ಹೆಚ್.ಕಾಂತರಾಜು ರವರ ನೇತೃತ್ವದಲ್ಲಿ 2019 ರಲ್ಲಿ ನಡೆದ ಸಮೀಕ್ಷೆಯ ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಲು ನಮ್ಮ ಸಮಾಜದ ವತಿಯಿಂದ ಹಲವಾರು ಬಾರಿ ಮನವಿ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಹೆಚ್.ಕಾಂತರಾಜು ರವರ ನೇತೃತ್ವದಲ್ಲಿ 2019 ರಲ್ಲಿ ನಡೆದ ಸಮೀಕ್ಷೆಯ ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಲು ನಮ್ಮ ಸಮಾಜದ ವತಿಯಿಂದ ಹಲವಾರು ಬಾರಿ ಮನವಿಯನ್ನು ಸಲ್ಲಿಸಿರುತ್ತೇವೆ. ಆದರೂ ಸಹ ಸರ್ಕಾರವು ಇದುವರೆವಿಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಲು ಇಚ್ಚಿಸುವುದೇನೆಂದರೆ ಈ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಗೆ ಸಂಬಂಧಿಸಿದಂತೆ ಒಟ್ಟು 55 ಅಂಶಗಳ ಮಾಹಿತಿಯನ್ನು ಅಂದರೆ ಜಾತಿ ಗಣತಿಯ ಜೊತೆಗೆ ಶೈಕ್ಷಣಿಕ, ಔದ್ಯೋಗಿಕ, ಉದ್ಯೋಗ, ಕೌಟುಂಬಿಕ ಸ್ತಿರಾಸ್ತಿ, ಚರಾಸ್ತಿ, ಆದಾಯ ತೆರಿಗೆ ಪಾವತಿದಾರರೆ ಅಲ್ಲವೆ, ಅವರು ವಾಸ ಮಾಡುತ್ತಿರುವ ಮನೆ – ಸ್ವಂತ ಅಥವಾ ಬಾಡಿಗೆ ಮನೆಯೇ ಪಕ್ಕ ಮನೆಯೇ, ಅಥವಾ ಶೀಟ್ ಮನೆಯೇ, 9 ಅವರ ವಿದ್ಯಾಭ್ಯಾಸದ ಮಟ್ಟ, ಇವರು ಸರ್ಕಾರಿ ಕೆಲಸದಲ್ಲಿದ್ದಾರೆಯೇ ಅಥವಾ ಖಾಸಗಿ ಕೆಲಸದಲ್ಲಿದ್ದಾರೆಯೇ, ಇವರ ಮೀಸಲಾತಿ ಸೌಲಭ್ಯವನ್ನು ಪಡೆದುಕೊಂಡಿದ್ದಾರೆಯೇ ಇಲ್ಲವೆ, ಇವರು ರಾಜಕೀಯವಾಗಿ ಇವರ ರಾಜಕೀಯ ಸ್ಥಾನಮಾನವೇನು, ಯಾವ ಹುದ್ದೆಯನ್ನು ಹೊಂದಿದ್ದಾರೆಯೇ, ಎಂ.ಪಿ.ಎಂ.ಎಲ್.ಎ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸದಸ್ಯರೆ, ಅಥವಾ ಇನ್ಯಾವುದೇ ಸರ್ಕಾರಿ ನಿಗಮ ಮಂಡಳಿಗಳಲ್ಲಿ ಸ್ಥಾನ ಮಾನ ಹೊಂದಿದ್ದಾರೆಯೇ, ಮುಂತಾದ ಹಲವಾರು ವಿಷಯಗಳನ್ನು ಮನೆ ಮನೆಗೂ ಹೊಗಿ ಮಾಹಿತಿ ಪಡೆಯಲೂ 1,33.410, (ಒಂದು ಲಕ್ಷದ ಮೂವತ್ತು ಮೂರು ಸಾವಿರದ ನಾಲ್ಕು ನೂರ ಹತ್ತು ಸರ್ಕಾರಿ ಶಾಲಾ ಶಿಕ್ಷಕರು) ಗಣತಿದಾರರನ್ನು, 22189 (ಇಪ್ಪತ್ತೇರಡು ಸಾವಿರದ ಒಂದು ನೂರ ಎಂಭತ್ತೊಂಬತ್ತು ಸರ್ಕಾರಿ ಶಾಲಾ ಮುಖ್ಯೋಪಾದ್ಯಯರು) ತರಬೇತುದಾರರು 7118 (ಎಳು ಸಾವಿರದ ಒಂದು ನೂರ ಹದಿನೆಂಟು) ನೇಮಿಸಿ ಮಾಹಿತಿಯನ್ನು ಪಡೆಯಲಾಗಿದೆ. ಇವರೆಲ್ಲರೂ ಸರ್ಕಾರಿ ಶಾಲೆಗಳ ಸಿಬ್ಬಂದಿ. ಇದರಲ್ಲಿ ಡಿ.ಸಿ. ತಹಶಿಲ್ದಾರ್ ಹಾಗೂ ಇತರೆ ಸಿಬ್ಬಂದಿಗಳು ಸಹ ಇದರಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

ಈ ಸಮೀಕ್ಷೆಯ ಕೆಲಸಕ್ಕೆ ಒಟ್ಟು 158 ಕೋಟಿ ವೆಚ್ಚ ಮಾಡಲಾಗಿದೆ. ಈ ಸಮೀಕ್ಷೆಯು ಪ್ರತಿಷ್ಟಿತ ಸಂಸ್ಥೆಯಾದ ಇಂಡಿಯನ್ ಇನ್ಸೂಟ್ಯೂಟ್ ఆఫ్ ಮ್ಯಾನೆಜೆಮೆಂಟ್ ಪರಿಶೀಲಿಸಿ ಈ ಎಲ್ಲಾ ಅಂಶಗಳನ್ನು ಬಳಕೆ ಮಾಡಲು ಬಹಳ ವೈಜ್ಞಾನಿಕ ಹಾಗೂ ಅರ್ಹವಾದವುಗಳೆಂದು ಧೃಡೀಕರಿಸಿದೆ. ಇದಲ್ಲದೆ ಆಯೋಗವು ಸೆಕೆಂಡರಿ ಮೂಲದಿಂದ ಸರ್ಕಾರದ ಎಲ್ಲಾ ಇಲಾಖೆಗಳಿಂದ ಮಾಹಿತಿ ಪಡೆದು ಯಾವ ಯಾವ ಜಾತಿಯಲ್ಲಿ ಎಷ್ಟು ಜನ ನೌಕರರು ಇದ್ದಾರೆ ಎಂಬ ಮಾಹಿತಿಯನ್ನು ಪಡೆದು ವೈಜ್ಞಾನಿಕವಾಗಿ ಈ ವರದಿಯನ್ನು ತಯಾರಿಸಿರುವುದಾಗಿ ತಿಳಿದುಬಂದಿದೆ. ಸರ್ಕಾರಿ ಆದೇಶದ ಪ್ರಕಾರ ಪ್ರತಿ 10 ವರ್ಷಗಳಿಗೊಮ್ಮೆ ಜಾತಿ ಗಣತಿಯನ್ನು ಮಾಡಬೇಕಿತ್ತು, ಅದರಂತೆ ಮೀಸಲಾತಿ ಸೌಲಭ್ಯವನ್ನು ಪರಿಷ್ಕರಣೆ ಮಾಡುವ ಅಗತ್ಯವಿದೆ, ಆದ್ದರಿಂದ ಕಾಂತರಾಜು ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಬೇಕೆಂದು ಕೋರುತ್ತೇವೆ. ಇದಲ್ಲದೆ ಹಿಂದುಳಿದ ಹಾಗೂ ಶೋಷಿತ ವರ್ಗಗಳು ಮುಂದಿನ ತಿಂಗಳು ಕೊನೆಯ ವಾರದಲ್ಲಿ ನಡೆಸುವ ಅಹಿಂದ ಸಮಾವೇಶಕ್ಕೆ ಮಡಿವಾಳ ಸಮಾಜವು ಸಹ ಸಕ್ರಿಯವಾಗಿ ಭಾಗವಹಿಸಲಿದೆ ಎಂಬುದಾಗಿ ತಿಳಿಸಲು ಇಚ್ಚಿಸುತ್ತೇವೆ ಎಂದು       

ಸಿ. ನಂಜಪ್ಪ-ರಾಜ್ಯಾಧ್ಯಕ್ಷರು & ಜಿ.ಆರ್.ಪ್ರಕಾಶ್ ಪ್ರಧಾನ ಕಾರ್ಯದರ್ಶಿಗಳು
ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936