಳನ್ನು ಭಯವಿಲ್ಲದೆ ಸಾಧಿಸುವಂತೆ ಮಾಡಲು ಇದು ನೆರವಾಗುತ್ತದೆ. ಅತ್ಯಂತ ತೆಳ್ಳಗಿನ ಆಕಾರದ ಅಲ್ಪಾಥಿನ್ ರೂಪ ಮತ್ತು ಬಹು ಪದರದ ಸಂರಕ್ಷಣೆ, ಮೃದುವಾದ ಮೇಲ್ಬಾಗದ ಪದರ ಮತ್ತು ಉಸಿರಾಡುವಂತಹ ಹಿಂಭಾಗದ ಪದರ ಮುಂತಾದವುಗಳನ್ನು ಪೂರೈಸುವುದರೊಂದಿಗೆ ಈ ಉತ್ಪನ್ನ ಸುರಕ್ಷತೆ ಮತ್ತು ನೈರ್ಮಲ್ಯದ ಖಾತ್ರಿ ನೀಡುತ್ತದೆ.

ಆನಂದಿ ಪ್ಯಾಡ್‌ಗಳು ಭಾರತದಲ್ಲಿ ಪ್ರಥಮವಾಗಿದ್ದು, ಪ್ರಾಮಾಣಿಕ ಹಾಗೂ ಗೊಬ್ಬರವಾಗಿ ವಿಲೇವಾರಿವಾಗಬಲ್ಲ ಪ್ಯಾಡ್‌ಗಳಾಗಿವೆ. ಇವು 3ರಿಂದ 6 ತಿಂಗಳಲ್ಲಿ ಮಣ್ಣಿನೊಂದಿಗೆ ಗೊಬ್ಬರವಾಗಿ ಮಿಶ್ರಣಗೊಳ್ಳುತ್ತವೆ. ಇವು ಹಸಿರು ಮೌಲ್ಯವರ್ಧನೆ ಕೈಗೊಳ್ಳುತ್ತವೆ. ಪ್ರತಿ ಪ್ಯಾಡ್ 40- 50 ಗ್ರಾಮ್ ಕಾಂಪೋಸ್ಟ್ ಆಗಿ ಮಣ್ಣಿನಲ್ಲಿ ಪರಿವರ್ತಿತವಾಗುತ್ತವೆ. ಇವುಗಳನ್ನು ನಂತರ ಗೊಬ್ಬರವಾಗಿ ಬಳಸಬಹುದು. ಈ ಉತ್ಪನ್ನ ದೇಹಕ್ಕೆ ಉತ್ತಮವಾಗಿರುವುದಲ್ಲದೆ, ಪರಿಸರಕ್ಕೂ ಉತ್ತಮವಾಗಿರುತ್ತದೆ.

  ಮಹಿಳೆಯರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಅಗ್ರ ಆದ್ಯತೆ

  ಮಹಿಳೆಯರಿಗೆ ಅಲರ್ಜಿ, ದದ್ದುಗಳು, ಕಿರಿಕಿರಿ ಮುಂತಾದವುಗಳಿಂದ ಸಂರಕ್ಷಣೆಯ ಭರವಸೆಯನ್ನು ಆನಂದಿ ಅಥ್ಲೆಟಿಕ್ ಪ್ಯಾಡ್‌ಗಳು ಹೊಂದಿರುತ್ತವೆ. ಅತಿಯಾಗಿ ಹೀರಿಕೊಳ್ಳುವಂತಹ ವಸ್ತುಗಳಲ್ಲಿ ಬಳಸುವ ಹಾನಿಕಾರಕ ರಾಸಾಯನಿಕಗಳಿಂದ ಉಂಟಾಗಬಹುದಾದ ಗಂಭೀರ ರೋಗಗಳು ಮತ್ತು ತೊಂದರೆಗಳಿಂದ ಇವು ಮಹಿಳೆಯರನ್ನು ದೂರವಿಡುತ್ತವೆ. ವಿಷಕಾರಿ ಪದಾರ್ಥಗಳು, ಸೋಡಿಯಂ ಪಾಲಿಅಕ್ರಿಲೇಟ್ (ಜೆಲ್/ಎಸ್‌ಪಿ), ಸುಗಂಧಗಳು, ಕೃತಕ ವಸ್ತುಗಳು ಮುಂತಾದವುಗಳಿಂದ ಸಾಂಪ್ರದಾಯಿಕ ಪ್ಲಾಸ್ಟಿಕ್ ಪ್ಯಾಡ್‌ಗಳನ್ನು ತಯಾರಿಸಲಾಗುತ್ತದೆ. ಇನ್ನೊಂದಡೆ ಆನಂದಿ ಪ್ಯಾಡ್‌ಗಳನ್ನು ಜೈವಿಕ ಮೂಲದ ವಸ್ತುಗಳಿಂದ ತಯಾರಿಸಲಾಗುವುದಲ್ಲದೆ, ಇವು ತ್ವಚೆ ಸ್ನೇಹಿ ಎಂದು ನಿರೂಪಿತವಾಗಿವೆ. ಸಾಕಷ್ಟು ಹೀರುವ ಗುಣ ಹೊಂದಿರುವಂತಹ ಬಯೊ ಸೂಪರ್ ಅಬ್ಬಾರ್‌ಬೆಂಟ್‌ಗಳನ್ನು ಆನಂದಿ ಪ್ಯಾಡ್‌ಗಳು ಪರಿಚಯಿಸಿವೆ. ಈ ಪ್ಯಾಡ್‌ಗಳು ರಾಷ್ ಫ್ರೀದದ್ದುಗಳಿಂದ ಮುಕ್ತ) ಎಂದು ಸೈಟೊಟಾಕ್ಸಿಸಿಟಿ ಟೆಸ್ಟಿಂಗ್ ಐಎಸ್‌ಒ 10993 ಮೂಲಕ ಪರೀಕ್ಷಿತಗೊಂಡಿವೆ.

City Today News 9341997936