
ಬೆಂಗಳೂರು, ಗಾಂಧಿಭವನ: ‘ಸ್ವಚ್ಚ ಪರಿಸರ’ ವಾರಪತ್ರಿಕೆಯ 10ನೇ ವಾರ್ಷಿಕೋತ್ಸವವು ಗಾಂಧಿಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳು ಹಾಗೂ ಸ್ಕೂಲ್ ಬ್ಯಾಗ್‌ಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಪತ್ರಿಕೆಯ ಸಂಪಾದಕರಾದ ಅರವಿಂದ್ ಯೋಗರಾಜು, ಗೌರವ ಸಂಪಾದಕರಾದ ಲಯನ್ ಆರ್. ವೆಂಕಟೇಶ್, ಉಪಸಂಪಾದಕ ಶ್ರೀನಿವಾಸ್, ಹಿರಿಯ ವೈದ್ಯ ಡಾ. ಅಂಜನಪ್ಪ, ರಘುನಾಥ್, ಹಯಾತ್ ಬೇಗ್ ಗಿರೀಶ್, ರವಿಶಂಕರ್, ಜಿ.ಎಸ್. ಗೋಪಾಲ್ ರಾಜ್, ಪ್ರವೀಣ್ ಜೆಕೆ, ರವಿಕುಮಾರ್ ಮೊದಲಾದವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಡಾ. ಅಂಜನಪ್ಪ, “ಪತ್ರಿಕೋದ್ಯಮವು ಸಮಾಜ ತಿದ್ದುವ ಶಕ್ತಿ ಹೊಂದಿದೆ. ಕೈತೊಳೆಯುವ ಸರಿಯಾದ ಅಭ್ಯಾಸದಿಂದ ಆರೋಗ್ಯ ರಕ್ಷಣೆ ಸಾಧ್ಯ. ಮಕ್ಕಳಿಗೆ ಕೈತೊಳೆಯುವ ಅರಿವು ನೀಡಬೇಕು. ರೈತ ದೇಶದ ಜೀವನಾಡಿ, ಅವರ ಮಕ್ಕಳಿಗೆ ವಿದ್ಯೆ ನೀಡಬೇಕು,” ಎಂದು ಹೇಳಿದರು.
ಅವರು ಇನ್ನೂ ಮುಂದುವರೆಸಿ, “ಮಹಾತ್ಮ ಗಾಂಧಿಜಿಯವರು ಸ್ವಚ್ಚತೆಯ ಮಹತ್ವವನ್ನು ಎತ್ತಿ ಹಿಡಿದವರು. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳ ನಿರ್ಮಾಣದ ಮೂಲಕ ಜನರ ಆರೋಗ್ಯದಲ್ಲಿ ಉತ್ತಮತೆ ಕಂಡುಬಂದಿದೆ. ನೊಣಗಳಿಂದ ಹರಡುವ ಸೋಂಕು ತಪ್ಪಿಸಲು ಆಹಾರ ಸ್ವಚ್ಛವಾಗಿರಬೇಕು” ಎಂಬುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ರಘುನಾಥ್ ಮಾತನಾಡುತ್ತಾ, “ಮನೆ, ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಬಡ ಮಕ್ಕಳಿಗೆ ವಿದ್ಯೆ ದೊರಕಿಸುವಂತೆ ದತ್ತತ್ವದ ಆಧಾರದಲ್ಲಿ ಶಿಕ್ಷಣ ನೀಡಬೇಕು,” ಎಂದು ಸಲಹೆ ನೀಡಿದರು.
ಪತ್ರಿಕೆಯ ಸಂಪಾದಕರಾದ ಅರವಿಂದ್ ಯೋಗರಾಜು, “ನಿವೃತ್ತ ಐಎಎಸ್ ಅಧಿಕಾರಿಯಾದ ಪುಟ್ಟರಂಗಪ್ಪ ಹಾಗೂ ಸಚಿವ ಶ್ರೀಧರ್ ರವರ ಮಾರ್ಗದರ್ಶನದಲ್ಲಿ ಈ ಪತ್ರಿಕೆ ಆರಂಭವಾಗಿ ಈಗ 10ನೇ ವರ್ಷವನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ಉತ್ತಮ ಸುದ್ದಿಯನ್ನು ನೀಡಿ ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಿರುವುದು ಹೆಮ್ಮೆಕಾರ್ಯ,” ಎಂದು ಅಭಿಪ್ರಾಯಪಟ್ಟರು.
City Today News
9341997936

You must be logged in to post a comment.