ಹೊಸ ಬಿಷಪ್ ವಿನ್ಸೆಂಟ್ ವಿನೋದ್ ಕುಮಾರ್‌ಗೆ ಕೆಪಿಸಿಸಿ ಉಪಾಧ್ಯಕ್ಷರಿಂದ ಗೌರವಾರ್ಪಣೆ

ಬೆಂಗಳೂರು: ಕರ್ನಾಟಕ ಸೆಂಟ್ರಲ್ ಡಯಾಸಿಸ್‌ನ ಸಿಎಸ್‌ಐ ನೂತನ ಬಿಷಪ್ ಆಗಿ ನೇಮಕಗೊಂಡಿರುವ ರೆವರೆಂಡ್ ಡಾ. ವಿನ್ಸೆಂಟ್ ವಿನೋದ್ ಕುಮಾರ್ ಅವರನ್ನು ಗೌರವಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಉಪಾಧ್ಯಕ್ಷ ಡಾ. ಯೂನಸ್ ಜೋನ್ಸ್ ಹೂಗುಚ್ಛ ನೀಡಿ ಅಭಿನಂದಿಸಿದರು.

ಗೌರವ ಸ್ವೀಕರಿಸಿದ ನಂತರ ಬಿಷಪ್ ಡಾ. ವಿನ್ಸೆಂಟ್ ವಿನೋದ್ ಕುಮಾರ್ ಅವರು, ಸಮಾಜ ಸೇವೆ ಮತ್ತು ಆತ್ಮೀಯ ಮಾರ್ಗದರ್ಶನದಲ್ಲಿ ತಾವು ತೊಡಗಿಸಿಕೊಂಡು, ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರೆವರೆಂಡ್ ಡಾ. ಜಯ ನೇಸನ್, ಹಿರಿಯ ಪತ್ರಕರ್ತ ದಿನಕರ ವೇಲು ಹಾಗೂ ಹಲವು ಗಣ್ಯರು ಭಾಗವಹಿಸಿ, ಹೊಸ ಬಿಷಪ್‌ರ ನೇಮಕಕ್ಕೆ ಹಾರೈಸಿದರು.


City Today News 9341997936