‘ಹಳ್ಳಿ ಪವರ್’ ಹೊಸ ವೇಳೆಗೆ ಘೋಷಣೆ — ಈಗಿನಿಂದ ಪ್ರತಿದಿನ ರಾತ್ರಿ 8:30ಕ್ಕೆ ಜೀ ಪವರ್‌ನಲ್ಲಿ

ಬೆಂಗಳೂರು, ನವೆಂಬರ್ 11, 2025:
ಕನ್ನಡದ ಹೊಸ ಮನರಂಜನಾ ಚಾನೆಲ್ ಜೀ ಪವರ್ ನಲ್ಲಿ ಅಕುಲ್ ಬಾಲಾಜಿ ನಿರೂಪಣೆಯೊಂದಿಗೆ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಹಳ್ಳಿ ಪವರ್ ಇದೀಗ ವೀಕ್ಷಕರ ಬೇಡಿಕೆಗೆ ತಕ್ಕಂತೆ ಹೊಸ ವೇಳೆಯಲ್ಲಿ ಒಂದೂವರೆ ಗಂಟೆಗಳ ಪ್ರಸಾರಕ್ಕೆ ಬದಲಾಗಿದೆ. ಇನ್ನು ಮುಂದೆ ಶೋ ಪ್ರತಿದಿನ ರಾತ್ರಿ 8:30ರಿಂದ 10 ಗಂಟೆಯವರೆಗೆ ಪ್ರಸಾರವಾಗಲಿದೆ.

ನಗರ ಜೀವನಕ್ಕೆ ಹೊಂದಿಕೊಂಡಿರುವ ಯುವತಿಯರು ಹಳ್ಳಿ ಸಂಸ್ಕೃತಿ, ಹಳ್ಳಿಯ ದೈನಂದಿನ ಕೆಲಸಗಳು ಮತ್ತು ನೈಸರ್ಗಿಕ ಜೀವನಶೈಲಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದು ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ. ಸ್ಪರ್ಧಿಗಳಿಗೆ ಹಳ್ಳಿಯ ನಿಜವಾದ ಕೆಲಸಗಳನ್ನು ಟಾಸ್ಕ್‌ಗಳ ರೂಪದಲ್ಲಿ ನೀಡಲಾಗುತ್ತಿದ್ದು, ದಿನದಿಂದ ದಿನಕ್ಕೆ ಅವುಗಳ ಕಠಿಣತೆ ಹೆಚ್ಚುತ್ತಿದೆ. ಈ ಬದಲಾವಣೆ ವೀಕ್ಷಕರ ಕುತೂಹಲವನ್ನು ಇನ್ನಷ್ಟು ಎಚ್ಚರಿಸಿದೆ.

ರಗಡ್ ರಶ್ಮಿ, ಸೋನಿಯಾ ಜೋಸೆಫ್, ಟೆಲಿನ್ ಮಹಿಮಾ, ಗಾನವಿ ಗೌಡ, ಕಾವ್ಯ, ಗಗನಾ ಮೂರ್ತಿ, ದಿಯಾ ಅರಸ್, ಮೋನಿಷಾ ಪುಟ್ಟಮದು, ಫರೀನ್, ಕವನಾ, ಧನ್ಯ ಮತ್ತು ಸಿಂಚನ ಸೇರಿದಂತೆ 12 ಸ್ಪರ್ಧಿಗಳು ಈ ಶೋನಲ್ಲಿ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. ಈಗಾಗಲೇ ಹಲವು ವಾರಗಳ ಪ್ರಸಾರ ಕಳೆದಿರುವ ಹಳ್ಳಿ ಪವರ್, ನಿರಂತರವಾಗಿ ಹೊಸ ಟಾಸ್ಕ್‌ಗಳು ಮತ್ತು ಸನ್ನಿವೇಶಗಳ ಮೂಲಕ ಮನರಂಜನೆಯನ್ನು ಹೆಚ್ಚಿಸುತ್ತಿದೆ.

ಅಂತಿಮವಾಗಿ ‘ಹಳ್ಳಿ ಪವರ್’ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲವು ಈಗ ತಾರಕಕ್ಕೇರಿದ್ದು, ಸ್ಪರ್ಧಿಗಳ ಪ್ರದರ್ಶನವೇ ನಿರ್ಣಾಯಕವಾಗಲಿದೆ.

ಎಲ್ಲಾ ನಾಟಕೀಯ ಕ್ಷಣಗಳು ಮತ್ತು ಟಾಸ್ಕ್‌ಗಳ ರಸಮಂಜರಿಯನ್ನು ಮಿಸ್ ಮಾಡದೇ ನೋಡಲು ಹಳ್ಳಿ ಪವರ್ ಅನ್ನು ಪ್ರತಿದಿನ ರಾತ್ರಿ 8:30ಕ್ಕೆ ಜೀ ಪವರ್‌ನಲ್ಲಿ ನೋಡಿ.

City Today News 9341997936