ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಮೂಹ ಜಾನಪದ ಗೀತೆಗಳ ಸ್ಪರ್ಧೆ

2024 ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ
ಭಾರತ ದೇಶದ ನಾಡಿನ ಮೂಲ ಸಂಸ್ಕೃತಿ ಜನಪದ ನಮ್ಮ ನೆಲ ಮೂಲ ಸಂಸ್ಕೃತಿಯನ್ನು ಇವತ್ತಿನ ಯುವ ಜನಾಂಗಕ್ಕೆ ಅವರ ಎದೆಗಳಲ್ಲಿ ಜನಪದಗೀತೆ ಬಿತ್ತುವುದಕ್ಕೆ ನಮ್ಮ ಸಂಸ್ಥೆಯಿಂದ ಸಮೂಹ ಜಾನಪದ ಗೀತೆಗಳ ಸ್ಪರ್ಧೆ ಮಾಡುತ್ತಿದ್ದೇವೆ. ಅದೇ ರೀತಿ ನಮ್ಮ ದೇಶದ ಭಕ್ತಿ ಮತ್ತು ಭಾವೈಕ್ಯತೆಯ ಪ್ರೇಮ ಬೆಳೆಸಿಕೊಳ್ಳುವುದಕ್ಕೆ ಪ್ರೌಢ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಮೂಹ ದೇಶಭಕ್ತಿ ಗೀತೆಯನ್ನು ಏರ್ಪಡಿಸಿದ್ದೇವೆ.

ಪ್ರೌಢಶಾಲಾ ಮಕ್ಕಳಿಗೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ. ಸಮೂಹಗಾನ, ಮತ್ತು ಜನಪದ ಗೀತೆ, ಸಮೂಹಗಾನವನ್ನು ಎರಡು ಸ್ಪರ್ಧೆಯನ್ನು” ಜುಲೈ 25 ಮತ್ತು 26, 2024 ರಂದು ಭಾಗವಹಿಸಿ, ಬಹುಮಾನ ಪಡೆಯುವ ಮುಖಾಂತರ ದೇಶಭಕ್ತಿ ಮತ್ತು ಜನಪದ ಗೀತೆ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ತಮ್ಮಲ್ಲಿ  ವಿನಂತಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆವೈಸಲ್ಲಿ ತಿಳಿಸಿದರು.

ಸ್ಥಳ.ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಕೆಂಗುಂಟೆ ಸರ್ಕಲ್, ಮಲ್ಲತ್ತಹಳ್ಳಿ.
ಬೆಂಗಳೂರು -560056
ಅಂಬೇಡ್ಕರ್ ಕಾಲೇಜ್ ಸರ್ಕಲ್ ಹತ್ತಿರ.

ಸಂಚಾಲಕರು – ಅಪ್ಪಗೆರೆ ತಿಮ್ಮರಾಜು 
ಧನ್ಯವಾದಗಳು
ಸಂಪರ್ಕಕ್ಕೆ: 9448086269

City Today News 9341997936