
12ನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಇದೇ ವರ್ಷ ಆಗಸ್ಟ್ 30, 31 ಮತ್ತು ಸೆಪ್ಟೆಂಬರ್ 1ರಂದು ರಿಚ್ಚಂಡ್, ವರ್ಜೀನಿಯದಲ್ಲಿ ನಡೆಯಲಿದೆ. ಕರ್ನಾಟಕದ ಹೊರಗಡೆ ನಡೆಯುತ್ತಿರುವ ಅತಿ ದೊಡ್ಡ ಕನ್ನಡದ ಉತ್ಸವ ಈ ಬಾರಿಯ ‘ಅಕ್ಕ ಸಮ್ಮೇಳನ’ ಎಂದು ತಿಳಿಸಲು ಹರ್ಷವೆನಿಸುತ್ತಿದೆ.

ಅಮೇರಿಕದ ರಾಜಧಾನಿ ನಗರವಾದ ವಾಷಿಂಗ್ಟನ್ ಡಿ.ಸಿ’ಯಿಂದ ದಕ್ಷಿಣಾಭಿಮುಖವಾಗಿ ಸುಮಾರು 110 ಮೈಲು ದೂರದಲ್ಲಿರುವ, ವರ್ಜೀನಿಯಾ ರಾಜ್ಯದ ರಾಜಧಾನಿ ರಿಚ್ಚಂಡ್ ನಗರದಲ್ಲಿ 12 ನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಸುವ ಸಮ್ಮೇಳನಕ್ಕೆ ಈ ಬಾರಿ ವಿಶ್ವದ ಎಲ್ಲಾ ಕಡೆಗಳಿಂದ ಸುಮಾರು ನಾಲ್ಕರಿಂದ ಐದು ಸಾವಿರ ಕನ್ನಡಿಗರು ಒಂದು ಸೂರಿನ ಕೆಳಗೆ ಬಂದು ಸೇರಲಿದ್ದಾರೆ. ವಿಶ್ವ ಕನ್ನಡ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲು ಸಂಭ್ರಮದ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ.

ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕದಿಂದ ಮತ್ತು ಅಮೇರಿಕಾದ ಎಲ್ಲ ರಾಜ್ಯಗಳಿಂದ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳು, ಕರ್ನಾಟಕದ ವಿವಿಧ ರುಚಿಯಾದ ತಿಂಡಿ ಮತ್ತು ಊಟಗಳು., ವಿವಿಧ ವಾಣಿಜ್ಯ ಮತ್ತು ವ್ಯಾಪಾರ ಮೇಳ ಹಾಗೂ ಮಳಿಗೆಗಳು, ಕಲೆ ಮತ್ತು ಸಾಹಿತ್ಯ ವೇದಿಕೆಗಳು, ಮಹಿಳಾ ವೇದಿಕೆ, ಯುವ ವೇದಿಕೆ, ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳ ಮಹಾಸಂಗಮ, ಅಕ್ಕ ಸಂಸ್ಥೆಯ ವಿವಿಧ ಕ್ರೀಡಾ ಕೂಟಗಳು, ಅಕ್ಕ ಐಡಲ್, Continuing Medical Education, ಪರಿಣಯ ವೇದಿಕೆ, ಆರೋಗ್ಯ ಮತ್ತು ಆಧ್ಯಾತ್ಮಿಕ ವೇದಿಕೆಗಳೇ ಮೊದಲಾದವು ನಮ್ಮ ಅಕ್ಕ ಸಮ್ಮೇಳನದ ಈ ಬಾರಿಯ ಕೆಲವು ವಿಶೇಷ ಆಕರ್ಷಣೆಗಳು.

ತಮ್ಮನ್ನೂ, ತಮ್ಮ ಕುಟುಂಬವನ್ನೂ ಅತಿ ಅದ್ದೂರಿ ‘ಅಕ್ಕ’ ಸಮ್ಮೇಳನಕ್ಕೆ ಗೌರವಪೂರ್ವಕವಾಗಿ ಮತ್ತು ಪ್ರೀತಿಯಿಂದ ಆಮಂತ್ರಣ ನೀಡುತ್ತಿದ್ದೇವೆ ಎಂದು ರವಿ ಬೋರೇಗೌಡ, ‘ಅಕ್ಕ’ ಅಧ್ಯಕ್ಷರು,ಮಾದೇಶ ಬಸವರಾಜು, ‘ಅಕ್ಕ’ ಕಾರ್ಯದರ್ಶಿ,ವತ್ಸ ರಾಮನಾಥನ್ ,ಕವಿತಾ ರಾಮಣ್ಣ ಮತ್ತು ಡಿ. ತಿಮ್ಮಪ್ಪ ನವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸುದರು..
City Today News 9341997936

You must be logged in to post a comment.