ಲೋಕಾಯುಕ್ತ ಡಿವೈಎಸ್ಪಿ ಎಂದು ಸರ್ಕಾರಿ ನೌಕರರನ್ನು ಹೆದರಿಸಿ, ಹಣ ವಸೂಅ ಮಾಡುತ್ತಿದ್ದ ಆರೋಪಿಯ ಬಂಧನ.

ವಿಧಾನಸೌಧ ಪೊಲೀಸರ ಕಾರ್ಯಾಚರಣೆ.

ಲೋಕಾಯುಕ್ತ ಡಿವೈಎಸ್ಪಿ ಎಂದು ಸರ್ಕಾರಿ ನೌಕರರನ್ನು ಹೆದರಿಸಿ, ಹಣ ವಸೂಅ ಮಾಡುತ್ತಿದ್ದ ಆರೋಪಿಯ ಬಂಧನ.

ವಿಶಾಲ್ ಪಾಟೀಲ್ ಎಂಬುವವನು ತಾನು ಕರ್ನಾಟಕ ಲೋಕಾಯುಕ್ತ ಡಿ.ವೈ.ಎಸ್.ಪಿ ಎಂದು ಸರ್ಕಾರಿ ನೌಕರರುಗಳಿಗೆ ಕರೆ ಮಾಡಿ, ನಿಮ್ಮ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿಗಳಿಗೆ ಸಂಬಂಧಪಟ್ಟ ಮಾಹಿತಿಗಳುಳ್ಳ ಕೇಸಿನ ಕಡತ ನನ್ನ ಬಳಿ ಇದೆ ಎಂದು ಬೆದರಿಕೆ ಹಾಕಿ, ಕೇಸನ್ನು ಮುಕ್ತಾಯ ಮಾಡಲು ಹಣ ನೀಡಬೇಕು. ಇಲ್ಲದಿದ್ದರೆ, ನಿಮ್ಮ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುತ್ತೇನೆಂದು ಸುಳ್ಳು ಹೇಳಿ ಹಣಕ್ಕೆ ಒತ್ತಾಯ ಮಾಡುತ್ತಿದ್ದ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರ್ಯೊನ್ಯುಖರಾದ ವಿಧಾನಸೌಧ ಪೊಲೀಸ್ ಠಾಣಿ ಮೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿ, ಆರೋಪಿಯನ್ನು ವಿಚಾರಣಿಗೆ ಒಳಪಡಿಸಿದಾಗ ಆತನು ಸರ್ಕಾರಿ ನೌಕರರ ಬಳಿ ಹೋಗಿ ಹೆದರಿಸಿ, ಹಣವನ್ನು ಪಡೆದುಕೊಂಡು ಬರುತ್ತಿದ್ದಾಗಿ, ತನಿಖಾ ಸಮಯದಲ್ಲಿ ಕಂಡು ಬಂದಿರುತ್ತದೆ. ಲೋಕಾಯುಕ್ತ ಡಿ.ವೈ.ಎಸ್.ಪಿ ಎಂದು ಕರೆ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯು ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿರುತ್ತದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಶ್ರೀ. ಶ್ರೀನಿವಾನಗೌಡ ಆರ್, ಉವ ಮೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ, ಶ್ರೀ. ಸಿ.ಬಾಲಕೃಷ್ಣ, ಸಹಾಯಕ ಮೊಅಸ್ ಆಯುಕ್ತರು, ಕಬ್ಬನ್ ಪಾರ್ಕ್ ಉಪ ವಿಭಾಗ ರವರ ನೇತೃತ್ವದಲ್ಲಿ ಎಸ್.ಪಿ. ಕುಮಾರಸ್ವಾಮಿ, ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿರವರ ತಂಡ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.

City Today News 9341997936